ಗರ್ಭಿಣಿಯೂ ಅಲ್ಲ, ಮಗುವೂ ಆಗಿಲ್ಲ, ಆದ್ರೂ ಸ್ತನಗಳಿಂದ ಡಿಸ್ಚಾರ್ಜ್ ಆಗ್ತಿದ್ಯಾ?

First Published | Nov 24, 2023, 7:00 AM IST

ನೀವು ಗರ್ಭಿಣಿಯಲ್ಲದಿದ್ದರೂ ಸಹ ಸ್ತನಗಳಿಂದ ಡಿಸ್ಚಾರ್ಜ್ ಆಗುತ್ತಿದ್ದರೆ, ಅದರ ಕಾರಣಗಳ ಬಗ್ಗೆ ಗಮನ ಹರಿಸುವುದು ಮುಖ್ಯ. ನಿಖರವಾದ ಕಾರಣವನ್ನು ಗುರುತಿಸಿದರೂ ಸಹ ತುಂಬಾ ಮುಖ್ಯ. ಯಾಕಂದ್ರೆ, ಅದನ್ನು ಸರಿಪಡಿಸಲು ವೈದ್ಯರು ನಿಮಗೆ ಸರಿಯಾದ ಸಲಹೆ ಮತ್ತು ಔಷಧಿಗಳನ್ನು ನೀಡಲು ಸಾಧ್ಯವಾಗುತ್ತೆ.
 

ಮಹಿಳೆಯರ ಸ್ತನದಲ್ಲಿ ಹಾಲಿನ ನಾಳಗಳಿವೆ. ಅವುಗಳನ್ನು ಮಿಲ್ಕ್ ಡಕ್ಟ್ಸ್ (milk ducts) ಎಂದೂ ಕರೆಯಲಾಗುತ್ತದೆ. ಗರ್ಭಧಾರಣೆಯ ಕೊನೆಯ ದಿನಗಳಲ್ಲಿ, ಇದರಿಂದ ದ್ರವ ಅಥವಾ ಹಾಲು ವಿಸರ್ಜನೆ ಆಗೋದು ತುಂಬಾ ಸಾಮಾನ್ಯ. ಆದರೆ ಗರ್ಭಿಣಿಯಾಗಿಲ್ಲಾಂದ್ರೂ, ಸ್ತನಗಳಿಂದ ಲೀಕೇಜ್ (breast leakage) ಆಗುತ್ತಿದ್ರೆ, ಅದರ ಬಗ್ಗೆ ಕಾಳಜಿ ವಹಿಸಲೇಬೇಕು.
 

ಹೆರಿಗೆ ನಂತರ (Post Delivery), ಮಹಿಳೆಯರ ಸ್ತನಗಳಿಂದ ಹಾಲು ಹೊರಬರುತ್ತದೆ. ಆದರೆ ಅನೇಕ ಬಾರಿ ಇದು ಗರ್ಭಿಣಿಯಲ್ಲದ ಮಹಿಳೆಯರಿಗೆ ಸಂಭವಿಸುತ್ತದೆ. ಅದನ್ನು ನಿರ್ಲಕ್ಷಿಸಬೇಡಿ. ಗರ್ಭಿಣಿ ಅಲ್ಲಾಂದ್ರೂ ಸ್ತನ ಸೋರಿಕೆ ಆಗೋದಕ್ಕೆ ಕಾರಣಗಳು ಯಾವುವು ಎಂದು ತಜ್ಞರಿಗೆ ತಿಳಿದಿದೆ. ಅದರ ಬಗ್ಗೆ ತಜ್ಞರು ಏನು ಹೇಳಿದ್ದಾರೆ ನೋಡೋಣ. 

Tap to resize

ಸ್ತನ ಸೋರಿಕೆ ಅಥವಾ ಬ್ರೆಸ್ಟ್ ಡಿಸ್ಚಾರ್ಜ್ ಎಂದರೇನು?
ನೀವು ಗರ್ಭಿಣಿಯಲ್ಲದಿದ್ದರೂ ನಿಮ್ಮ ಸ್ತನದಿಂದ ನೀರು ಅಥವಾ ಹಾಲಿನಂತಹ ದ್ರವ ಬರುತ್ತಿದ್ದರೆ ಅದನ್ನು ಸ್ತನ ಸೋರಿಕೆ (Breast Discharge) ಎಂದು ಕರೆಯಲಾಗುತ್ತದೆ. ಕೆಲವು ಮಹಿಳೆಯರಲ್ಲಿ, ಸ್ತನವನ್ನು ಲಘುವಾಗಿ ಒತ್ತಿದಾಗ ಇದು ಸಂಭವಿಸುತ್ತದೆ.  ಈ ಸಮಸ್ಯೆಯಲ್ಲಿ ಅನೇಕ ಮಹಿಳೆಯರಿಗೆ ಸ್ತನ ನೋವು ಅಥವಾ ಇತರ ಸಮಸ್ಯೆಗಳು ಕಾಡಬಹುದು.
 

