ಸುಖ, ಶಾಂತಿ, ನೆಮ್ಮದಿಗೆ ಸಿಂಪಲ್ ವಾಸ್ತು ಟಿಪ್ಸ್ ಇವು

First Published | May 26, 2022, 1:25 PM IST

ಸಂತೋಷ (Happiness) ಮತ್ತು ಸಮೃದ್ಧಿಯನ್ನು (Prosperity) ಯಾರು ಬಯಸೋದಿಲ್ಲ ಹೇಳಿ? ನಾವೆಲ್ಲರೂ ನಮ್ಮ ಜೀವನವನ್ನು ಸಂತೋಷವಾಗಿ ಕಳೆಯಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತೇವೆ. ಇದರ ಹೊರತಾಗಿಯೂ, ಅನೇಕ ಬಾರಿ ನಮ್ಮ ಕೆಲಸವು ಪೂರ್ಣಗೊಳ್ಳೋದಿಲ್ಲ. ಅಂದುಕೊಂಡದ್ದು ಆಗೋದಿಲ್ಲ. ಇದರಿಂದ ನಾವು ಒತ್ತಡಕ್ಕೆ (Stress) ಒಳಗಾಗುತ್ತೇವೆ, ಇದರಿಂದಾಗಿ ಮನೆಯಲ್ಲಿ ಅಶಾಂತಿ ಉಂಟಾಗಬಹುದು. ಇದಕ್ಕೆ ಅನೇಕ ಕಾರಣಗಳಿರಬಹುದು, ಅವುಗಳಲ್ಲಿ ಮನೆಯಲ್ಲಿರುವ ವಾಸ್ತುದೋಷವು ಸಹ ಒಂದು ಕಾರಣವಾಗಿರಬಹುದು.

ವಾಸ್ತು ದೋಷದ ಕಾರಣದಿಂದ, ಮನೆಯಲ್ಲಿ ನಕಾರಾತ್ಮಕ ಶಕ್ತಿ (Negative energy) ಹೆಚ್ಚಾಗುತ್ತದೆ, ಇದರಿಂದ ದುಃಖ ಮತ್ತು ಅಶುಭ ಘಟನೆಗಳು ಸಂಭವಿಸುತ್ತವೆ. ವಾಸ್ತುಶಾಸ್ತ್ರದಲ್ಲಿ ಕೆಲವು ಸರಳ ಪರಿಹಾರಗಳ ಬಗ್ಗೆ ಮಾಹಿತಿ ನೀಡಲಾಗಿದೆ.  ಅವುಗಳನ್ನು ನೀವು ಪಾಲಿಸಿದರೆ ಖಂಡಿತವಾಗಿಯೂ ಜೀವನದಲ್ಲಿ ಸಂತೋಷ ಮತ್ತು ಶಾಂತಿ ನೆಲೆಸುವಂತೆ ಮಾಡಬಹುದು. ಹಾಗಾದರೆ ಅದಕ್ಕಾಗಿ ಏನು ಮಾಡೋದು ನೋಡೋಣ. 

ಆಗ್ನೇಯ ದಿಕ್ಕಿನ ವಾಸ್ತು ಪ್ರದೇಶದಲ್ಲಿ ಒಂದು ಜೋಡಿ ಕೆಂಪು ಕುದುರೆಗಳು (ಬೆಂಕಿಯ ಅಂಶ) ಮತ್ತು ಹಸಿರು ಸಸ್ಯಗಳನ್ನು(Plants) ಇಡಬೇಕು. ಇದನ್ನು ಉತ್ತರ ದಿಕ್ಕಿನ (North Direction) ಪ್ರದೇಶದಲ್ಲಿ ಇರಿಸುವುದು ಸಹ ಹೆಚ್ಚಿನ ಹಣ ಬರುವಂತೆ ಮಾಡುತ್ತದೆ. ಇದರಿಂದ ನಿಮ್ಮ ಶ್ರೀಮಂತಿಕೆ ಹೆಚ್ಚುತ್ತದೆ. ಹಣದ ಸಮಸ್ಯೆ ಇರೋದಿಲ್ಲ.

