Viral ಆಗ್ತಿದೆ ಮಹಿಳೆಯ ಮೆಟರ್ನಿಟಿ ಶೂಟ್ … ತುಂಬು ಗರ್ಭಿಣಿಯ ಯೋಗ ಭಂಗಿ ನೋಡಿ ನೆಟ್ಟಿಗರು ಶಾಕ್!

Published : Mar 20, 2026, 03:44 PM IST

ಗರ್ಭಿಣಿ ಮಹಿಳೆಯರ ಮೆಟರ್ನಿಟಿ ಫೋಟೊ ಶೂಟ್ ಇದೀಗ ಟ್ರೆಂಡಿಂಗ್ ನಲ್ಲಿದೆ. ತಾಯಿಯಾಗುವ ಸಂಭ್ರಮದಲ್ಲಿರುವ ಮಹಿಳೆಯರು, ಭಿನ್ನ, ವಿಭಿನ್ನ ರೀತಿಯಲ್ಲಿ ಫೋಟೊ ಶೂಟ್ ಮಾಡಿಸಿಕೊಳ್ಳುತ್ತಿರುವುದನ್ನು ಕಾಣಬಹುದು. ಇದೀಗ ಸೋಶಿಯಲ್ ಮೀಡಿಯಾದಲ್ಲಿ ವಿಭಿನ್ನವಾದ ಫೋಟೊ ಶೂಟ್ ವೈರಲ್ ಆಗಿದೆ. 

PREV
16
ಮೆಟರ್ನಿಟಿ ಫೊಟೊ ಶೂಟ್

ಇತ್ತೀಚಿನ ದಿನಗಳಲ್ಲಿ ಮೆಟರ್ನಿಟಿ ಫೋಟೊ ಶೂಟ್ ಎಷ್ಟೊಂದು ಟ್ರೆಂಡಿಂಗ್ ನಲ್ಲಿದೆ ಅಂದ್ರೆ, ಮಹಿಳೆಯರು ತಮ್ಮ ತಾಯ್ತನದ ಸಂಭ್ರಮವನ್ನು ಜೀವನ ಪೂರ್ತಿ ನೆನಪಿಟ್ಟುಕೊಳ್ಳಲು ವಿವಿಧ ರೀತಿಯಲ್ಲಿ ಫೋಟೊ ಶೂಟ್ ಮಾಡಿಸುತ್ತಾರೆ. ಇದೀಗ ಅಂತಹುದೇ ಒಂದು ಫೋಟೊ ಶೂಟ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇಂತಹ ಫೋಟೊ ಶೂಟ್ ಇದುವರೆಗೂ ಯಾರೂ ಮಾಡಿಸಿಯೇ ಇಲ್ವೇನೋ ಎನ್ನುವಂತಿದೆ.

26
ವೈರಲ್ ಆಗುತ್ತಿರುವ ಫೋಟೊ ಶೂಟ್

ಹೆಚ್ಚಾಗಿ ಮೆಟರ್ನಿಟಿ ಶೂಟಲ್ಲಿ ಕಪಲ್ಸ್ ಜೊತೆಯಾಗಿ ನಿಂತುಕೊಂಡು ಹೊಟ್ಟೆ ಮೇಲೆ ಕೈ ಇಟ್ಟು ಫೋಟೋ ಶೂಟ್ ಮಾಡಿಸ್ತಾರೆ, ಇನ್ನೂ ಕೆಲವರು ಹೊಟ್ಟೆ ಮೇಲೆ ಪೈಂಟಿಂಗ್ ಮಾಡಿ ಶೂಟ್ ಮಾಡಿಸ್ತಾರೆ, ಮತ್ತೆ ಕೆಲವರು ಇನ್ನೂ ಅತಿರೇಕಕ್ಕೆ ಹೋಗಿ ಅರೆ ನಗ್ನ, ನಗ್ನರಾಗಿ ಮೆಟರ್ನಿಟಿ ಫೋಟೊ ಶೂಟ್ ಮಾಡಿಸುತ್ತಾರೆ. ಆದರೆ ಅದಕ್ಕೆ ವಿರುದ್ಧವಾಗಿ ಮಹಿಳೆಯೊಬ್ಬರು ಯೋಗ ಭಂಗಿಯಲ್ಲಿ ಶೂಟ್ ಮಾಡಿಸಿದ್ದಾರೆ.

