ಫ್ರಿಜ್‌ನಲ್ಲಿದ್ರೂ ಬೇಸಿಗೆಯಲ್ಲಿ ತರಕಾರಿ ಬೇಗ ಕೊಳೆಯುತ್ತಿದ್ರೆ ಈ ಸ್ಮಾರ್ಟ್ ಟ್ರಿಕ್ಸ್‌ ತಪ್ಪದೇ ಟ್ರೈ ಮಾಡಿ

Published : Mar 12, 2026, 11:05 AM IST

Summer Kitchen Hacks: ಬೇಸಿಗೆಯ ಸುಡುವ ಬಿಸಿಲಿಗೆ ಮಾರುಕಟ್ಟೆಯಿಂದ ತಂದ ತಾಜಾ ತರಕಾರಿಗಳು ಕೇವಲ ಒಂದೇ ದಿನದಲ್ಲಿ ಬಾಡಿ ಹೋಗುವುದು ಅಥವಾ ಕೊಳೆಯುವುದು ಎಲ್ಲರ ಮನೆಯಲ್ಲೂ ದೊಡ್ಡ ತಲೆನೋವು. ರೆಫ್ರಿಜರೇಟರ್‌ನಲ್ಲಿ ಇಟ್ಟಿದ್ದರೂ ತರಕಾರಿಗಳು ತಮ್ಮ ತಾಜಾತನವನ್ನು ಕಳೆದುಕೊಳ್ಳುತ್ತವೆ.

PREV
18
ಬೇಗನೆ ಕೊಳೆಯುವ ತರಕಾರಿಗಳು

ಬೇಸಿಗೆ ಕಾಲದಲ್ಲಿ ತರಕಾರಿಗಳು ಬೇಗನೆ ಹಾಳಾಗುವುದು ದೊಡ್ಡ ಸಮಸ್ಯೆ. ರೆಫ್ರಿಜರೇಟರ್‌ನಲ್ಲಿ ಇಟ್ಟಿದ್ದರೂ ಟೊಮೆಟೊ ಮೃದುವಾಗುತ್ತದೆ. ಹಸಿರು ತರಕಾರಿಗಳು ಒಣಗಲು ಪ್ರಾರಂಭಿಸುತ್ತವೆ ಮತ್ತು ಬೆಂಡೆಕಾಯಿ ಹಾಗೂ ಕುಂಬಳಕಾಯಿ ಕಪ್ಪು ಬಣ್ಣಕ್ಕೆ ತಿರುಗುತ್ತವೆ. ತೀವ್ರವಾದ ಶಾಖ ಮತ್ತು ತೇವಾಂಶದಿಂದಾಗಿ ಬ್ಯಾಕ್ಟೀರಿಯಾಗಳು ಬೇಗನೆ ಬೆಳೆದು ತರಕಾರಿಗಳು ಕೊಳೆಯಲು ಕಾರಣವಾಗುತ್ತವೆ. ಕೆಲವು ಸರಳ ಅಡುಗೆ ಮನೆ ಸಲಹೆಗಳು ತರಕಾರಿಗಳನ್ನು ಧೀರ್ಘಕಾಲ ತಾಜಾವಾಗಿಡಲು ಸಹಾಯ ಮಾಡುತ್ತದೆ.

28
ತರಕಾರಿಗಳನ್ನು ತಂದ ತಕ್ಷಣ ತೊಳೆಯಬೇಡಿ

ಮಾರುಕಟ್ಟೆಯಿಂದ ತಂದ ತಕ್ಷಣ ತರಕಾರಿಗಳನ್ನು ತೊಳೆಯುವುದು ಸೂಕ್ತವಲ್ಲ. ತೇವಾಂಶ ಉಳಿದರೆ ಅವು ಬೇಗನೆ ಕೊಳೆಯುತ್ತವೆ. ಮೊದಲು ಒಣ ಬಟ್ಟೆಯಿಂದ ಸ್ವಚ್ಛಗೊಳಿಸಿ. ಬಳಸಲು ಸಿದ್ಧವಾದಾಗ ಮಾತ್ರ ತೊಳೆಯಿರಿ. ಒಂದು ವೇಳೆ ತೊಳೆದರೆ, ಫ್ರಿಜ್‌ನಲ್ಲಿಡುವ ಮೊದಲು ಚೆನ್ನಾಗಿ ಒಣಗಿಸಿ.

38
ಹಸಿರು ತರಕಾರಿಗಳನ್ನು ಟಿಶ್ಯೂ ಪೇಪರ್‌ನಲ್ಲಿ ಸುತ್ತಿ

ಕೊತ್ತಂಬರಿ, ಪುದೀನಾ, ಪಾಲಕ್ ಅಥವಾ ಮೆಂತ್ಯದಂತಹ ಸೊಪ್ಪುಗಳು ಬೇಗನೆ ಒಣಗುತ್ತವೆ. ಇವುಗಳನ್ನು ಸ್ವಲ್ಪ ಒದ್ದೆಯಾದ ಪೇಪರ್ ಟವೆಲ್‌ನಲ್ಲಿ (ಸಾಮಾನ್ಯ ಟಿಶ್ಯೂ ಪೇಪರ್‌ಗಿಂತ ಇದು ಸ್ವಲ್ಪ ದಪ್ಪವಾಗಿರುತ್ತದೆ) ಸುತ್ತಿ, ಗಾಳಿಯಾಡದ ಡಬ್ಬಿ ಅಥವಾ ಜಿಪ್‌ಲಾಕ್ ಬ್ಯಾಕ್‌ನಲ್ಲಿ ಸಂಗ್ರಹಿಸಿ. ಇದು 5-6 ದಿನಗಳವರೆಗೆ ತಾಜಾವಾಗಿರುತ್ತದೆ.