Tap to resize

ಮನೆಯ ಈಶಾನ್ಯ ದಿಕ್ಕಿನಲ್ಲಿ ಸ್ಟೋರ್ ರೂಮ್ (Store room) ಮಾಡಿದ್ದರೆ ಓಕೆ…. ಆದರೆ ಅಲ್ಲಿ ಅನಗತ್ಯ ವಸ್ತುಗಳನ್ನು ಇಡುವುದನ್ನು ತಪ್ಪಿಸಿ. ಇಲ್ಲವಾದರೆ ಆ ಮನೆಯಲ್ಲಿ ವಾಸಿಸುವ ಜನರು ಖಿನ್ನತೆಯನ್ನು (Depression) ಎದುರಿಸಬೇಕಾಗಬಹುದು. ಅತ್ಯಂತ ಸರಿಯಾದ ಪರಿಹಾರವೆಂದರೆ ಆ ಸರಕುಗಳನ್ನು ಆಯಾ ದಿಕ್ಕಿನ ಪ್ರದೇಶಗಳಲ್ಲಿ ಇರಿಸಬೇಕು.  

ನಿಮ್ಮ ಮನೆಯ ದೇವರ ಕೋಣೆಯಲ್ಲಿ ನಿಯಮಿತವಾಗಿ ತುಪ್ಪದ ದೀಪ (Lamp) ಬೆಳಗಿಸಿ, ಇದರಿಂದ ಮನೆಯಲ್ಲಿ ಸಕರಾತ್ಮಕತೆ ಹೆಚ್ಚುತ್ತದೆ, ಅಲ್ಲದೇ ಎಲ್ಲಾ ರೀತಿಯ ನಕಾರಾತ್ಮಕ ಶಕ್ತಿಯು ಮನೆಯಿಂದ ಹೊರಬರುವಂತೆ ಗಂಟೆಯನ್ನು ಬಾರಿಸಬೇಕು. ಅದೇ ರೀತಿಯಲ್ಲಿ, ಮನೆಯಲ್ಲಿ ಶಂಖವನ್ನು ಇಟ್ಟುಕೊಳ್ಳುವುದು ಮತ್ತು ಶಂಖ ಊದುವುದುಸಹ ಮನೆಯ ವಾಸ್ತು ದೋಷವನ್ನು ತೆಗೆದುಹಾಕುತ್ತದೆ.

ಮನೆಯ ಪೂಜಾ ಸ್ಥಳದಲ್ಲಿ ದೇವತೆಗಳಿಗೆ ಅರ್ಪಿಸುವ ಹೂವುಗಳು ಮತ್ತು ಹಾರಗಳನ್ನು ಮರುದಿನ ತೆಗೆದುಹಾಕಬೇಕು ಮತ್ತು ಹೊಸ ಹೂವುಗಳು ಮತ್ತು ಮಾಲೆಗಳನ್ನು(Garland) ದೇವರಿಗೆ ಅರ್ಪಿಸಬೇಕು. ಅಂತೆಯೇ, ಪೂಜಾಗೃಹದಲ್ಲಿ, ದೇವತೆಗಳ ಚಿತ್ರಗಳನ್ನು ಕಾಣದಂತೆ ಇಡಬಾರದು ಮತ್ತು ಮುಖಾಮುಖಿಯಾಗಿ ಇಡಬಾರದು, ಇದು ಒಂದು ದೊಡ್ಡ ದೋಷವನ್ನು ಸೃಷ್ಟಿಸುತ್ತದೆ.