36
ಯೋಗ ಭಂಗಿಯಲ್ಲಿ ಗರ್ಭಿಣಿ ಮಹಿಳೆ ಪೋಸ್

ಯೋಗ ಯಾತ್ರ ವಿತ್ ಶಶಿ ಎನ್ನುವ ಇನ್’ಸ್ಟಾಗ್ರಾಂ ಪೇಜ್ ಹೊಂದಿರುವ ಶಶಿ ಪ್ರಭಾ ದ್ವಿವೇದಿ ಎನ್ನುವ ಬೆಂಗಳೂರಿನಲ್ಲಿ ನೆಲೆಸಿರುವ ಯೋಗ ಟ್ರೈನರ್, ಅತಿ ಕಷ್ಟವಾದ ಭಂಗಿಯಲ್ಲಿ ತಮ್ಮ ಪ್ರೆಗ್ನೆನ್ಸಿಯಲ್ಲಿ ಯೋಗ ಮಾಡುತ್ತಾ, ಫೋಟೊ ಶೂಟ್ ಮಾಡಿಸಿದ್ದು, ಇದನ್ನು ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಇದವರೆಗೂ ಯಾರು ಕೂಡ ಈ ರೀತಿ ಫೋಟೊ ಶೂಟ್ ಮಾಡಿಸಿಲ್ಲ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

46
ಶಶಿ ಪ್ರಭಾ ದ್ವಿವೇದಿ

ಶಶಿ ಪ್ರಭಾ ದ್ವಿವೇದಿ ಯೋಗ ಟ್ರೈನರ್ ಆಗಿದ್ದು, ಬೆಂಗಳೂರಿನ ವರ್ತೂರಿನಲ್ಲಿ ಯೋಗ ಸ್ಟುಡಿಯೋ ಹೊಂದಿದ್ದಾರೆ. ಇದೀಗ ಚೈತ್ರ ನವರಾತ್ರಿ ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ತುಂಬು ಗರ್ಭಿಣಿಯಾಗಿರುವ ಶಶಿ ಪ್ರಭಾ ಕೆಂಪು ಬಣ್ಣದ ಸೀರೆಯುಟ್ಟು ತುಂಬಾ ಕಠಿಣವಾದ, ನೋಡಿದರೆ ಮೈ ಜುಂ ಎನಿಸುವಂತಹ ಯೋಗ ಭಂಗಿಗಳನ್ನ ಪ್ರದರ್ಶಿಸಿದ್ದಾರೆ.

56
ಮೆಚ್ಚಿಕೊಂಡ ನೆಟ್ಟಿಗರು

ಇದೀಗ ಸಾಕಷ್ಟು ವೈರಲ್ ಆಗುತ್ತಿದ್ದು, ಜನ ಇದನ್ನ ಫೆಮಿನೈನ್ ಎನರ್ಜಿ, ಸ್ತ್ರೀಶಕ್ತಿ, ಇಷ್ಟೊಂದು ಪವರ್ ಫುಲ್ ಆಗಿರುವ ಇಷ್ಟೊಂದು ಶಾಂತಿಯುತ, ಮಾತೃತ್ವದ ಮೆಟರ್ನಿಟಿ ಫೋಟೊಶೂಟ್ ಇದುವರೆಗೆ ನೋಡಿಲ್ಲ. ಅದ್ಭುತ, ಮಗು ಕೂಡ ನಿಮ್ಮಂತೆ ಸ್ಟ್ರಾಂಗ್ ಆಗಿ ಬರಲಿದೆ. ನಿಮ್ಮ ಎನರ್ಜಿಗೆ ಒಂದು ಸೆಲ್ಯೂಟ್ ಎನ್ನುತ್ತಾ ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.

66
ಇದನ್ನ ಮಾಡ್ಬೇಡಿ ಡೇಂಜರ್ ಎಂದ ಹಲವರು

ಇನ್ನೂ ಹಲವು ಜನರು ಮಹಿಳೆ ಮಾಡುತ್ತಿರುವ ಯೋಗ ಭಂಗಿಗಳಲ್ಲಿ ಕೆಲವೊಂದು ಆಸನಗಳನ್ನು ನೋಡಿ, ಗರ್ಭಾವಸ್ಥೆಯಲ್ಲಿ ಮಯೂರಾಸನ ಮಾಡಲೇಬಾರದು, ಇದು ಮಗುವಿನ ಬೆಳವಣಿಗೆ ಮೇಲೆ, ಭ್ರೂಣದ ಮೇಲೆ ಪರಿಣಾಮ ಬೀರುತ್ತದೆ ಎಂದಿದ್ದಾರೆ. ನೀವು ತುಂಬಾನೇ ಸ್ಟ್ರಾಂಗ್ ಇರಬಹುದು, ಆದರೆ ಈ ಸಮಯದಲ್ಲಿ ಇಂತಹ ಸಾಹಸ ಬೇಡ ಎಂದಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories