ಮಕ್ಕಳಿರಲ್ಲವ್ವ ಮನೆ ತುಂಬಾ - 5 ವರ್ಷದಲ್ಲಿ 8 ಮಕ್ಕಳು!

First Published May 14, 2020, 2:18 PM IST

ಆಸ್ಟ್ರೇಲಿಯಾದ ಪರ್ತ್‌ನಲ್ಲಿ ವಾಸಿಸುವ ಮಹಿಳೆಯೊಬ್ಬಳು ಮಕ್ಕಳನ್ನು ಹಡೆಯುವುದು ಮತ್ತು ಬೆಳೆಸುವುದನ್ನು ಎಂಜಾಯ್‌ ಮಾಡುತ್ತಾಳೆ ಎನ್ನಬಹುದು. 27 ವರ್ಷದ ಕೋಲ್ ಡನ್‌ಸ್ಟಾನ್ ಎಂಬ ಮಹಿಳೆ 6 ಮಕ್ಕಳನ್ನು ಹೊಂದಿದ್ದು ಮತ್ತು ಈಗ ಅವಳಿ ಮಕ್ಕಳು ಅವಳ ಗರ್ಭದಲ್ಲಿ ಬೆಳೆಯುತ್ತಿದೆ. 5 ವರ್ಷದಲ್ಲಿ 8 ಮಕ್ಕಳ ತಾಯಿಯಾಗಿರುವ ಕೀರ್ತಿ ಈಕೆಯದ್ದು. ಕೋಲ್ ಸೋಷಿಯಲ್ ಮೀಡಿಯಾದಲ್ಲಿ   ತನ್ನ ದಿನಚರಿಯನ್ನು ಹಂಚಿಕೊಂಡಿದ್ದಾಳೆ. ಲಾಕ್‌ಡೌನ್‌ನಲ್ಲಿ ಮನೆಯಲ್ಲಿ ಮಕ್ಕಳೊಂದಿಗೆ ಅವರ ದಿನಗಳು ಹೇಗೆ ಕಳೆಯುತ್ತಿದೆ ಎಂಬುದನ್ನು ಸಹ ತಿಳಿಸಿದ್ದಾಳೆ ಕೋಲ್.

