ಕೋಟ್ಯಾಧೀಶೆ ಡಿಕೆಶಿ ಮಗಳನ್ನು ಇಷ್ಟಪಡಲು ಇಲ್ಲಿವೆ ಕಾರಣಗಳು!

 ಡಿಕೆಶಿ ಮಗಳು ಬ್ಯುಸಿನೆಸ್ ಚತುರೆ, ಉದ್ಯಮಶೀಲೆಯೂ ಹೌದು. ಈಕೆಯನ್ನು ಬಲ್ಲವರು ಐಶ್ವರ್ಯಾ ಬುದ್ಧಿವಂತಿಕೆ, ವ್ಯವಹಾರ ತಂತ್ರಗಾರಿಕೆಯನ್ನು ಮೆಚ್ಚುತ್ತಾರೆ. ಜೊತೆಗೆ ಸೌಂದರ್ಯವತಿ, ತನ್ನದೇ ಬಟ್ಟೆ ಬ್ರ್ಯಾಂಡ್‌ ಕೂಡ ಹೊಂದಿದ್ದಾರೆ.

ಕರ್ನಾಟಕದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಗಳೆಂಬುವುದು ಇವರಿಗಿರುವ ಸ್ಪೆಷಲ್ ಟ್ಯಾಗ್. ಕೋಟ್ಯಂತರ ಮೌಲ್ಯದ ಆಸ್ತಿಗೆ ಒಡತಿ. ಜೊತೆಗೆ ಕಾಫಿ ಡೇ ಖ್ಯಾತಿಯ ಸಿದ್ಧಾರ್ಥ ಅವರು ಕಟ್ಟಿದ ಸಾಮ್ರಾಜ್ಯಕ್ಕೂ ಇವರೇ ಒಡತಿ. ಐಶ್ವರ್ಯಾ ಡಿಕೆಶಿ ಹೆಗ್ಡೆ ಅಂಥವರ ಲೈಫು ಹೇಗಿರಬಹುದು? ವಾರಕ್ಕೊಂದು ವಿದೇಶ ಪ್ರವಾಸ ಮಾಡಿಕೊಂಡು, ನೈಟ್ ಲೈಫಲ್ಲಿ ಎಂಜಾಯ್ ಮಾಡ್ತಾ, ಅಪ್ಪನ ಆಸ್ತಿಯನ್ನೆಲ್ಲ ಚಿಂದಿ ಚಿತ್ರಾನ್ನ ಮಾಡಿಕೊಂಡಿರಬಹುದೆಂದು ಕೊಂಡ್ರೆ, ನೋ. ಇವರು ಅಂಥವರು ಅಲ್ಲವೇ ಅಲ್ಲ. 

ಸೌಂದರ್ಯದ ಜೊತೆಗೆ ಮೆಚ್ಯೂರ್ಡ್ ಹುಡುಗಿ. ಇವರೇನು ಅಂತ ಇವರ ಇನ್‌ಸ್ಟಾಗ್ರಾಂ ಅಕೌಂಟ್ ನೋಡಿದರೆ ಅರಿಯಬಹುದು. ಎಲ್ಲರಿಗೂ ಸ್ಪೂರ್ತಿ ನೀಡುವಂಥ ಮಾತುಗಳನ್ನೇ ಆಡುತ್ತಾರೆ. ಇವರು ತನ್ನ ಇನ್‌ಸ್ಟಿಟ್ಯೂಷನ್‌ನ ಸಿಬ್ಬಂದಿ ಹುರಿದುಂಬಿಸುವ ಭಾಷಣ, ಶಾಲೆ ಕಾಲೇಜಿನ ಮಕ್ಕಳಿಗೆ ಈ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಗಳಿಸೋದು ಹೇಗೆಂದು ಹೇಳುವುದನ್ನು ಕೇಳಿದರೆ, ಮನಸ್ಸಿಗೆ ಹಿತ ಅನ್ಸುತ್ತೆ. 
 