ತಪ್ಪಾದ ದಿಕ್ಕಿನಲ್ಲಿ ಇರಿಸಲಾದ ಧಾರ್ಮಿಕ ಪುಸ್ತಕಗಳು(Books) ವಾಸ್ತು ದೋಷಕ್ಕೆ ಕಾರಣವಾಗುತ್ತವೆ. ವಾಸ್ತುವಿನ ಪ್ರಕಾರ, ಧಾರ್ಮಿಕ ಪುಸ್ತಕಗಳು ಮತ್ತು ಪಠ್ಯಗಳನ್ನು ಯಾವಾಗಲೂ ಪಶ್ಚಿಮ ದಿಕ್ಕಿನಲ್ಲಿ ಇಡಬೇಕು. ಧಾರ್ಮಿಕ ಪುಸ್ತಕಗಳನ್ನು ಮತ್ತೊಂದು ದಿಕ್ಕಿನಲ್ಲಿ, ಹಾಸಿಗೆಯ ಒಳಗೆ ಅಥವಾ ಹಾಸಿಗೆ ಅಥವಾ ದಿಂಬಿನ ಕೆಳಗೆ ಇಡುವುದು ಶುಭವಲ್ಲ.

ವಾಸ್ತುದೋಷದ ಕಾರಣದಿಂದಾಗಿ, ಮನೆಯ ಸದಸ್ಯರು ರಾತ್ರಿಯಲ್ಲಿ ನಿದ್ರೆ (Sleep) ಮಾಡದಿದ್ದರೆ ಅಥವಾ ಕಿರಿಕಿರಿಯ ಭಾವನೆ ಉಂಟಾದರೆ, ಆಗ ಅವನನ್ನು ದಕ್ಷಿಣ ದಿಕ್ಕಿನ (South Direction) ಕಡೆಗೆ ತಲೆಯಿಟ್ಟು ಮಲಗುವಂತೆ ಮಾಡಿ. ಇದು ಅವನ ನಿದ್ರಾಹೀನತೆ (Sleeplessness) ಸಮಸ್ಯೆಯನ್ನು ಸುಧಾರಿಸುತ್ತದೆ ಮತ್ತು ಉತ್ತಮ ನಿದ್ರೆ ಮಾಡುವಂತೆ ಮಾಡುತ್ತದೆ. 

ಒಣಗಿದ ಹೂವುಗಳನ್ನು(Flowers) ಮನೆಯ ಯಾವುದೇ ಕೋಣೆಯಲ್ಲಿ ಇಡಬೇಡಿ. ಸಣ್ಣ ಹೂಗುಚ್ಛದಲ್ಲಿ ಇರಿಸಲಾದ ಹೂವುಗಳು ಒಣಗುತ್ತಿದ್ದರೆ, ಅವುಗಳನ್ನು ತೆಗೆದು ಹೊಸ ಹೂವುಗಳನ್ನು ಇಡಿ ಮತ್ತು ಒಣಗಿದ ಹೂವುಗಳನ್ನು ತೆಗೆದು ಅವುಗಳನ್ನು ಹೊರಗೆ ಎಸೆಯಿರಿ.

ಬೆಳಿಗ್ಗೆ(Morning) ಸ್ವಲ್ಪ ಸಮಯದವರೆಗೆ ಕಿಟಕಿ, ಬಾಗಿಲುಗಳನ್ನು ತೆರೆಯಿರಿ, ಇದರಿಂದ ತಾಜಾ ಗಾಳಿ ಮತ್ತು ಸೂರ್ಯನ ಬೆಳಕು ಮನೆಯನ್ನು ಪ್ರವೇಶಿಸಬಹುದು, ಹಾಗೆ ಮಾಡುವುದರಿಂದ, ಸಕಾರಾತ್ಮಕ ಶಕ್ತಿಯು ನಿಮ್ಮ ಮನೆಗೆ ಬರುತ್ತದೆ, ವಾಸ್ತು ದೋಷಗಳು ನಿವಾರಣೆಯಾಗುತ್ತವೆ.

Latest Videos

click me!