ಸರಳತೆಯ ಸಾಧಕಿ,ಸಜ್ಜನಿಕೆಯ ಪೋಷಕಿ ಸುಧಾಮೂರ್ತಿ ಅವರ ಅಪರೂಪದ ಚಿತ್ರಗಳು!

First Published Jun 15, 2020, 10:51 AM IST

ಇವರು ಕರ್ನಾಟಕ ಕಂಡ ಶ್ರೇಷ್ಠ ಮಹಿಳೆಯರಲ್ಲಿ ಒಬ್ಬರು.ಬದುಕು ಬಡತನದಲ್ಲಿ ಆರಂಭವಾದರೂ ಮುಂದುವರೆಯುತ್ತಿರುವುದು ಮಾತ್ರ  ಪರಿಶುದ್ಧ ಶ್ರೀಮಂತಿಕೆಯಲ್ಲಿ.ತನ್ನ ಮಾತೃ ಹೃದಯದಲ್ಲಿರುವ ಅಪಾರ ಪ್ರೀತಿಯನ್ನು ಬಡವರಿಗೆ, ನೊಂದವರಿಗೆ ಅದೆಷ್ಟೋ ಮಂದಿ ಸಂತ್ರಸ್ತರ ನೆರವಿಗೆ ಬರುವುದರ ಮೂಲಕ ಹಂಚುತ್ತಿದ್ದಾರೆ.ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಉನ್ನತ ಸ್ಥಾನದಲ್ಲಿದ್ದರೂ ತಾಯಿಭಾಷೆ,ನೆಲದ ಋಣ ತೀರಿಸುವ ಕೆಲಸ ಮಾಡುತ್ತಲೇ ಇರುತ್ತಾರೆ.ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದ ಅಗ್ರಜನೆನಿಸಿಕೊಂಡಿರುವ ಇನ್ಫೋಸಿಸ್ ಸಂಸ್ಥೆಯ ಒಡತಿಯಾಗಿದ್ದರೂ ತನ್ನನು ತಾನು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದಲ್ಲದೇ ಬರಹಗಾರ್ತಿಯಾಗಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲೂ ಛಾಪು ಮೂಡಿಸಿ ಹಣ , ಶ್ರೀಮಂತಿಕೆ ಬದುಕಿನ ಒಂದು ಭಾಗವಷ್ಟೇ ಎನ್ನುವುದನ್ನು ಸದಾ ನಿರೂಪಿಸುತ್ತಿದ್ದಾರೆ.ಇಂತಹ ಸೌಜನ್ಯದ ಮೂರ್ತಿ ಸುಧಾ ಅವರ ಅಪರೂಪದ ಚಿತ್ರಗಳು ಇಲ್ಲಿವೆ ನೋಡಿ...

1950 ರ ಆಗಸ್ಟ್‌ 19 ರಂದು ಧಾರವಾಡ ಜಿಲ್ಲೆಯ 'ಶಿಗ್ಗಾಂವ್‌' (ಜಿಲ್ಲೆಯ) (ಈಗ ಹಾವೇರಿ ಜಿಲ್ಲೆಯಲ್ಲಿದೆ) ಗ್ರಾಮದ ಕುಲಕರ್ಣಿ ಮನೆತನದಲ್ಲಿ ಜನಿಸಿದರು.
undefined
ಹುಬ್ಬಳ್ಳಿಯ ಬಿ.ವಿ.ಬಿ. ಕಾಲೇಜಿನಿಂದ ಎಂಜನಿಯರಿಂಗ್‌ ಬಿ.ಇ.(ಎಲೆಕ್ಟ್ರಿಕಲ್‌) ,ಬೆಂಗಳೂರಿನ ಟಾಟಾ ವಿಜ್ಞಾನ ಮಂದಿರದಿಂದ ಎಂ.ಇ. ಪದವಿ (1974) ಪಡೆದಿದ್ದಾರೆ.
undefined
ಸುಧಾ ಅವರು ಬೆಂಗಳೂರಿನ ಟಾಟಾ ಇನ್ಸ್ಟಿ ಟ್ಯೂಟ್' ನಲ್ಲಿ ಎಮ್.ಇ (ಕಂಪ್ಯೂಟರ್ ಸೈನ್ಸ್) ಪದವಿ ಗಳಿಸಿದರು. ಚಿನ್ನದ ಪದಕ ಗಳಿಸಿದ ಏಕೈಕ ಮಹಿಳಾ ವಿದ್ಯಾರ್ಥಿನಿ.
undefined
ಸುಧಾಮೂರ್ತಿ, ಬೆಂಗಳೂರಿನ 'ಇನ್ಫೋಸಿಸ್ ಸಂಸ್ಥೆ'ಯನ್ನು ತಮ್ಮ ಪತಿ, ಹಾಗೂ ಅವರ ಜೊತೆಗಾರರ ಸಹಯೋಗದಿಂದ ಕಟ್ಟಿ ಬೆಳೆಸಿದ ಸಾಧಕಿ.
undefined
ಸುಧಾ ಮೂರ್ತಿಯವರು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಹಲವು ಕೃತಿಗಳನ್ನು ಪ್ರಕಟಿಸಿದ್ದಾರೆ. ಕಲವು ಕೃತಿಗಳು ಕನ್ನಡ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿವೆ.ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಇವರ ಕೊಡುಗೆ ಅಪಾರ.
undefined
ಸುಧಾಮೂರ್ತಿ ಅವರಿಗೆ ಪದ್ಮಶ್ರೀ ,ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಇವರ ಸಾಧನೆಯನ್ನು ಗುರುತಿಸಿ ಹುಡುಕಿಕೊಂಡು ಬಂದಿವೆ.
undefined
1996ರಲ್ಲಿ ತಮ್ಮ ಪತಿ ಶ್ರೀ ನಾರಾಯಣಮೂರ್ತಿಯವರ ಜೊತೆಗೂಡಿ ಇನ್ಫೋಸಿಸ್ ಫೌಂಡೇಶನ್ ಪ್ರಾರಂಭಿಸದರು.
undefined
ಸದ್ಯ ಇನ್ಫೋಸಿಸ್ ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವದ ಅಗ್ರಗಣ್ಯ ಸಂಸ್ಥೆಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ.
undefined
ಸುಧಾಮೂರ್ತಿ ಅವರು ಇನ್ಫೋಸಿಸ್ ಫೌಂಡೇಶನ್ ಮೂಲಕ ನೊಣದವರ,ಹಸಿದವರ,ಬಡವರ ಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ.
undefined
ದೇವದಾಸಿ ಪದ್ದತಿಯ ವಿರುದ್ಧ ಹೋರಾಡಿ ನಿರ್ಮೂಲನೆ ಮಾಡುವಲ್ಲಿ ಯಶಸ್ವಿಯಾದವರು ಸುಧಾಮೂರ್ತಿ ಅವರು.
undefined
ಮೂರ್ತಿ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದು ಒಬ್ಬರು ರೋಹನ್ ಮತ್ತೊಬ್ಬರು ಅಕ್ಷತಾ.
undefined
ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷರಾಗಿದ್ದಾರೆ ಮತ್ತು ಗೇಟ್ಸ್ ಪ್ರತಿಷ್ಠಾನದ ಸಾರ್ವಜನಿಕ ಆರೋಗ್ಯ ಉಪಕ್ರಮಗಳ ಸದಸ್ಯರಾಗಿದ್ದಾರೆ.
undefined
ವೃತ್ತಿ ಜೀವನ ಆರಂಭಿಸುವ ದಿನಗಳಲ್ಲಿ ವಿಪ್ರೊ ಸಂಸ್ಥೆ ನಾರಾಯಣಮೂರ್ತಿ ಅವರಿಗೆ ಕೆಲಸ ನೀಡಲು ನಿರಾಕರಿಸಿತ್ತು ಇಂದು ಅದೇ ವ್ಯಕ್ತಿ ಸಾವಿರಾರು ಕೋಟಿಯ ಒಡೆಯನಾಗಲು ಸುಧಾ ಅವರ ತ್ಯಾಗ ,ಪ್ರೀತಿ ಮತ್ತು ನಂಬಿಕೆಯೇ ಕಾರಣ ಎನ್ನುವುದನ್ನು ಮರೆಯುವಂತಿಲ್ಲ.
undefined
ಪ್ರವಾಹ ಸಂತ್ರಸ್ತರಿಗೆ ,ಕೊರೋನಾ ಪೀಡಿತರಿಗೆ ತಮ್ಮ ಸಂಸ್ಥೆಯಿಂದ ಸೂರು ಕಲ್ಪಿಸಿ,ಅಗತ್ಯ ವಸ್ತುಗಳನ್ನು ಪೂರೈಸುವ ಮೂಲಕ ಮಾತೃ ಹೃದಯದ ಪ್ರೀತಿಯನ್ನು ಸಮಾಜಕ್ಕೆ ಪರಿಚಯಿಸಿದ್ದಾರೆ.
undefined
ಸಾವಿರಾರು ಕೋಟಿಯ ಒಡತಿಯಾಗಿದ್ದರೂ ತನ್ನ ಸರಳತೆ ,ಸಜ್ಜನಿಕೆಯಿಂದ ಜನರ ಮನಸ್ಸಿಗೆ ಹತ್ತಿರವಾಗುತ್ತಾ ಆದರ್ಶ ವ್ಯಕ್ತಿಯಾಗಿದ್ದಾರೆ ಸುಧಾಮೂರ್ತಿಯವರು.ಇವರ ಈ ಸ್ವಪ್ರೇರಿತ ಕಾರ್ಯಗಳು ಹೀಗೆ ಮುಂದುವರೆಯಲಿ,ಮತ್ತಷ್ಟು ಜನರಿಗೆ ಮಾದರಿಯಾಗಲಿ..
undefined
click me!