ದೇಶದಲ್ಲಿ ಗ್ಯಾಸ್ ಅಭಾವದ ಆತಂಕ ಹೆಚ್ಚಾಗಿದ್ದು, ಲಭ್ಯವಿರುವ ಸಿಲಿಂಡರ್ ಅನ್ನು ಹೆಚ್ಚು ದಿನ ಬಳಸಬೇಕಾದ ಅನಿವಾರ್ಯತೆ ಇದೆ. ಬರ್ನರ್ ಕ್ಲೀನಿಂಗ್, ಪಾತ್ರೆಗೆ ಮುಚ್ಚಳ ಮುಚ್ಚುವುದು, ಮತ್ತು ಅಕ್ಕಿ-ಬೇಳೆ ನೆನೆಸಿಡುವಂತಹ ಸರಳ ಉಪಾಯ ಹೇಗೆ ಗ್ಯಾಸ್ ಹೆಚ್ಚು ದಿನ ಬರುತ್ತದೆ ಎನ್ನುವ ಡಿಟೇಲ್ಸ್.
ಈಗ ಎಲ್ಲೆಲ್ಲೂ ಗ್ಯಾಸ್ಗೆ ಹಾಹಾಕಾರ. ಸದ್ಯ ಸಾಕಷ್ಟು ದಾಸ್ತಾನು ಭಾರತದಲ್ಲಿ ಇದ್ದರೂ, ಕೆಲವರು ಕಾಳಸಂತೆಯಲ್ಲಿ ಅದನ್ನು ಮಾರಾಟ ಮಾಡಲು ಸ್ಟಾಕ್ ಇಟ್ಟುಕೊಂಡಿದ್ದರೆ, ಇನ್ನು ಕೆಲವರು ಹೆಚ್ಚಿನ ದುಡ್ಡಿಗೆ ಮಾರಾಟ ಮಾಡುತ್ತಿದ್ದಾರೆ. ಅದೇ ಇನ್ನೊಂದೆಡೆ ಯುದ್ಧ ಇನ್ನೂ ಬಹಳಷ್ಟು ದಿನ ಮುಂದುವರೆದರೆ ಅಭಾವ ಅಂತೂ ಖಂಡಿತ ತಟ್ಟೇ ತಟ್ಟುತ್ತದೆ. ಇದಾಗಲೇ ತಿಂಗಳ ಒಳಗೆ ಬುಕ್ ಮಾಡಿದ್ರೆ ಗ್ಯಾಸ್ ಬುಕಿಂಗ್ ಆಗುತ್ತಿಲ್ಲ. ಸರ್ಕಾರ ಕೂಡ ಮಿತವಾಗಿ ಗ್ಯಾಸ್ ಬಳಸುವಂತೆ ಆದೇಶ ಹೊರಡಿಸಿದೆ. ಹಲವರು ಇದಾಗಲೇ ಇಂಡಕ್ಷನ್ ಸ್ಟವ್ ಮೊರೆ ಹೋಗಿದ್ದಾರೆ. ಅದೇನೇ ಇದ್ದರೂ ಈ ಏಳು ಟಿಪ್ಸ್ ಫಾಲೋ ಮಾಡಿದ್ರೆ ಖಂಡಿತವಾಗಿಯೂ ನಿಮ್ಮ ಗ್ಯಾಸ್ ಇನ್ನೂ 15-10 ದಿನ ಬಾಳಿಕೆ ಬರುತ್ತದೆ. ಈ ಬಗ್ಗೆ ಕಾವ್ಯಾ ಶಾಸ್ತ್ರಿಯವರು ಮಾಹಿತಿ ನೀಡಿದ್ದಾರೆ. ಅವರು ತಮ್ಮ kaavya.shastry ಇನ್ಸ್ಟಾಗ್ರಾಮ್ನಲ್ಲಿ ಈ ವಿಷಯದ ಬಗ್ಗೆ ಮಾತನಾಡಿದ್ದಾರೆ.
