waste dustbin
ವಾಸ್ತು ಪ್ರಕಾರ, ನಿಮ್ಮ ಮನೆಯ ಹೊರಗೆ ಅಥವಾ ಪ್ರವೇಶದ್ವಾರದಲ್ಲಿ ಎಂದಿಗೂ ಕಸದ ಬುಟ್ಟಿ(dustbin)ಯನ್ನು ಹಾಕಬೇಡಿ. ಏಕೆಂದರೆ ಇದು ತಾಯಿ ಲಕ್ಷ್ಮಿ(Lakshmi)ಗೆ ಕೋಪ ತರಿಸುತ್ತದೆ. ಆದ್ದರಿಂದ ಮನೆಯ ಮುಖ್ಯ ದ್ವಾರವನ್ನು ಯಾವಾಗಲೂ ಸ್ವಚ್ಛವಾಗಿ ಮತ್ತು ಅಚ್ಚುಕಟ್ಟಾಗಿ ಇರಿಸಿಕೊಳ್ಳಿ. ಇದರಿಂದ ಸಮಾಜದಲ್ಲಿ ನಿಮ್ಮ ಗೌರವ(respect) ಮತ್ತು ಪ್ರಸಿದ್ಧತೆ ಸದಾ ಉಳಿಯುತ್ತದೆ.
These architectural rules do away with the financial problem
ವಾಸ್ತು ಪ್ರಕಾರ, ಒಬ್ಬ ವ್ಯಕ್ತಿಗೆ ಸಂಜೆ ಹಾಲು, ಮೊಸರು(Curd) ಅಥವಾ ಉಪ್ಪ(Salt)ನ್ನು ಎಂದಿಗೂ ನೀಡಬಾರದು. ಈ ತಪ್ಪು ನಿಮ್ಮ ಆರ್ಥಿಕ ಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು.
আয়না
ಯಾವುದಾದರೂ ಗಿಡಗಳು ಸತ್ತಿದ್ದರೆ ಅವು ಮನೆಗೆ ನಕಾರಾತ್ಮಕ ಶಕ್ತಿ ತರುವ ಮೂಲಕ ಮನೆಯ ಸಂಪತ್ತನ್ನು ಕರಗಿಸುತ್ತವೆ. ಹಾಗಾಗಿ, ಗಿಡಗಳು ಸತ್ತಿದ್ದರೆ ಅವನ್ನು ತೆಗೆದು ಹಾಕಿ. ಅತ್ಯುತ್ತಮ ಕೆಲಸವೆಂದರೆ ಗಿಡಗಳು ಸಾಯದಂತೆ ಪ್ರತಿ ದಿನ ಅವುಗಳ ಕಾಳಜಿ ವಹಿಸುವುದು.
ರಾತ್ರಿಯಲ್ಲಿ ಅಡುಗೆಮನೆ(Kitchen)ಯಲ್ಲಿ ಕೊಳಕು ಪಾತ್ರೆಗಳನ್ನು ಬಿಡುವ ಅಭ್ಯಾಸ ಅನೇಕರಿಗೆ ಇದೆ. ಆದರೆ ಇದನ್ನು ಮಾಡಬಾರದು. ಏಕೆಂದರೆ ಇದು ಆರ್ಥಿಕ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ ರಾತ್ರಿ ಮಲಗುವ ಮುನ್ನ ಎಲ್ಲ ಮುಸುರೆ, ಎಂಜಲಿನ ಪಾತ್ರೆಗಳನ್ನು ತೊಳೆದು, ಅಡುಗೆ ಮನೆಯನ್ನು ಸರಿಯಾಗಿ ಸ್ವಚ್ಛಗೊಳಿಸಬೇಕು. ನಂತರವೇ ಮಲಗಬೇಕು.
ವಾಸ್ತು ಪ್ರಕಾರ, ಖಾಲಿ ನೀರಿನ ಪಾತ್ರೆಗಳನ್ನು ರಾತ್ರಿ ಅಡುಗೆಮನೆ ಅಥವಾ ಸ್ನಾನಗೃಹದಲ್ಲಿ ಇಡಬಾರದು. ಬಾತ್ ರೂಂನಲ್ಲಿ ಯಾವಾಗಲೂ ಕನಿಷ್ಠ ಒಂದು ಬಕೆಟ್ ನೀರು ತುಂಬಿರಲಿ. ಇದು ಮನೆಯಿಂದ ನಕಾರಾತ್ಮಕ ಶಕ್ತಿ(negative energy)ಯನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಇದರೊಂದಿಗೆ ಆರ್ಥಿಕ ಸ್ಥಿತಿ(financial status)ಯೂ ಉತ್ತಮವಾಗಿರುತ್ತದೆ.
ಅಡುಗೆಮನೆ, ಬಾತ್‌ರೂಂ, ಹೊರಗೆ ಗಾರ್ಡನ್ ಏರಿಯಾ, ಗೋಡೆ ಸೇರಿದಂತೆ ಎಲ್ಲಿಯೂ ಯಾವುದೇ ರೀತಿಯಲ್ಲಿ ನೀರು ಲೀಕ್ ಆಗುತ್ತಿರಬಾರದು. ಇದು ಹಣ ಪೋಲಾಗುವುದನ್ನು ಸೂಚಿಸುತ್ತದೆ.
ಮನೆಯ ಯಾವುದೇ ನಲ್ಲಿ ಸೋರುತ್ತಿದ್ದರೆ ಕೂಡಲೇ ಅದನ್ನು ಸರಿಪಡಿಸಬೇಕು. ಇಲ್ಲವೇ, ಹನಿ ಹನಿಗೂಡಿ ಹಳ್ಳದಷ್ಟು ನೀರ ಸೋರಿಕೆಯಾಗುವಂತೆ ನಿಮ್ಮ ಹಣವೂ ಬೇಕಾಬಿಟ್ಟಿ ಖರ್ಚಾಗುತ್ತದೆ.
ಅನೇಕ ಜನರು ಹಾಸಿಗೆಯಲ್ಲಿ ಆಹಾರ(food)ವನ್ನು ಸೇವಿಸುವ ಅಭ್ಯಾಸವನ್ನು ಹೊಂದಿದ್ದಾರೆ. ಆದರೆ ಈ ಅಭ್ಯಾಸವನ್ನು ವಾಸ್ತು ಶಾಸ್ತ್ರ(Vastu Shastra)ದಲ್ಲಿ ತಪ್ಪು ಎಂದು ವಿವರಿಸಲಾಗಿದೆ. ವಾಸ್ತು ಪ್ರಕಾರ, ಈ ತಪ್ಪು ವ್ಯಕ್ತಿಯ ಆರ್ಥಿಕ ಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈ ತಪ್ಪು ವ್ಯಕ್ತಿಯನ್ನು ಬಡವಾಗಿಸುತ್ತದೆ ಮತ್ತು ಸಮೃದ್ಧಿಗೆ ಅಡ್ಡಿಯಾಗಲು ಪ್ರಾರಂಭಿಸುತ್ತದೆ.