Ponniyin Selvan: 48ರ ವಯಸ್ಸಿನಲ್ಲೂ ಮಿಂಚ್ತಿರೋ ಐಶ್ವರ್ಯ ರೈ ಬ್ಯೂಟಿ ಸೀಕ್ರೆಟ್ ಏನು ?

Published : Sep 30, 2022, 05:03 PM IST

48 ವಯಸ್ಸಿನಲ್ಲೂ ಐಶ್ವರ್ಯಾ ಇಪ್ಪತ್ತರ ಬೆಡಗಿಯಂತೆ ಕಂಗೊಳಿಸುತ್ತಾರೆ. ಅಂದಕ್ಕೆ ಇನ್ನೊಂದು ಹೆಸರೇ ಐಶ್ವರ್ಯಾ ಎಂದರೆ ತಪ್ಪಾಗಲಾರದು. ವಯಸ್ಸಾದಂತೆ ಅವರು ಹೆಚ್ಚು ಸುಂದರವಾಗಿ ಕಾಣುತ್ತಿದ್ದಾರೆ. ಪೊನ್ನಿಯನ್ ಸೆಲ್ವನ್ ಪ್ರಮೋಷನ್‌ ಸಮಾರಂಭಗಳಲ್ಲೂ ಐಶ್ವರ್ಯಾ ಬ್ಲ್ಯಾಕ್ ಸೂಟ್, ರೆಡ್ ಸ್ಯಾರಿಯಲ್ಲಿ ಮಿಂಚಿದ್ದರು. ಹೀಗಿರುವಾಗ ಮಿಸ್‌ ವರ್ಲ್ಡ್‌, ಮಂಗಳೂರಿನ ಬೆಡಗಿ ಐಶ್ವರ್ಯಾ ರೈ ಬ್ಯೂಟಿ ಸೀಕ್ರೆಟ್ ಏನು ತಿಳಿಯೋಣ. 

PREV
18
 Ponniyin Selvan: 48ರ ವಯಸ್ಸಿನಲ್ಲೂ ಮಿಂಚ್ತಿರೋ ಐಶ್ವರ್ಯ ರೈ ಬ್ಯೂಟಿ ಸೀಕ್ರೆಟ್ ಏನು ?

ನಿರ್ದೇಶಕ ಮಣಿರತ್ನಂ ಅವರ ಬಹುನಿರೀಕ್ಷಿತ ಚಿತ್ರ ಪೊನ್ನಿಯಿನ್ ಸೆಲ್ವನ್ 1, 500 ಕೋಟಿ ಬಜೆಟ್‌ನಲ್ಲಿ ಇಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದೆ. ತಮಿಳು ಜೊತೆಗೆ ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ದಕ್ಷಿಣದ ಸೂಪರ್‌ಸ್ಟಾರ್‌ಗಳ ದೊಡ್ಡ ತಂಡ ಕಾಣಿಸುತ್ತದೆಯಾದರೂ, ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಕೂಡ ಇದರಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

28

ಐಶ್ವರ್ಯಾ ರೈ ಬಚ್ಚನ್ ಸುಮಾರು 4 ವರ್ಷಗಳ ನಂತರ ಪೊನ್ನಿಯಿನ್ ಸೆಲ್ವನ್ ಮೂಲಕ  ತೆರೆಗೆ ಮರಳುತ್ತಿದ್ದಾರೆ. ಅವರು ಕೊನೆಯದಾಗಿ 2018 ರ ಫನ್ನಿ ಖಾನ್ ಚಿತ್ರದಲ್ಲಿ ಕಾಣಿಸಿಕೊಂಡರು. ಸದ್ಯಕ್ಕೆ ಅವರಿಗೆ ಯಾವುದೇ ಬಾಲಿವುಡ್ ಸಿನಿಮಾ ಆಫರ್‌ಗಳಿಲ್ಲ. ಪೊನ್ನಿಯಿನ್ ಸೆಲ್ವನ್ ಚಿತ್ರದಲ್ಲಿ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ ಐಶ್ವರ್ಯಾ ರೈ. ರಾಣಿಯ ಪಾತ್ರದಲ್ಲಿ ಅದ್ಭುತವಾಗಿ ಕಾಣುತ್ತಿದ್ದಾರೆ. 

