ಮುಖದ ಮೇಲಿರುವ ಬ್ಲ್ಯಾಕ್ ಹೆಡ್ಸ್ ಸೌಂದರ್ಯ ಹಾಳು ಮಾಡುತ್ತೆ. ಪಾರ್ಲರ್ ನಲ್ಲಿ ಬ್ಲ್ಯಾಕ್ ಹೆಡ್ಸ್ ತೆಗೆಯೋ ಪ್ರೊಸೆಸ್ ನೋವಿನಿಂದ ಕೂಡಿರುತ್ತೆ. ಅಲ್ದೆ ಗಲ್ಲ ರೆಡ್ ಆಗುತ್ತೆ. ಮನೆಯಲ್ಲೇ ನೀವು ಬ್ಲ್ಯಾಕ್ ಹೆಡ್ಸ್ ತೆಗೆಯಬಹುದು. ಸುಲಭ ಮನೆ ಮದ್ದು ಇಲ್ಲಿದೆ.
ಬ್ಲ್ಯಾಕ್ ಹೆಡ್ ಸೌಂದರ್ಯಕ್ಕೆ ಕಪ್ಪು ಚುಕ್ಕಿ. ಅದನ್ನು ಎಷ್ಟೇ ಮುಚ್ಚಿಡೋಕೆ ಪ್ರಯತ್ನಿಸಿದ್ರೂ ಅದು ಅಲ್ಲಲ್ಲಿ ಕಾಣಿಸುತ್ತೆ. ನಿಮಗೂ ಬ್ಲ್ಯಾಕ್ ಹೆಡ್ಸ್ ಸಮಸ್ಯೆ ಇದ್ದು, ಪಾರ್ಲರ್ ಸುತ್ತಿ ಸುಸ್ತಾಗಿದೆ ಎಂದಾದ್ರೆ ಮನೆ ಮದ್ದು ಬಳಸಿ. ಅಡುಗೆ ಮನೆಯಲ್ಲಿರುವ ಪದಾರ್ಥ ಬಳಸಿ ನೀವು ಬ್ಲ್ಯಾಕ್ ಹೆಡ್ಸ್ ತೆಗೆಯಬಹುದು. ಅದಕ್ಕೆ ಜೇನುತುಪ್ಪ, ನಿಂಬೆ ರಸ ಬೇಕು. ನೀವು ಬ್ಲ್ಯಾಕ್ ಹೆಡ್ಸ್ ತೆಗೆಯೋಕೆ ಎಷ್ಟು ಪ್ರಮಾಣದಲ್ಲಿ ಜೇನುತುಪ್ಪ ಹಾಗೂ ನಿಂಬೆ ರಸ ಬಳಸ್ತೀರಿ ಅನ್ನೋದು ಮುಖ್ಯವಾಗುತ್ತೆ. ಪ್ರಮಾಣ ಇಲ್ಲಿ ಇಂಪಾರ್ಟೆಂಟ್.
26
ಬಳಸೋದು ಹೇಗೆ?
ಒಂದು ಕಪ್ ಗೆ ಒಂದು ಟೀಸ್ಪೂನ್ ಜೇನುತುಪ್ಪ ಹಾಗೂ ಕೆಲ ಹನಿ ನಿಂಬೆ ರಸವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಬ್ಲ್ಯಾಕ್ ಹೆಡ್ಸ್ ಇರುವ ಜಾಗಕ್ಕೆ ಈ ಮಿಶ್ರಣವನ್ನು ಹಚ್ಚಿ ನಿಧಾನವಾಗಿ ಮಸಾಜ್ ಮಾಡಿ. ಸುಮಾರು 15 ನಿಮಿಷ ಹಾಗೆ ಬಿಡಿ. ನಂತ್ರ ಶುದ್ಧ ನೀರಿನಿಂದ ಮುಖ ಕ್ಲೀನ್ ಮಾಡಿ. ಫೇಸ್ ವಾಶ್ ಬಳಸ್ಬಹುದು.
36
ಹೇಗೆ ಪ್ರಯೋಜನಕಾರಿ?
ನಿಂಬೆ ರಸ ಚರ್ಮವನ್ನು ಸ್ವಚ್ಛವಾಗಿಡಲು ಸಹಾಯ ಮಾಡುತ್ತೆ. ಇನ್ನು ಜೇನುತುಪ್ಪ ಚರ್ಮವನ್ನು ತೇವಗೊಳಿಸುತ್ತೆ. ಕೊಳೆಯನ್ನು ತೆಗೆಯುತ್ತೆ. ನಿಯಮಿತವಾಗಿ ನೀವು ಇದನ್ನು ಬಳಸೋದ್ರಿಂದ ಸ್ಕಿನ್ ಫ್ರೆಶ್ ಆಗುತ್ತೆ.
ಅಡುಗೆ ಸೋಡಾ ನಿಮ್ಮ ಮುಖದ ಮೇಲಿರುವ ಕೊಳೆಯನ್ನು ಕ್ಲೀನ್ ಮಾಡುತ್ತೆ. ವಾರಕ್ಕೆ ಒಂದೆರಡು ಬಾರಿ ಇದನ್ನು ಬಳಸ್ಬಹುದು. ಮೊದಲು ಬೌಲ್ ಗೆ ಒಂದು ಚಮಚ ಅಡುಗೆ ಸೋಡಾ ಹಾಕಿ, ಅದಕ್ಕೆ ನೀರನ್ನು ಹಾಕಿ ಮಿಕ್ಸ್ ಮಾಡಿ. ನಂತ್ರ ಅದನ್ನು ಬ್ಲ್ಯಾಕ್ ಹೆಡ್ಸ್ ಇರುವ ಜಾಗಕ್ಕೆ ಹಚ್ಚಿ ಮಸಾಜ್ ಮಾಡಿ. ಎರಡರಿಂದ ಮೂರು ನಿಮಿಷ ಮಸಾಜ್ ಮಾಡಿ ನಂತ್ರ ಮುಖ ವಾಶ್ ಮಾಡಿ. ಇದು ಮುಖವನ್ನು ಒಳಗಿಸೋದ್ರಿಂದ ತುಂಬಾ ಸಮಯ ಇದನ್ನಿಡುವ ಅಗತ್ಯವಿಲ್ಲ.
56
ಬ್ಲ್ಯಾಕ್ ಹೆಡ್ಸ್ ಹೇಗಾಗುತ್ತೆ?
ಚರ್ಮದ ರಂಧ್ರಗಳಲ್ಲಿ ಎಣ್ಣೆ, ಧೂಳು ಮತ್ತು ಕೊಳಕು ಸಂಗ್ರಹವಾದಾಗ ಅವು ಆಕ್ಸಿಡೀಕರಣಗೊಂಡು ಕಪ್ಪು ಬಣ್ಣಕ್ಕೆ ತಿರುಗುತ್ತೆ. ಈ ಕಪ್ಪು ಚುಕ್ಕೆಯನ್ನು ಬ್ಲ್ಯಾಕ್ ಹೆಡ್ಸ್ ಅಂತ ಕರೀತಾರೆ. ಆಯಿಲ್ ಸ್ಕಿನ್ ಗೆ ಈ ಸಮಸ್ಯೆ ಹೆಚ್ಚು. ಆರಂಭದಲ್ಲಿಯೇ ಮನೆ ಮದ್ದು ಬಳಸಿದ್ರೆ ಒಳ್ಳೆಯದು. ಬ್ಲ್ಯಾಕ್ ಹೆಡ್ಸ್ ಮುಖದ ತುಂಬಾ ಆದ್ರೆ ಸೌಂದರ್ಯ ಹಾಳು ಮಾಡುತ್ತೆ.
66
ಮನೆ ಮದ್ದನ್ನು ಎಷ್ಟು ಬಾರಿ ಬಳಸ್ಬಹುದು?
ಮನೆಮದ್ದುಗಳನ್ನು ಬಳಸುವಾಗ ಮಿತವಾಗಿರ್ಬೇಕು. ವಾರಕ್ಕೆ 1-2 ಬಾರಿ ಬಳಸಿದ್ರೆ ಸಾಕು. ಇದನ್ನು ಪ್ರತಿದಿನ ಬಳಸಿದ್ರೆ ಸ್ಕಿನ್ ಮೇಲೆ ಸೈಡ್ ಎಫೆಕ್ಟ್ ಆಗುವ ಸಾಧ್ಯತೆ ಇದೆ. ನೀವು ಪ್ಯಾಚ್ ಪರೀಕ್ಷೆ ಮಾಡಿದ್ಮೇಲೆ ಇದನ್ನು ಬಳಸೋದು ಒಳ್ಳೆಯದು. ಈ ಮನೆ ಮದ್ದು ಬಳಸಿದಾಗ ಕಿರಿಕಿರಿಯಾದ್ರೆ, ರೆಡ್ ಆದ್ರೆ ತಕ್ಷಣ ನಿಲ್ಲಿಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.