ಸಂಜೆ ಮಲಗೋದು, ತಲೆ ಬಾಚೋದು ಮಾಡಿದ್ರೆ ಮನೆಯಲ್ಲಿ ಬಡತನ ಗ್ಯಾರಂಟಿ

First Published Jun 13, 2023, 5:38 PM IST

ಹಿಂದೂ ಧರ್ಮದಲ್ಲಿ, ಲಕ್ಷ್ಮಿ ದೇವಿಯನ್ನು ಸಂಪತ್ತಿನ ದೇವತೆ ಎಂದು ಪರಿಗಣಿಸಲಾಗುತ್ತೆ ಅನ್ನೋದು ನಿಮಗೆಲ್ಲಾ ಗೊತ್ತೇ ಇದೆ. ಲಕ್ಷ್ಮೀ ಅನುಗ್ರಹವನ್ನು ಪಡೆಯುವುದು ಅಂದ್ರೆ ಜೀವನದಲ್ಲಿ ಎಲ್ಲವೂ ಸಿಕ್ಕಿದಂತೆ. ಆದರೆ ನೀವು ಮಾಡುವ ಕೆಲವೊಂದು ತಪ್ಪುಗಳು ಲಕ್ಷ್ಮೀ ಕೋಪಗೊಳ್ಳುವಂತೆ ಮಾಡುತ್ತೆ.

ಲಕ್ಷ್ಮೀ ದೇವತೆಯನ್ನು (Lakshmi Devi) ಸಂಪತ್ತಿನ ದೇವತೆ ಎನ್ನಲಾಗುತ್ತೆ. ಲಕ್ಷ್ಮೀ ಒಲಿದರೆ ನಮಗೆ ಯಾವುದೇ ರೀತಿಯ ಹಣಕಾಸಿನ ಸಮಸ್ಯೆ ಕಾಣಿಸೋದಿಲ್ಲ ಎಂದು ಸಹ ಹೇಳುತ್ತಾರೆ. ಆದರೆ ಮನೆಯಲ್ಲಿ ಹೆಂಗಸರು ಮಾಡುವ ಕೆಲವೊಂದು ತಪ್ಪುಗಳು ಲಕ್ಷ್ಮೀಗೆ ಕೋಪ ತರಿಸುತ್ತವೆ. ಹಾಗಿದ್ರೆ ಹೆಂಗಸರು ಮಾಡುವ ಆ ತಪ್ಪುಗಳು ಯಾವುವು ಅನ್ನೋದನ್ನು ನೋಡೋಣ. 

ಸೂರ್ಯೋದಯದ ನಂತರ ಕ್ಲೀನ್ ಮಾಡೋದು
ವಾಸ್ತು ಶಾಸ್ತ್ರದ ಪ್ರಕಾರ, ಸೂರ್ಯೋದಯದ ನಂತರ ಮನೆಯನ್ನು ಸ್ವಚ್ಛಗೊಳಿಸಬಾರದು. ಸೂರ್ಯೋದಯದ ನಂತರ ಸ್ವಚ್ಛಗೊಳಿಸೋದ್ರಿಂದ, ತಾಯಿ ಲಕ್ಷ್ಮಿ ಕೋಪಗೊಂಡು (Lakshmi will get angry) ಬಾಗಿಲಿನಿಂದ ಹಿಂದಿರುಗುತ್ತಾಳೆ ಎನ್ನುವ ನಂಬಿಕೆ ಇದೆ.

ಸ್ನಾನ ಮಾಡದೇ ಅಡುಗೆ ಮಾಡೋದು 
ಹಿಂದೂ ಧರ್ಮದಲ್ಲಿ, ಸ್ನಾನ ಮಾಡದೆ ಅಡುಗೆ ಮನೆಗೆ (cooking without bathing) ಹೋಗಬಾರದು ಎಂದು ಹೇಳಲಾಗುತ್ತದೆ. ಹೀಗೆ ಮಾಡಿದ್ರೆ ಲಕ್ಷ್ಮೀ ದೇವಿಯ ಅನುಗ್ರಹ ನಿಮ್ಮ ಮೇಲೆ ಇರೋದೆ ಇಲ್ಲ. ಹಾಗಾಗಿ ಮುಂಜಾನೆ ಎದ್ದು ಸ್ನಾನ ಮಾಡಿ ಅಡುಗೆ ಮಾಡಿ.