38

48 ವಯಸ್ಸಿನಲ್ಲೂ ಐಶ್ವರ್ಯಾ ಇಪ್ಪತ್ತರ ಬೆಡಗಿಯಂತೆ ಕಂಗೊಳಿಸುತ್ತಾರೆ. ಅಂದಕ್ಕೆ ಇನ್ನೊಂದು ಹೆಸರೇ ಐಶ್ವರ್ಯಾ ಎಂದರೆ ತಪ್ಪಾಗಲಾರದು. ವಯಸ್ಸಾದಂತೆ ಅವರು ಹೆಚ್ಚು ಸುಂದರವಾಗಿ ಕಾಣುತ್ತಿದ್ದಾರೆ. ಪೊನ್ನಿಯನ್ ಸೆಲ್ವನ್ ಪ್ರಮೋಷನ್‌ ಸಮಾರಂಭಗಳಲ್ಲೂ ಐಶ್ವರ್ಯಾ ಬ್ಲ್ಯಾಕ್ ಸೂಟ್, ರೆಡ್ ಸ್ಯಾರಿಯಲ್ಲಿ ಮಿಂಚಿದ್ದರು. ಹೀಗಿರುವಾಗ ಮಿಸ್‌ ವರ್ಲ್ಡ್‌, ಮಂಗಳೂರಿನ ಬೆಡಗಿ ಐಶ್ವರ್ಯಾ ರೈ ಬ್ಯೂಟಿ ಸೀಕ್ರೆಟ್ ಏನು ತಿಳಿಯೋಣ. 

48
water

ಹೆಚ್ಚು ನೀರು ಕುಡಿಯುತ್ತಾರೆ
ಐಶ್ವರ್ಯಾ ರೈ ಸುಂದರವಾಗಿ ಕಾಣಿಸಲು ಅವರ ಬ್ಯೂಟಿ ವಿಷಯದಲ್ಲಿ ತುಂಬಾನೇ ಕಾಳಜಿ ತೆಗೆದುಕೊಳ್ಳುತ್ತಾರೆ. ವಿಶೇಷವಾಗಿ ಆಕೆ ಹೆಚ್ಚು ನೀರು ಕುಡಿಯುತ್ತಾರೆ. ತನ್ನ ದೇಹವನ್ನು ಹೈಡ್ರೇಟ್‌ ಆಗಿ ಇರಿಸಿಕೊಳ್ಳಲು ಹೆಚ್ಚು ನೀರು ಕುಡಿಯುತ್ತಲಢ ಇರುತ್ತಾರೆ. ಎಲ್ಲಾ ಕಡೆ ಹೋಗುವಾಗಲೂ ವಾಟರ್ ಬಾಟಲ್‌ನ್ನು ಕ್ಯಾರಿ ಮಾಡುತ್ತಾರೆ. 

58

ನ್ಯಾಚುರಲ್ ಫೇಸ್ ಪ್ಯಾಕ್‌ ಬಳಕೆ
ಮುಖ ಯಾವತ್ತೂ ನಯವಾಗಿರಲು ನ್ಯಾಚುರಲ್ ಫೇಸ್ ಪ್ಯಾಕ್ ಬಳಸುತ್ತಾರೆ. ಶೇಂಗಾ ಹಿಟ್ಟಿನಲ್ಲಿ ಸ್ವಲ್ಪ ಹಾಲು, ಹಳದಿ ಯೊಂದಿಗೆ ಫೇಸ್ ಪ್ಯಾಕ್ ತಯಾರಿಸುತ್ತಾರೆ. ಇದನ್ನು ಮುಖಕ್ಕೆ ಹಚ್ಚಿ ಸ್ಪಲ್ಪ ಹೊತ್ತಿನ ಬಳಿಕ ನೀರಿನಿಂದ ಸ್ವಚ್ಛಗೊಳಿಸುತ್ತಾರೆ. ಅವರು ತಾವು ತೆಗೆದುಕೊಳ್ಳುವ ಆಹಾರದ ವಿಷಯದಲ್ಲಿ ತುಂಬಾ ಎಚ್ಚರಿಕೆಯಿಂದ ಇರುತ್ತಾರೆ. ಹೆಲ್ದೀಯಾಗಿರಲು ಆರೋಗ್ಯಕರ, ಬ್ಯಾಲೆನ್ಸ್ ಡೈಟ್ ತೆಗೆದುಕೊಳ್ಳುತ್ತಾರೆ.

68

ಜಂಕ್ ಫುಡ್ ತಿನ್ನಲ್ಲ
ಐಶ್ವರ್ಯಾ ಯಾವುದೇ ರೀತಿಯ ಕರಿದ ಅಥವಾ ಜಂಕ್ ಫುಡ್‌ಗಳಿಂದ ದೂರವಿರಲು ಬಯಸುತ್ತಾರೆ. ಅಂತಹ ಆಹಾರಗಳು ಕೊಬ್ಬನ್ನು ಹೆಚ್ಚಿಸುತ್ತವೆ, ದೇಹದಲ್ಲಿ ವಿಷವನ್ನು ಸೇರಿಸುತ್ತವೆ. ಚಯಾಪಚಯವನ್ನು ಕಡಿಮೆ ಮಾಡುತ್ತದೆ ಮತ್ತು ಕಾಲಾನಂತರದಲ್ಲಿ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಹೀಗಾಗಿ ಐಶ್ವರ್ಯಾ ರೈ ಇಂಥಾ ಜಂಕ್ ಫುಡ್ ಅಪ್ಪಿತಪ್ಪಿಯೂ ತಿನ್ನೋದಿಲ್ಲ. ಮಾತ್ರವಲ್ಲ ಪ್ಯಾಕೇಜಡ್ ಫುಡ್ ಬದಲು ಹೋಮ್ ಫುಡ್‌ಗೆ ಆದ್ಯತೆ ನೀಡುತ್ತಾರೆ.

78

ವಾಕಿಂಗ್‌, ಪವರ್ ಯೋಗ
ಐಶ್ವರ್ಯ ರೈ ತನ್ನ ಫಿಟ್ನೆಸ್ ವಿಷಯದಲ್ಲಿಯೂ ಸಾಕಷ್ಟು ಎಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಾರೆ. ಹೆಚ್ಚಾಗಿ ವಾಕಿಂಗ್ ಮಾಡುವುದು, ಪವರ್ ಯೋಗ ಮಾಡುವುದು ಮುಂತಾದ ಚಟುವಟಿಕೆಗಳನ್ನು ಮಾಡಿ ಫಿಟ್ ಆಗಿರುತ್ತಾರೆ.

88

ಮದ್ಯಪಾನ, ಧೂಮಪಾನದಿಂದ ದೂರವಿರಿ
ಸೆಲೆಬ್ರಿಟಿಗಳು ಸಾಮಾನ್ಯವಾಗಿ ತಮ್ಮ ಜೀವನದಲ್ಲಿ ಬರುವ ಒತ್ತಡವನ್ನು ನಿಭಾಯಿಸಲು ಅಥವಾ ಸಂತೋಷಕ್ಕಾಗಿ ಧೂಮಪಾನ ಅಥವಾ ಮದ್ಯಪಾನವನ್ನು ಆಶ್ರಯಿಸುತ್ತಾರೆ. ಆದರೆ, ನಮ್ಮ ಬ್ಯೂಟಿ ಕ್ವೀನ್ ಎರಡರಿಂದಲೂ ದೂರ ಉಳಿಯುತ್ತಾರೆ. ಹೀಗಾಗಿಯೇ ಅವರ ಮುಖವು ಯಾವಾಗಲೂ ಆರೋಗ್ಯಕರ ಹೊಳಪಿನಿಂದ ಕೂಡಿರುತ್ತದೆ. 

Read more Photos on
click me!

Recommended Stories