ಆಸ್ಟ್ರೇಲಿಯಾದ ಪರ್ತ್‌ನಲ್ಲಿ ವಾಸಿಸುವ 27 ವರ್ಷದ ಕೋಲ್ ಡನ್‌ಸ್ಟಾನ್ ಈ ದಿನಗಳಲ್ಲಿ ಚರ್ಚೆಯಲ್ಲಿದ್ದಾರೆ. ಕೇವಲ ಐದು ವರ್ಷಗಳಲ್ಲಿ, ಕೋಲ್ 6 ಮಕ್ಕಳಿಗೆ ಜನ್ಮ ನೀಡಿದ್ದು, ಪ್ರಸ್ತುತ ಅವಳ ಗರ್ಭದಲ್ಲಿ ಅವಳಿ ಮಕ್ಕಳಿವೆ.
undefined
ಕೋಲ್ ತನ್ನ 22ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ತಾಯಿಯಾಗಿದ್ದು. ಆ ಸಮಯದಲ್ಲಿ ಆಕೆಜನ್ಮ ನೀಡಿದ್ದು ತ್ರಿವಳಿ ಮಕ್ಕಳಿಗೆ.
undefined
ಎರಡು ವರ್ಷಗಳ ನಂತರ, ಗರ್ಭಿಣಿಯಾದಾಗ ಮತ್ತೆ ಹುಟ್ಟಿದ್ದು ಮೂರು ಮಕ್ಕಳು. ಆಶ್ಚರ್ಯಕರ ಸಂಗತಿಯೆಂದರೆ ಕೋಲ್ ಎರಡು ಬಾರಿಯೂ ನ್ಯಾಚುರಲ್‌ ಆಗಿಯೇ ಕನ್ಸಿವ್‌ ಆಗಿದ್ದರು.
undefined
ಈಗ ಮತ್ತೆ ಗರ್ಭಿಣಿಯಾಗಿರುವ ಕೋಲ್ ಈ ಬಾರಿ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾಳೆ. ಕೋಲ್ ತನ್ನ ರೂಟೀನ್‌ ಬಗ್ಗೆ ಜನರಿಗೆ ತಿಳಿಸಿದ್ದಾರೆ.
undefined
ಬೇರೆ ಕಡೆ ವಾಸಿಸುವ ಕೋಲ್‌ನ ಗಂಡ ಲಾಕ್ಡೌನ್ ಸಮಯದಲ್ಲಿ ತನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ ಇದ್ದು, ಹೆಚ್ಚಿನ ಸಮಯವನ್ನು ಮಕ್ಕಳೊಂದಿಗೆ ಕಳೆಯುತ್ತಿದ್ದಾನೆ.
undefined
ಮಕ್ಕಳಿರಲ್ವಾ ಮನೆ ತುಂಬಾ ಅನ್ನೋ ಮಾತು ಕೋಲ್‌ನಂತರೇ ಮಾಡಿರಬೇಕು.
undefined
ಲಾಕ್‌ಡೌನ್‌ಗೆ ಮೊದಲು ಮಕ್ಕಳು ಶಾಲೆಯಲ್ಲಿ ಸ್ವಲ್ಪ ಸಮಯ ಕಳೆಯುತ್ತಿದ್ದರು. ಆದರೆ ಈಗ ಕೋಲ್‌ನ ಎಲ್ಲಾ ಮಕ್ಕಳು ದಿನವಿಡೀ ಮನೆಯಲ್ಲೇ ಇರುತ್ತಾರೆ, ಆದರೆ ಕೋಲ್ ಮಕ್ಕಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳುತ್ತಾರೆ.
undefined
ನವೆಂಬರ್‌ನಲ್ಲಿ, ಕೋಲ್ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದು, ನಂತರ ಅವರು ಒಟ್ಟು 8 ಮಕ್ಕಳ ತಾಯಿಯಾಗುತ್ತಾರೆ. ಕೋಲ್ ತನಗಾಗಿ ಮತ್ತು ತನ್ನ ಮಕ್ಕಳಿಗಾಗಿ ಯೂಟ್ಯೂಬ್ ಚಾನೆಲ್ ಅನ್ನು ಸಹ ಪ್ರಾರಂಭಿಸಿದ್ದಾರೆ.
undefined
6 ಮಕ್ಕಳ ಹೊರತಾಗಿಯೂ, ಕೋಲ್ ಮನೆಯಿಂದ ಆನ್‌ಲೈನ್ ಆಟಿಕೆ ವ್ಯಾಪಾರವನ್ನೂಮಾಡುತ್ತಾಳೆ. ಆದರೆ ಲಾಕ್‌ಡೌನ್‌ನಿಂದಾಗಿ ಎಲ್ಲಾ ಸಮಯವನ್ನೂ ಮಕ್ಕಳಿಗೆ ನೀಡುತ್ತಿದ್ದಾಳೆ.
undefined
ಕೋಲ್ ಇನ್ನೂ ಹೆಚ್ಚಿನ ಮಕ್ಕಳ ಜೊತೆ ತನ್ನ ಕುಟುಂಬವನ್ನು ಬೆಳೆಸಲು ಬಯಸುತ್ತಾಳಂತೆ. ಅವರ ಪ್ರಕಾರ, ಮಕ್ಕಳಿಂದ ಸುತ್ತುವರಿಯುವುದನ್ನು ಅವರು ಇಷ್ಟಪಡುತ್ತಾರೆ.
undefined
ಸಂಜೆ ನಾಲ್ಕು ಗಂಟೆಯಿಂದ ತಯಾರಿ ಪ್ರಾರಂಭಿಸಿದರೆ ರಾತ್ರಿ 8 ಗಂಟೆಗೆ ಎಲ್ಲಾ ಮಕ್ಕಳು ಮಲಗಲು ಬೆಡ್‌ರೂಮ್‌ಗೆ ಹೋಗುತ್ತಾರೆ ಎಂದು ತಮ್ಮ ದಿನಚರಿಯ ಬಗ್ಗೆ ಜನರೊಂದಿಗೆ ಹಂಚಿಕೊಂಡಿದ್ದಾರೆ ಕೋಲ್.
undefined
click me!