ತಡವಾಗಿ ಸ್ನಾನ ಮಾಡೋದು
ವಾಸ್ತು ಶಾಸ್ತ್ರದ ಪ್ರಕಾರ, ಸೂರ್ಯೋದಯಕ್ಕೆ ಮೊದಲು ಸ್ನಾನ ಮಾಡಬೇಕು. ತಡವಾಗಿ ಸ್ನಾನ ಮಾಡುವುದರಿಂದ ಮನೆಯಲ್ಲಿ ಬಡತನಕ್ಕೆ ಕಾರಣವಾಗಬಹುದು.  ಅಂದ್ರೆ ಲಕ್ಷ್ಮೀ ದೇವಿ ಕೋಪಗೊಳ್ಳುತ್ತಾಳೆ ಎಂದು ಅರ್ಥ.

ಪ್ರಸಾದದ ನಂತರ ಆಹಾರ 
ಪೂಜೆಯ ನಂತರ ತಾಯಿ ಲಕ್ಷ್ಮಿಗೆ ಪ್ರಸಾದವನ್ನು ಅರ್ಪಿಸಲಾಗುತ್ತದೆ, ಆದರೆ ಪ್ರಸಾದವನ್ನು ಅರ್ಪಿಸಿದ ತಕ್ಷಣ ಆಹಾರ ತೆಗೆದುಕೊಳ್ಳಬಾರದು. ಇದರಿಂದ ತಾಯಿ ಲಕ್ಷ್ಮಿಗೆ ಸಿಟ್ಟು ಬರುತ್ತದೆ.  

ಸಂಜೆ ತಲೆ ಬಾಚೋದು (combing hair)
ಅನೇಕ ಜನರು ಸಂಜೆ ತಮ್ಮ ಕೂದಲನ್ನು ಬಾಚಿಕೊಳ್ಳುತ್ತಾರೆ. ವಾಸ್ತು ಪ್ರಕಾರ, (Vastu) ಹಾಗೆ ಮಾಡುವುದು ತಪ್ಪು. ಇದರಿಂದ ತಾಯಿ ಲಕ್ಷ್ಮಿಗೆ ಸಿಟ್ಟು ಬರುತ್ತದೆ.  ಹಾಗಾಗಿ ಸಂಜೆ ನಂತರ ಈ ಕೆಲಸ ಮಾಡಬೇಕು. ತಲೆ ಬಾಚೋದಾದರೆ ಬೆಳಗ್ಗೆಯೇ ಬಾಚಿ. 

ಕೋಪ ಮಾಡಲೇಬೇಡಿ 
ಹೆಣ್ಣು ಮಕ್ಕಳು ಕೋಪ ಮಾಡಿಕೊಳ್ಳುವ ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಸುವುದಿಲ್ಲ ಎಂದು ಹೇಳಲಾಗುತ್ತೆ. ಹಾಗಾಗಿ ಕೋಪ ಕಡಿಮೆ ಮಾಡಬೇಕು. ಧರ್ಮಗ್ರಂಥಗಳ ಪ್ರಕಾರ, ಜನರು ಹೆಚ್ಚು ಕೋಪಗೊಳ್ಳುವ ಮನೆಯಿಂದ ಲಕ್ಷ್ಮೀ ದೇವಿ ಹೊರ ಹೋಗುತ್ತಾಳೆ.

ಸಂಜೆ ನಿದ್ದೆ ಮಾಡೋದು
ಯಾವುದೇ ವ್ಯಕ್ತಿಯು ಸಂಜೆ ಮಲಗಬಾರದು (evening sleep) ಎಂದು ಧರ್ಮಗ್ರಂಥಗಳು ಹೇಳುತ್ತವೆ. ಇದು ಲಕ್ಷ್ಮಿ ದೇವಿಯ ಆಗಮನದ ಸಮಯ. ಇಂತಹ ಸಮಯದಲ್ಲಿ ಮನೆಯಲ್ಲಿ ಯಾರಾದರು ಮಲಗಿದ್ರೆ ಲಕ್ಷ್ಮೀ ದೇವಿ ಕೋಪಗೊಳ್ಳುತ್ತಾಳೆ ಎಂದು ಗ್ರಂಥಗಳಲ್ಲಿ ತಿಳಿಸಿದೆ.

click me!