ಸ್ತನ ಸೋರಿಕೆಗೆ ಕಾರಣಗಳು ಏನು ನೋಡೋಣ
ಗರ್ಭಿಣಿ ಅಲ್ಲದೇ, ಸ್ತನದಿಂದ ಹಾಲು ಹೊರಬರುವುದು ಅಥವಾ ಬಿಳಿ ದ್ರವ ಹೊರಬರುವುದು ಸಾಮಾನ್ಯವಲ್ಲ. ಇದಕ್ಕೆ ಕಾರಣಗಳನ್ನು ತಿಳಿದು, ಸಮಸ್ಯೆ ಪರಿಹರಿಸಬೇಕಾಗುತ್ತೆ.ಇದು ಅನೇಕ ಕಾರಣಗಳಿಗಾಗಿ ಸಂಭವಿಸಬಹುದು. 

ಹಾರ್ಮೋನುಗಳ ಅಸಮತೋಲನ
ಮಹಿಳೆಯರ ದೇಹದಲ್ಲಿ ಹೆಚ್ಚುವರಿ ಪ್ರೊಲ್ಯಾಕ್ಟಿನ್ ಇದ್ದರೂ ಸಹ ಸ್ತನ ಸೋರಿಕೆ ಸಂಭವಿಸಬಹುದು. ಈ ಕಾರಣದಿಂದಾಗಿ, ಗರ್ಭಧಾರಣೆ ಮತ್ತು ಸ್ತನ್ಯಪಾನ (breast feeding) ಇಲ್ಲದೆಯೂ ಸ್ತನದಿಂದ ವಿಸರ್ಜನೆಯಾಗಬಹುದು.

ಹೆಚ್ಚಿನ ಪ್ರೊಲ್ಯಾಕ್ಟಿನ್ ಮಹಿಳೆಯರ ಋತುಚಕ್ರ ಮತ್ತು ಫಲವತ್ತತೆ ಮೇಲೂ ಪರಿಣಾಮ ಬೀರುತ್ತದೆ. 
ಇದು ಸ್ತನ ಅಂಗಾಂಶದಲ್ಲಿ ಒಂದು ರೀತಿಯ ಉರಿಯೂತ ಅಥವಾ ಔಷಧಿಗಳ ಅಡ್ಡ ಪರಿಣಾಮಗಳಿಂದಲೂ (side effects of medicine) ಉಂಟಾಗಬಹುದು. 
ಸ್ತನ ಸೋರಿಕೆಯ ಹಿಂದೆ ಥೈರಾಯ್ಡ್ ಸಮಸ್ಯೆಗಳೂ (thyroid problem) ಇರಬಹುದು. 
ಸ್ತನದಲ್ಲಿ ಸಿಸ್ಟ್ ಗಳ ರಚನೆಯಿಂದಾಗಿಯೂ ಇದು ಸಂಭವಿಸಬಹುದು. ಈ ಸ್ಥಿತಿಯಲ್ಲಿ, ಕೆಲವೊಮ್ಮೆ ಹಳದಿ ಅಥವಾ ಹಸಿರು ವಿಸರ್ಜನೆಯೂ ಇರುತ್ತದೆ.

ನೀವು ಹಾರ್ಮೋನುಗಳ ಅಸಮತೋಲನವನ್ನು ಎದುರಿಸುತ್ತಿದ್ದರೆ ಮತ್ತು ಹಾರ್ಮೋನುಗಳನ್ನು ಸಮತೋಲನಗೊಳಿಸಲು ಯಾವುದೇ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದರೆ, ಸಹ ಇದು  ಸಂಭವಿಸಬಹುದು. 
ಲೈಂಗಿಕವಾಗಿ ಸಕ್ರಿಯರಾಗುವ (sexually active) ಮೂಲಕ ಮತ್ತು ಒತ್ತಡದಲ್ಲಿರುವುದರ ಮೂಲಕವೂ ಇದು ಸಾಧ್ಯ.
ಕೆಲವು ಮಹಿಳೆಯರಿಗೆ ಋತುಬಂಧದ ಸಮಯದಲ್ಲಿ ಈ ಸಮಸ್ಯೆ ಕಾಡುತ್ತದೆ.
ಕಾರಣ ಏನೇ ಇರಲಿ, ಈ ಸಮಸ್ಯೆ ಕಂಡು ಬಂದ ಕೂಡಲೇ ವೈದ್ಯರನ್ನು ಭೇಟಿ ಮಾಡಲು ಮರೆಯಬೇಡಿ. 

Latest Videos

click me!