ಭಾರತದ ಎರಡನೇ ಶ್ರೀಮಂತ ವ್ಯಕ್ತಿ ಗೌತಮ್ ಅದಾನಿಯ ಪತ್ನಿ, ಪ್ರೀತಿ ಅದಾನಿ ಇಷ್ಟೊಂದು ಓದಿದ್ದಾರ?

Published : Nov 26, 2023, 06:09 PM ISTUpdated : Nov 26, 2023, 06:18 PM IST

ಗೌತಮ್ ಅದಾನಿಯವರ ಯಶಸ್ಸಿನ ಹಿಂದೆ ಅವರ ಪತ್ನಿ ಪ್ರೀತಿ ಅದಾನಿ ಪಾತ್ರ ದೊಡ್ಡದಿದೆ. ಪ್ರೀತಿ ಅದಾನಿ ಪ್ರಸ್ತುತ ಅದಾನಿ ಫೌಂಡೇಶನ್‌ನ ಅಧ್ಯಕ್ಷರಾಗಿದ್ದಾರೆ. ಆದರೆ ಅವರ ವಿದ್ಯಾಭ್ಯಾಸದ ಬಗ್ಗೆ ನಿಮಗೆ ಗೊತ್ತಿದ್ಯಾ?

PREV
17
ಭಾರತದ ಎರಡನೇ ಶ್ರೀಮಂತ ವ್ಯಕ್ತಿ ಗೌತಮ್ ಅದಾನಿಯ ಪತ್ನಿ, ಪ್ರೀತಿ ಅದಾನಿ ಇಷ್ಟೊಂದು ಓದಿದ್ದಾರ?

ಭಾರತದ ಅತೀ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವುದು ಗೌತಮ್‌ ಅದಾನಿ. ರಾಜಕೀಯವಾಗಿಯೂ, ಆರ್ಥಿಕ ಕ್ಷೇತ್ರದಲ್ಲೂ, ಶ್ರೀಮಂತಿಕೆಯ ವಿಚಾರದಲ್ಲಿ ಜನಸಾಮಾನ್ಯರ ನಡುವೆಯೂ ಹೆಚ್ಚು ಚಾಲ್ತಿಯಲ್ಲಿರುವ ಹೆಸರು. ಗೌತಮ್ ಅದಾನಿ ಅದಾನಿ ಗ್ರೂಪ್‌ನ ಮುಖ್ಯಸ್ಥರು. 

27

ಫೋರ್ಬ್ಸ್ ಪ್ರಕಾರ ಗೌತಮ್ ಅದಾನಿ, 48.9 ಬಿಲಿಯನ್ ಡಾಲರ್ ಸಂಪತ್ತನ್ನು ಹೊಂದಿದ್ದಾರೆ. ಆದರೆ ಅವರ ಪತ್ನಿ ಪ್ರೀತಿ ಅದಾನಿ ಕೂಡ ಕಡಿಮೆ ಶ್ರೀಮಂತರಲ್ಲ. ಗೌತಮ್ ಅದಾನಿಯವರ ಯಶಸ್ಸಿನ ಹಿಂದೆ ಅವರ ಪತ್ನಿ ಪ್ರೀತಿ ಅದಾನಿ ಪಾತ್ರ ದೊಡ್ಡದಿದೆ. ಪ್ರೀತಿ ಅದಾನಿ ಪ್ರಸ್ತುತ ಅದಾನಿ ಫೌಂಡೇಶನ್‌ನ ಅಧ್ಯಕ್ಷರಾಗಿದ್ದಾರೆ. ಉದ್ಯಮಿ ಆಗಿರುವುದರ ಜೊತೆಗೆ ಪ್ರೀತಿ ಗೌತಮ್ ಅದಾನಿ ದಂತವೈದ್ಯರೂ ಆಗಿದ್ದರು.

37

ಪ್ರತಿ ಸಾಧಕ ವ್ಯಕ್ತಿಯ ಹಿಂದಿನ ಪ್ರೇರಣೆಯಾಗಿ ಸ್ತ್ರೀ ಇರುತ್ತಾಳೆ ಎಂಬ ಮಾತಿದೆ. ಇದು ಗೌತಮ್‌ ಅದಾನಿ ಪಾಲಿಗೆ ಇದು ಅಕ್ಷರಶಃ ನಿಜವಾಗಿದೆ. ಏಕೆಂದರೆ, ಪತಿಯ ಯಶಸ್ಸಿಗಾಗಿ ತಮ್ಮ ವೃತ್ತಿಯನ್ನು ದೂರವಿಟ್ಟ ಮಹಿಳೆ ಪ್ರೀತಿ ಅದಾನಿ.  ಮದುವೆಯ ಬಳಿಕ ಪ್ರೀತಿ ಅವರು ತಮ್ಮ ಪತಿಗಾಗಿ ವೈದ್ಯ ವೃತ್ತಿಯನ್ನು (Profession) ಕೈಬಿಟ್ಟು ಅದಾನಿ ಫೌಂಡೇಷನ್‌ ಮುಖ್ಯಸ್ಥೆಯಾಗಿ ಜವಾಬ್ದಾರಿ ವಹಿಸಿಕೊಂಡರು.