48
ಟೊಮೆಟೊ ಮತ್ತು ಆಲೂಗಡ್ಡೆಯನ್ನು ಫ್ರಿಜ್‌ನಲ್ಲಿ ಇಡಬೇಡಿ

ಇವುಗಳನ್ನು ಫ್ರಿಜ್‌ನಲ್ಲಿ ಇಡುವುದರಿಂದ ರುಚಿ ಮತ್ತು ವಿನ್ಯಾಸ ಹಾಳಾಗುತ್ತದೆ. ಟೊಮೆಟೊವನ್ನು ಕೊಠಡಿಯ ತಾಪಮಾನದಲ್ಲಿ ಸಂಗ್ರಹಿಸಿ. ಆಲೂಗಡ್ಡೆ ಮತ್ತು ಈರುಳ್ಳಿಯನ್ನು ತಂಪಾದ, ಗಾಳಿಯಾಡುವ ಜಾಗದಲ್ಲಿ ಇಡಿ (ಪ್ಲಾಸ್ಟಿಕ್ ಚೀಲ ಬಳಸಬೇಡಿ).

58
ತರಕಾರಿಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ

ಕೆಲವು ಹಣ್ಣುಗಳು ಮತ್ತು ತರಕಾರಿಗಳು ಎಥಿಲೀನ್ ಅನಿಲವನ್ನು ಬಿಡುಗಡೆ ಮಾಡುತ್ತವೆ, ಇದು ಪಕ್ಕದಲ್ಲಿರುವ ಇತರ ತರಕಾರಿಗಳು ಬೇಗನೆ ಹಣ್ಣಾಗಿ ಹಾಳಾಗುವಂತೆ ಮಾಡುತ್ತದೆ. ಟೊಮೆಟೊ, ಬಾಳೆಹಣ್ಣು ಮತ್ತು ಸೇಬುಗಳನ್ನು ಹಸಿರು ತರಕಾರಿಗಳಿಂದ ಪ್ರತ್ಯೇಕವಾಗಿ ಇರಿಸಿ.

68
ಕ್ಯಾರೆಟ್ ಮತ್ತು ಮೂಲಂಗಿಯನ್ನು ನೀರಿನಲ್ಲಿ ಇರಿಸಿ

ಇವು ಬೇಗನೆ ಒಣಗಿ ಮೃದುವಾಗುತ್ತವೆ. ಸಿಪ್ಪೆ ಸುಲಿದು ತುಂಡುಗಳಾಗಿ ಕತ್ತರಿಸಿ. ಫ್ರಿಜ್‌ನಲ್ಲಿ ನೀರಿನಿಂದ ತುಂಬಿದ ಗಾಳಿಯಾಡದ ಡಬ್ಬಿಯಲ್ಲಿ ಸಂಗ್ರಹಿಸಿ. ಪ್ರತಿದಿನ ನೀರನ್ನು ಬದಲಾಯಿಸಿ.

78
ಹಸಿರು ಮೆಣಸಿನಕಾಯಿಗಳ ತೊಟ್ಟನ್ನು ತೆಗೆದು ಇರಿಸಿ

ಮೆಣಸಿನಕಾಯಿಗಳು ಫ್ರಿಜ್‌ನಲ್ಲೂ ಬೇಗನೆ ಕೊಳೆಯಬಹುದು. ಮೆಣಸಿನಕಾಯಿಗಳಿಂದ ಕಾಂಡಗಳನ್ನು (ತೊಟ್ಟು) ತೆಗೆದುಹಾಕಿ. ನಂತರ ಪೇಪರ್ ಟವೆಲ್‌ನಲ್ಲಿ ಸುತ್ತಿ ಡಬ್ಬಿಯಲ್ಲಿ ಸಂಗ್ರಹಿಸಿ.

88
ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಪೇಪರ್‌ ಬ್ಯಾಗ್‌ನಲ್ಲಿ ಇರಿಸಿ

ಪ್ಲಾಸ್ಟಿಕ್ ಚೀಲದಲ್ಲಿ ಇಟ್ಟರೆ ತೇವಾಂಶ ಸಂಗ್ರಹವಾಗಿ ಬೇಗನೆ ಹಾಳಾಗಬಹುದು. ಇವುಗಳನ್ನು ಪೇಪರ್‌ ಬ್ಯಾಗ್‌ ಅಥವಾ ತೆರೆದ ಬುಟ್ಟಿಯಲ್ಲಿ, ಒಣ ಹಾಗೂ ಗಾಳಿಯಾಡುವ ಸ್ಥಳದಲ್ಲಿ ಸಂಗ್ರಹಿಸಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories