ಟ್ಯಾಟೂಗಾಗಿ 20 ಲಕ್ಷ ರೂ. ಖರ್ಚು ಮಾಡಿದ ಬ್ರಿಟಿಷ್‌ ಮಹಿಳೆ!

First Published | Mar 20, 2021, 3:13 PM IST

ಇಂಗ್ಲೆಂಡ್‌ನ ಹೀತ್‌ಫೀಲ್ಡ್‌ನಲ್ಲಿ (Heathfield) ವಾಸಿಸುವ ಬೆಥನಿ ಮೂರ್ (Bethany Moore) ತನ್ನ ಇಡೀ ದೇಹಕ್ಕೆ ಹಚ್ಚೆ ಹಾಕಿಸಿಕೊಂಡಿದ್ದಾರೆ. ಅವರ ದೇಹದ ಪ್ರತಿ ಇಂಚಿಗೂ ಹಚ್ಚೆ ಹಾಕಿಸಿಕೊಂಡಿದ್ದು, ಈ ಬಾಡಿ ಆರ್ಟ್‌ಗಾಗಿ ಇದುವರೆಗೆ 20 ಲಕ್ಷ ರೂ.ಗೂ ಹೆಚ್ಚು ಖರ್ಚು ಮಾಡಿದ್ದಾರೆ. ಈ ಹುಚ್ಚಿಗಾಗಿ ಜನರು ಇವರನ್ನು ಗೇಲಿ ಮಾಡುತ್ತಿದ್ದಾರೆ. ಬೆಥನಿ ಮೂರ್ ಪೋಟೋಗಳು ಸಖತ್‌ ವೈರಲ್ ಆಗುತ್ತಿವೆ.

ಬೆಥನಿ ಈವರೆಗೆ ಟ್ಯಾಟೂಗಳಿಗಾಗಿ 20 ಲಕ್ಷ ರೂ.ಗೂ ಹೆಚ್ಚು ಹಣ ಖರ್ಚು ಮಾಡಿದ್ದಾರೆ. ಹೆಚ್ಚು ಟ್ಯಾಟೂ ಹಾಕಿಸಿಕೊಳ್ಳುವುದರಿಂದ, ಅವರ ಆತ್ಮವಿಶ್ವಾಸ ಹೆಚ್ಚಾಗುತ್ತದೆಯಂತೆ.
ಬೆಥನಿ ತನ್ನ 18ನೇ ವಯಸ್ಸಿನಲ್ಲಿ ಜೀವನದ ಮೊದಲ ಹಚ್ಚೆ ಹಾಕಿಸಿಕೊಂಡರು. ಅವರ ಮೊದಲ ಹಚ್ಚೆ ಅವರ ಪ್ರೀತಿಯ ನಾಯಿಗೆ ಸಂಬಂಧಿಸಿದ್ದಾಗಿತ್ತು.ತಮ್ಮರಿಬ್‌ಕೆಜ್‌ನಲ್ಲಿ ಫಸ್ಟ್‌ ಟ್ಯಾಟೂ ಹಾಕಿಸಿಕೊಂಡಿದ್ದರು.
Tap to resize

ಈಗ 26 ವರ್ಷದ ಬೆಥನಿ ತನ್ನ ದೇಹ ಪೂರ್ತಿ ಹಚ್ಚೆ ಹಾಕಿಸಿಕೊಂಡಿದ್ದಾರೆ. ಜೊತೆಗೆ, 15 ಬಾರಿ ಪಿಯರ್ಸಿಂಗ್‌ ಮಾಡಿಸಿಕೊಂಡಿದ್ದಾರೆ. 7 ಅವರ ಕಿವಿಗಳ ಮೇಲಾದರೆ ಉಳಿದವು ನಾಲಿಗೆಯ ಮೇಲೆ ಪಿಯರ್ಸಿಂಗ್‌ ಮಾಡಿಸಿಕೊಂಡಿದ್ದಾರೆ.
ಇವರ ದೇಹ ಪೂರ್ತಿ ಹಚ್ಚೆ ಹಾಸಿಕೊಳ್ಳಲು ಸರಿ ಸುಮಾರಿ 120 ಗಂಟೆಗಳ ಕಾಲ ತೆಗೆದುಕೊಂಡಿದೆಯಂತೆ.
ಹಚ್ಚೆಗಳಿಂದ ತನ್ನ ಆತ್ಮವಿಶ್ವಾಸ ಹೆಚ್ಚುತ್ತದೆ ಎನ್ನುವ ಬೆಥನಿ ಈಗ ಜನರಿಂದ ಸಾಕಷ್ಟು ಅಪಹಾಸ್ಯಗಳಿಗೆ ಗುರಿಯಾಗುತ್ತಿದ್ದಾರೆ.
ಬಾಡಿ ಪೂರ್ತಿ ಹಚ್ಚೆ ಹಾಕಿಸಿಕೊಂಡಿರುವ ಬೆಥನಿಯನ್ನು ಟ್ರೋಲ್ ಮಾಡಿದ್ದಾರೆ. ಆದರೆ ಇದರಿಂದ ನನಗೆ ಯಾವುದೇ ವ್ಯತ್ಯಾಸವಾಗುವುದಿಲ್ಲ, ಎನ್ನುತ್ತಾರೆ ಬೆಥನಿ. ತಮ್ಮ ದೇಹದ ಬಗ್ಗೆ ಯಾವುದೇ ಕೀಳರಿಮೆಯೂ ಇಲ್ಲ. ಇನ್ನೂ ಅನೇಕ ಹಚ್ಚೆಗಳನ್ನು ಮಾಡಿಸಿಕೊಳ್ಳುತ್ತೇನೆ ಎಂದಿದ್ದಾರೆ ಬೇಥನಿ.
ಆದರೆ, ಈಗ ಅವರ ದೇಹದಲ್ಲಿ ಟ್ಯಾಟುಗಳಿಗಾಗಿ ಯಾವುದೇ ಜಾಗ ಉಳಿದಿಲ್ಲ. ಅವರ ದೇಹದಲ್ಲಿ ಮುಖ ಮಾತ್ರ ಉಳಿದಿದೆ.

Latest Videos

click me!