47

ವ್ಯವಹಾರವನ್ನು ಪ್ರೀತಿ ಅದಾನಿ ಅಚ್ಚುಕಟ್ಟಾಗಿ ನಿಭಾಯಿಸ್ತಾರೆ. 36 ವರ್ಷಗಳಿಗಿಂತ ಹೆಚ್ಚು ಕಾಲವಾಯಿತು. 'ನಾನು ನನ್ನ ವೃತ್ತಿಯನ್ನು ತೊರೆದೆ. ಅದಾನಿಯವರೊಂದಿಗೆ ಹೊಸ ಹೆಜ್ಜೆ ಹಾಕಿದೆ. ಆದರೆ, ಇಂದು ಹಿಂತಿರುಗಿ ನೋಡಿದಾಗ ಈ ಬಗ್ಗೆ ಹೆಮ್ಮೆ ಎನಿಸುತ್ತದೆ' ಎಂದು ಹೇಳಿಕೊಂಡಿದ್ದರು ಮಾಧ್ಯಮ ವರದಿಗಳ ಪ್ರಕಾರ, ಅವರು 1 ಬಿಲಿಯನ್ ಡಾಲರ್ ಸಂಪತ್ತನ್ನು ಹೊಂದಿದ್ದಾರೆ. 

57

ಪ್ರೀತಿ ಮತ್ತು ಗೌತಮ್ ಅದಾನಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಇಬ್ಬರೂ ಪುತ್ರರು. ಅದಾನಿ ಗ್ರೂಪ್‌ನಲ್ಲಿ ವಿಭಿನ್ನ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. 2020 ರಲ್ಲಿ ಗೌತಮ್ ಅದಾನಿ 400 ಕೋಟಿ ಮೌಲ್ಯದ ಮನೆಯನ್ನು ಖರೀದಿಸಿದ್ದರು. ಗೌತಮ್ ಅದಾನಿ ಬೊಂಬಾರ್ಡಿಯರ್, ಬೀಚ್‌ಕ್ರಾಫ್ಟ್ ಮತ್ತು ಹಾಕರ್‌ನಂತಹ ವಿಮಾನಗಳನ್ನು ಹೊಂದಿದ್ದಾರೆ.

67

1965 ರಲ್ಲಿ ಮುಂಬೈನ ಗುಜರಾತಿ ಕುಟುಂಬದಲ್ಲಿ ಜನಿಸಿದ ಪ್ರೀತಿ ಅದಾನಿ ಅಹಮದಾಬಾದ್‌ನ ಸರ್ಕಾರಿ ದಂತ ವೈದ್ಯಕೀಯ ಕಾಲೇಜಿನಲ್ಲಿ ದಂತ ಶಸ್ತ್ರಚಿಕಿತ್ಸೆಯಲ್ಲಿ ಪದವಿ ಪಡೆದರು. ಗೌತಮ್ ಅದಾನಿಯನ್ನು ಮದುವೆಯಾದ ನಂತರ, ಅವರು 1996 ರಲ್ಲಿ ಅದಾನಿ ಫೌಂಡೇಶನ್‌ನ ಅಧ್ಯಕ್ಷರಾದರು. ಅದಾನಿ ಗ್ರೂಪ್ ಅನ್ನು ನಿರ್ವಹಿಸುವುದರ ಜೊತೆಗೆ, ಬಡವರಿಗೆ ನೆರವಾಗ್ತಾರೆ.

77

ಪ್ರೀತಿ ಅದಾನಿ 1966 ರಲ್ಲಿ ಕೇವಲ ಇಬ್ಬರು ಸದಸ್ಯರೊಂದಿಗೆ ಅದಾನಿ ಫೌಂಡೇಶನ್ ಅನ್ನು ಸ್ಥಾಪಿಸಿದರು. 21 ವರ್ಷಗಳ ನಂತರ, ಅವರು ಮತ್ತು ಅವರ ಫೌಂಡೇಶನ್ ದೇಶದ 18 ಕ್ಕೂ ಹೆಚ್ಚು ರಾಜ್ಯಗಳಲ್ಲಿ ಹಲವು ಶಾಖೆಗಳನ್ನು ಹೊಂದಿದೆ.

Read more Photos on
click me!

Recommended Stories