ಜೀವನದಲ್ಲಿ ನಾವು ಅನೇಕ ಅಸೂಯೆ ಪಡುವ ಜನರನ್ನ ಎದುರಿಸಬೇಕಾಗುತ್ತೆ. ಈ ಜನರು ನಿಮ್ಮ ಸುತ್ತಮುತ್ತಲಿನ ಜನರು, ನೆರೆಹೊರೆಯವರು, ಸಂಬಂಧಿಕರು ಅಥವಾ ನಿಮ್ಮ ಸ್ನೇಹಿತರಾಗಿರಬಹುದು. ಈ ಜನ ಒಂದಲ್ಲ ಒಂದು ರೀತಿಯಲ್ಲಿ ನಿಮ್ಮೊಂದಿಗೆ ಸಂಪರ್ಕ ಹೊಂದಿದ್ದಾರೆ ಮತ್ತು ಅವರಿಂದ ನಾವು ನಮ್ಮನ್ನು ಸಂಪೂರ್ಣವಾಗಿ ಬೇರ್ಪಡಿಸುವುದು ಕಷ್ಟ. ಅಂತಹ ಜನರು ನಿಮ್ಮ ಪ್ರಗತಿಯಿಂದ ಅಸೂಯೆ ಪಡುತ್ತಾರೆ ಮತ್ತು ಅವರು ನಿಮ್ಮ ಮನೆಗೆ ಬಂದಾಗ, ಅವರು ತಮ್ಮೊಂದಿಗೆ ನಕಾರಾತ್ಮಕ ಶಕ್ತಿಯನ್ನು(Negative energy) ಸಹ ತರುತ್ತಾರೆ.