ಯಾರು ಈ ಲಾಫಿಂಗ್ ಬುದ್ಧ?

Published : Jun 20, 2023, 04:15 PM IST

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಇರಿಸಲಾದ ಪ್ರತಿಯೊಂದು ವಸ್ತುವು ನಮ್ಮ ಮೇಲೆ ಧನಾತ್ಮಕ ಅಥವಾ ನಕಾರಾತ್ಮಕ ಪರಿಣಾಮ ಬೀರುತ್ತೆ. ಆದ್ದರಿಂದ, ಶುಭವೆಂದು ಪರಿಗಣಿಸಲಾದ ವಿಷಯಗಳನ್ನು ಸಹ ತಪ್ಪು ದಿಕ್ಕಿನಲ್ಲಿ ಇರಿಸಿದರೆ, ಅದು ಕೆಟ್ಟ ಪರಿಣಾಮ ಬೀರಬಹುದು.

PREV
17
ಯಾರು ಈ ಲಾಫಿಂಗ್ ಬುದ್ಧ?

ಅನೇಕರು ಮನೆಯಲ್ಲಿ ಲಾಫಿಂಗ್ ಬುದ್ಧನ (Laughing Buddha) ಪ್ರತಿಮೆಯನ್ನು ಇಡೋದನ್ನು ನೀವು ನೋಡಿರಬಹುದು. ವಾಸ್ತು ಶಾಸ್ತ್ರದಲ್ಲಿ, ಇದನ್ನು ಮನೆಯಲ್ಲಿ ಇಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಆದರೆ ಅದನ್ನು ಇಡಲು ಸರಿಯಾದ ದಿಕ್ಕಿನ ಬಗ್ಗೆ ತಿಳಿಯೋದು ಮುಖ್ಯ. ಇಲ್ಲದಿದ್ದರೆ, ನೀವು ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ, ನೀವು ಮನೆಯಲ್ಲಿ ಲಾಫಿಂಗ್ ಬುದ್ಧನ ಪ್ರತಿಮೆಯನ್ನು ತಂದಾಗಲೆಲ್ಲಾ, ಅದನ್ನು ಸ್ಥಾಪಿಸುವಾಗ ದಿಕ್ಕನ್ನು ನೆನಪಿನಲ್ಲಿಡಿ.

27

ಲಾಫಿಂಗ್ ಬುದ್ಧ ಯಾರು?
ನೀವೆಲ್ಲಾ ಲಾಫಿಂಗ್ ಬುದ್ಧನ ಮೂರ್ತಿಯನ್ನು(Idol) ಮನೆಯಲ್ಲಿ ಇಡ್ತೀರಿ. ಆದ್ರೆ ಅವರು ಯಾರು ಅನ್ನೋದು ಗೊತ್ತ? ಒಂದು ನಂಬಿಕೆಯ ಪ್ರಕಾರ, ಜಪಾನ್ ಮೂಲದ ಹೊಥೈ ಎಂಬುವವರು ಬೌದ್ಧ ಧರ್ಮಕ್ಕೆ ಮತಾಂತರಗೊಂಡರು. ಬಳಿಕ ಹಲವು ಸಮಯದವರೆಗೆ ತಪಸ್ಸನ್ನು ಮಾಡಿ ಜ್ಞಾನೋದಯ ಹೊಂದಿದರು.

37

ಜ್ಞಾನವನ್ನು ಪಡೆದ ನಂತರ, ಹೊಥೈ(Huthai) ಜೋರಾಗಿ ನಗಲು ಪ್ರಾರಂಭಿಸಿದರು. ಅವರು ಜನರನ್ನು ನಗಿಸೋದನ್ನು ತಮ್ಮ ಜೀವನದ ಗುರಿಯಾಗಿಸಿಕೊಂಡರು. ಅನೇಕ ದೇಶಗಳಿಗೆ ಪ್ರಯಾಣಿಸುತ್ತಿದ್ದ ಹೋಥೈ, ಹೋದಲ್ಲೆಲ್ಲಾ ಜನರನ್ನು ನಗಿಸಿದರು. ಅಂದಿನಿಂದ, ಅವರನ್ನು ಲಾಫಿಂಗ್ ಬುದ್ಧ ಎಂದು ಕರೆಯಲಾಯಿತು. ಇದರರ್ಥ ನಗಿಸುವ ಭಗವಾನ್ ಬುದ್ಧ ಎಂದು.
 