27
ಬರ್ನರ್ ಕ್ಲೀನ್ ಮಾಡುವುದು
ಮೊದಲನೆಯದ್ದಾಗಿ ಬರ್ನರ್, ಸಿಲಿಂಡರ್ ಪೈಪ್, ರೆಗ್ಯುಲೇಟರ್ ಎಲ್ಲವೂ ಸರಿಯಾಗಿದೆಯೇ ಎಂದು ಚೆಕ್ ಮಾಡಿಕೊಳ್ಳಿ. ಇದು ಸರಿಯಿರದೇ ಹೋದರೆ, ಗ್ಯಾಸ್ ಲೀಕ್ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಬರ್ನರ್ನಿಂದ ಬರುವ ಫ್ಲೇಮ್ ನೀಲಿಯಾಗಿದ್ದರೆ ಅದು ಸರಿಯಾಗಿದೆ ಎಂದರ್ಥ. ಕೆಂಪು ಅಥವಾ ಬೇರೆ ಬಣ್ಣ ಬಂದರೆ ಏನೋ ಸಮಸ್ಯೆ ಇದೆ ಎಂದರ್ಥ.
37
ಕುದಿ ಬಂದ ತಕ್ಷಣ
ಹೈ ಫ್ಲೇಮ್ ಇಟ್ಟು ಒಂದು ಕುದಿ ಬಂದ ತಕ್ಷಣ ಗ್ಯಾಸ್ ಅನ್ನು ಸಣ್ಣ ಮಾಡಿ. ಇದರಿಂದ ಗ್ಯಾಸ್ ಉಳಿತಾಯವಾಗುತ್ತದೆ.
ಮುಚ್ಚಳ, ಪ್ಲೇಟ್ ಯಾವುದನ್ನಾದರೂ ಪಾತ್ರೆಯ ಮೇಲೆ ಮುಚ್ಚಿಡಿ. ಇದರಿಂದ ಬೇಗನೇ ಬೇಳೆ, ಕಾಳು, ತರಕಾರಿ ಬೇಯುತ್ತವೆ.
57
ಅಗಲವಾಗಿರುವ ಪಾತ್ರೆ
ಸ್ಥಳ ಅಗಲವಾಗಿರುವ ಪಾತ್ರ ಬಳಸಿ. ಇದರಿಂದ ಗ್ಯಾಸ್ ಎಲ್ಲಾ ಕಡೆ ಸ್ಪ್ರೆಡ್ ಆಗಿ ಬೇಗ ಆಹಾರ ಪದಾರ್ಥ ಬೇಯುತ್ತವೆ.
67
ಅಕ್ಕಿ- ಬೇಳೆ ಟಿಪ್ಸ್
ಅಕ್ಕಿ, ಬೇಳೆ ಇಂಥವುಗಳನ್ನು ಬೇಯಿಸುವ ಮುನ್ನ ಚೆನ್ನಾಗಿ ನೆನೆಸಿಟ್ಟರೆ ಬೇಗ ಬೇಯುತ್ತವೆ.
77
ಕೊನೆಯದಾಗಿ
ಪಾತ್ರೆ ತುಂಬಾ ಬಿಸಿಯಾಗಿರುವ ಕಾರಣ, ಮಾಮೂಲು ಆಫ್ ಮಾಡುವುದಕ್ಕಿಂತ ತುಸು ಮುಂಚೆ ಆಫ್ ಮಾಡಿದ್ರೆ ಅದರ ಫ್ಲೇಮ್ ಹಾಗೆಯೇ ಇರುವುದರಿಂದ ಅದು ಬಿಸಿಯಾಗುತ್ತಲೇ ಇರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಅಡುಗೆಗೆ ಇಟ್ಟುಬಿಟ್ಟು ಮೊಬೈಲ್ ಹಿಡಿದುಕೊಂಡು ಕುಳಿತರೆ ಕಥೆ ಏನು ಎನ್ನೋದು ಹೆಂಗಸರಿಗೆ ಚೆನ್ನಾಗಿ ಗೊತ್ತು. ಆದ್ದರಿಂದ ಅಡುಗೆ ಬೇಯುವವರೆಗೆ ಅಲ್ಲಿಯೇ ಇದ್ದು, ಬೆಂದ ತಕ್ಷಣ ಗ್ಯಾಸ್ ಆಫ್ ಮಾಡಿ. ಇನ್ನೊಂದು ಪದೇ ಪದೇ ಗ್ಯಾಸ್ ಹಚ್ಚಿ ಬಿಸಿ ಮಾಡುವುದನ್ನು ತಪ್ಪಿಸಲು ಸಾಧ್ಯವಾಗತ್ತಾ ನೋಡಿ. ಒಟ್ಟಿಗೇ ಮನೆಯವರು ಎಲ್ಲರೂ ಊಟನೋ, ತಿಂಡಿನೋ ಮಾಡಿದರೆ ಪದೇ ಪದೇ ಬಿಸಿ ಮಾಡುವ ತಾಪತ್ರಯ ಇರುವುದಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.