ಯಾರಿಗೋ ಸಹಾಯ (Help) ಮಾಡ್ತಿರೋದು, ಇನ್ನೆಲ್ಲೋ ಸುಧಾ ಮೂರ್ತಿ ಜೊತೆಗೋ, ಸದ್ಗುರು ಜೊತೆಗೋ ಸಂಭಾಷಣೆ (Conversation) ಮಾಡ್ತಿರೋದು, ವಿದೇಶದಲ್ಲೆಲ್ಲೋ ದೊಡ್ಡ ಕಾನ್ಫರೆನ್ಸ್‌ನಲ್ಲಿ ಭಾಷಣ (Speech) ಮಾಡುತ್ತಿರುವುದು, ಮತ್ತೊಂದು ಕಡೆ ಟಿವಿ ಸಂದರ್ಶನ ಕೊಡ್ತಾ ಇರೋದು ನೋಡಿದರೆ ಇವರ ಶತ್ರುಗಳಿಗೆ ಖುಷಿಯಾಗೋದು ಸುಳ್ಳಲ್ಲ. 
 

ಶಿಕ್ಷಣ ಸಂಸ್ಥೆಗಳ ಒಡತಿ
ಐಶ್ವರ್ಯ ಡಿಕೆಎಸ್ ಹೆಗ್ಡೆ ಎಂಬ ಹೆಸರಿನ ಇವರ ಸೋಷಿಯಲ್ ಮೀಡಿಯಾ ಪ್ರೊಫೈಲ್ ನೋಡಿದರೆ ಎಲ್ಲರೂ ದಂಗಾಗುತ್ತಾರೆ. ಯಾವ ವೀಡಿಯೋ, ಫೋಟೋ ನೋಡಿದರೂ ಶೋ ಆಫ್‌ ಅನಿಸೋಲ್ಲ. ಇವರ ನಡೆ ನುಡಿಯಲ್ಲಿ ಸ್ಪಷ್ಟತೆ ಇದೆ. ತನ್ನ ಗುರಿ ಹಾಗೂ ಉದ್ದೇಶದ ಬಗ್ಗೆ ಸ್ಪಷ್ಟತೆ ಇದೆ. ದಾರಿ ಬಗ್ಗೆ ನಿಖರತೆಯೂ ಇದೆ. ನಿರರ್ಗಳವಾಗಿ ಮಾತನಾಡುತ್ತಾರೆ.
 

 ಇಂಗ್ಲಿಷ್‌ ಇವರ ಸ್ಟ್ರೆಂಥ್. ಕನಸುಗಳನ್ನು ಕಟ್ಟಿ ಕೊಡುತ್ತಾಳೆ. ಅದರಲ್ಲಿಯೂ ಶಿಕ್ಷಣ (Education) ಹಾಗೂ ಮಹಿಳಾ ಸ್ವಾವಲಂಬನೆ (Women Empowerment) - ಶಿಕ್ಷಣ ಮತ್ತು ಸ್ತ್ರೀ ಸಬಲೀಕರಣದ- ಪ್ರತಿಪಾದಕಿ.  ಪ್ರತಿ ಮಾತಿನಲ್ಲಿಯೂ ಇದಕ್ಕೆ ಒತ್ತು ನೀಡುತ್ತಾರೆ. ತಂದೆ ಡಿಕೆಶಿ ಕಟ್ಟಿರುವ ದೊಡ್ಡ ಶಿಕ್ಷಣ ಸಂಸ್ಥೆಗಳ (Educational Institution) ಸಾಮ್ರಾಜ್ಯದ ಜೊತೆ ಇದೀಗ ತಮ್ಮ ಮಾವ ಕಟ್ಟಿರುವ ಶಿಕ್ಷಣ ಸಂಸ್ಥೆಗಳನ್ನೂ ಮುನ್ನಡೆಸಿಕೊಂಡು ಹೋಗುತ್ತಿರುವ ಸ್ತ್ರೀ ಶಕ್ತಿ ಇವರು. 

ಪ್ರತಿಷ್ಠಿತ ಗ್ಲೋಬಲ್ ಇಂಜಿನಿಯರಿಂಗ್ ಕಾಲೇಜಿನ ವ್ಯವಹಾರವನ್ನು ನೋಡಿಕೊಳ್ಳುವುದು ಇವರೇ. ಬ್ಯುಸಿನೆಸ್‌ನಲ್ಲಿ ಡಿಕೆಶಿ ಮಗಳಿಗೆ ಚತುರೆ, ಉದ್ಯಮಶೀಲೆ ಎಂಬ ಹೆಸರಿದೆ. ಇವರಿಗನ್ನು 28 ವರ್ಷ. ಇಷ್ಟು ಚಿಕ್ಕ ಮಹಿಳೆಯ ವ್ಯವಹಾರದ ಬಗ್ಗೆ ಹಲವರು ಮಾತನಾಡಿಕೊಳ್ಳುತ್ತಾರೆ. ಅಪ್ಪನ ಇನ್‌ಫ್ಲುಯೆನ್ಸ್‌ಗೂ ಇವರು ಕೇರ್ ಮಾಡೋಲ್ಲವೆಂದು ಇತ್ತೀಚೆಗೆ ಸುವರ್ಣ ನ್ಯೂಸ್‌ಗೆ ಮಹಿಳಾ ದಿನದ ವಿಶೇಷ ಸಂದರ್ಶನದಲ್ಲಿ ಹೇಳಿ ಕೊಂಡಿದ್ದರು. 

ಐಶ್ವರ್ಯಾ ತಮ್ಮನ್ನು ಅನಗತ್ಯವಾಗಿ ಫೋಕಸ್ ಮಾಡುತ್ತಿರುವ ಮಾಧ್ಯಮಗಳ ವಿರುದ್ಧ ಸಿಟ್ಟಾಗಿದ್ದರು. ಅಪ್ಪನ ವಿರುದ್ಧ ಆರೋಪ ಎದುರಾದಾಗ, ಅವರಿಗೆ ಬೆನ್ನೆಲುಬಾಗಿ ನಿಂತು, ತಾವೂ ವಿಚಾರಣೆಯನ್ನು ಧೈರ್ಯವಾಗಿ ಎದುರಿಸಿದ್ದರು. ಅಲ್ಲದೇ ರಾಜ್ಯದ ಮಾಜಿ ಸಿಎಂ ಎಸ್.ಎಂ.ಕೃಷ್ಣ ನಿಧನರಾದಾಗಲೂ (ಗಂಡನ ಅಜ್ಜ) ಎಲ್ಲವನ್ನೂ ನಿಭಾಯಿಸುತ್ತಿದ್ದ ರೀತಿ ನೋಡಿ ಡಿಕೆಶಿ ಸಿಎಂ ಆಗ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಇವರಂತೂ ರಾಜ್ಯವನ್ನು ಆಳೋದು ಗ್ಯಾರಂಟಿ ಎಂದೇ ಮಾತನಾಡಿಕೊಂಡಿದ್ದರು. ಐಶ್ವರ್ಯಾ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯ ಒಡತಿ. ನೂರಾರು ಕೋಟಿ ರೂ ಮೌಲ್ಯದ ಸ್ಥಿರಾಸ್ತಿ ಹಾಗೂ ಚರಾಸ್ತಿಗಳೂ ಇವರ ಹೆಸರಿನಲ್ಲಿವೆ. ಮುಂಬಯಿಯಲ್ಲಿ ಅಪಾರ್ಟ್‌ಮೆಂಟ್‌ ಕೂಡ ಇದೆ.
 

ಸ್ಪೂರ್ತಿ ನೀಡುವ ಕೋಟ್ಸ್
- ಮಹಿಳೆಯರು ಶತಮಾನಗಳಿಂದ ಹೋರಾಡುತ್ತಿದ್ದಾರೆ. ಒಂದೆರಡಲ್ಲ. ಅನೇಕ ಯುದ್ಧಗಳನ್ನು ಎದುರಿಸುತ್ತಾರೆ- ಮನೆಯಲ್ಲಿ, ಸಮಾಜದಲ್ಲಿ ಅಥವಾ ಬಾಲ್ಯದಿಂದಲೂ ಇಂಥವನ್ನು ಎದುರಿಸೋದು ಆಕೆಗೆ ಗೊತ್ತು. 
- ಕನಸುಗಳನ್ನು ನನಸಾಗಿಸೋದು ಹಾಗೂ ಬಯಸಿದ್ದನ್ನು ಸಾಧಿಸುವುದು ಮಹಿಳೆಗೆ ಮಾತ್ರ ಸಾಧ್ಯ. ಸಮಾಜ ಅವಳಿಂದ ಅದನ್ನು ಬಯಸುವುದಿಲ್ಲ. ಆದರೆ ತಾನು ಕಟ್ಟುಪಾಡುಗಳಿಗೆ ಮಣಿಯುವುದಿಲ್ಲವೆಂದು ಗಟ್ಟಿ ಮನಸ್ಸು ಮಾಡಿದರೆ ಆಕೆ ಗೆಲ್ಲೋದು ಶತಸಿದ್ಧ.

- ವೈಫಲ್ಯಗಳಿಂದ ಪಾಠ ಕಲೀಬೇಕು. ಅವನ್ನೇ ನಮ್ಮ ಏಳ್ಗೆಗೆ ಮೆಟ್ಟಿಲುಗಳನ್ನಾಗಿ ಮಾಡಿಕೊಳ್ಳಬೇಕು. ಇವು ಸವಾಲುಗಳನ್ನು ಎದುರಿಸಲು ಧೈರ್ಯ ತುಂಬುತ್ತದೆ. 
- ನಾನು ಕ್ಯಾಪ್ಟನ್ ಜತೆಗೆ ಸಿಬ್ಬಂದಿಯೂ ಆಗುತ್ತೇನೆ. ಕುತೂಹಲದಿಂದ ನೀರಲ್ಲಿ ನೌಕಾಯಾನ ಮಾಡುತ್ತೇನೆ. ಜ್ಞಾನ ಮತ್ತು ವೈಯಕ್ತಿಕ ಬೆಳವಣಿಗೆ ಕಡೆಗೆ ನನ್ನ ವಿದ್ಯಾರ್ಥಿಗಳಿಗೆ ಗೈಡ್ ಮಾಡುತ್ತೇನೆ. 
 

ಸ್ಪೂರ್ತಿ ನೀಡುವ ಕೋಟ್ಸ್
- ಪುಸ್ತಕಗಳಿಗೆ ಮನಸ್ಸನ್ನು ಪರಿವರ್ತಿಸಿ, ಕನಸುಗಳನ್ನು ಪ್ರೇರೇಪಿಸುವ ಶಕ್ತಿ ಇದೆ. ಪ್ರತಿಯೊಂದು ಪುಸ್ತಕ ನಮ್ಮ ದೃಷ್ಟಿಕೋನಗಳನ್ನು ಮರು ರೂಪಿಸುವ ಮತ್ತು ನಮ್ಮ ಆಕಾಂಕ್ಷೆಗಳನ್ನು ಸಶಕ್ತಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ.
- ತೆರೆದ ತೋಳುಗಳೊಂದಿಗೆ ಭವಿಷ್ಯವನ್ನು ಅಪ್ಪಿಕೊಳ್ಳಿ. ಅಲ್ಲಿ ನಿಮ್ಮ ಸಾಮರ್ಥ್ಯ ಹೊಳೆಯುತ್ತದೆ.  ಅಮೂಲ್ಯ ಶಿಕ್ಷಕರ ಮೌಲ್ಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ. 

- ಜೀವನದ ಹಾದಿಯೇ ನಮ್ಮ ಕ್ಯಾನ್ವಾಸ್. ಅಲ್ಲಿನ ಪ್ರತಿಯೊಂದು ಸವಾಲು ಮತ್ತು ಅವಕಾಶವು ನಮ್ಮ ಅಸ್ತಿತ್ವದ ವಿಶಿಷ್ಟ ಮತ್ತು ರೋಮಾಂಚಕ ಚಿತ್ರವನ್ನು ಚಿತ್ರಿಸುತ್ತದೆ.

Latest Videos

click me!