47

ಲಾಫಿಂಗ್ ಬುದ್ಧ ಪ್ರತಿಮೆಯ ಮಹತ್ವ (Importance)
ಲಾಫಿಂಗ್ ಬುದ್ಧನನ್ನು ಸಂತೋಷದ ಸಂಕೇತವೆಂದು ಪರಿಗಣಿಸಲಾಗುತ್ತೆ. ಲಾಫಿಂಗ್ ಬುದ್ಧನನ್ನು ಮನೆಗೆ ತರೋದ್ರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತೆ ಅನ್ನುವ ನಂಬಿಕೆ ಸಾಕಷ್ಟಿದೆ. ಇದರಿಂದಾ ಮಾನಸಿಕ ನೆಮ್ಮದಿ ಸಹ ಸಿಗುತ್ತೆ ಎನ್ನಲಾಗುತ್ತೆ.
 

57

ಲಾಫಿಂಗ್ ಬುದ್ಧನನ್ನು ಮನೆಗೆ ತರೋದ್ರಿಂದ, ಮನೆಯಲ್ಲಿ ಇರುವ ನಕಾರಾತ್ಮಕ (Negativity) ಪರಿಣಾಮವು ಕೊನೆಗೊಳ್ಳುತ್ತೆ. ಈ ಕಾರಣದಿಂದಾಗಿ, ಕುಟುಂಬದ ಎಲ್ಲಾ ಸದಸ್ಯರು ಸಂತೋಷದ ಜೀವನವನ್ನು ನಡೆಸುತ್ತಾರೆ. ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಸದಾ ನೆಲೆಯಾಗಿರುತ್ತೆ.

67

ಲಾಫಿಂಗ್ ಬುದ್ಧನನ್ನು ಇಡಲು ಸರಿಯಾದ ದಿಕ್ಕು ಯಾವುದು?
ಲಾಫಿಂಗ್ ಬುದ್ಧನನ್ನು ಇಡಲು ವಾಸ್ತುವಿನಲ್ಲಿ ಸರಿಯಾದ ದಿಕ್ಕನ್ನು ಹೇಳಲಾಗಿದೆ. ಲಾಫಿಂಗ್ ಬುದ್ಧನ ಪ್ರತಿಮೆಯು ಮನೆಯ ಮುಖ್ಯ ದ್ವಾರದ (Main Door) ಮುಂದೆ ಇಡಬೇಕು ಎಂದು ಸೂಚಿಸಿದೆ. ಇದರಿಂದ ಮನೆಯಲ್ಲಿ ಸಂತೋಷ ಸದಾ ಹೊಮ್ಮಿರುತ್ತೆ ಎನ್ನಲಾಗುತ್ತೆ.

77

ಲಾಫಿಂಗ್ ಬುದ್ಧನನ್ನು ಪೂರ್ವ ದಿಕ್ಕಿನಲ್ಲಿ ಇಡುವುದು ಸಹ ಮಂಗಳಕರವೆಂದು ಪರಿಗಣಿಸಲಾಗಿದೆ. ಲಾಫಿಂಗ್ ಬುದ್ಧನ ಪ್ರತಿಮೆಯನ್ನು ಮಕ್ಕಳ ಸ್ಟಡಿ ರೂಮ್ನಲ್ಲಿ(Study room) ಇಟ್ಟರೆ, ಅದು ಅವರ ಮನಸ್ಸನ್ನು ಅಧ್ಯಯನದಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತೆ ಅನ್ನೋದ್ರಲ್ಲಿ ಸಂಶಯವೇ ಇಲ್ಲ.

Read more Photos on
click me!

Recommended Stories