ಕನ್ನಡದ ಜನಪ್ರಿಯ ಧಾರಾವಾಹಿ 'ಕರ್ಣ'ದಿಂದ ಹಿರಿಯ ನಟ ಟಿ.ಎಸ್.ನಾಗಾಭರಣ ಹೊರನಡೆದಿದ್ದಾರೆ. ಅವರ ನಿರ್ಗಮನದಿಂದ ಖಾಲಿಯಾದ ಖಳನಾಯಕ ರಮೇಶ್ ಪಾತ್ರಕ್ಕೆ ಇದೀಗ ಚಂದನವನದ ಮತ್ತೋರ್ವ ಹಿರಿಯ ನಟ ಎಂಟ್ರಿ ಕೊಟ್ಟಿದ್ದಾರೆ. ಈ ಅನಿರೀಕ್ಷಿತ ಬದಲಾವಣೆಯು ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ.
ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಯಾಗಿರುವ ಕರ್ಣ ಸೀರಿಯಲ್‌ನಿಂದ ಹಿರಿಯ ನಟ ಟಿಎಸ್ ನಾಗಾಭರಣ ಹೊರಗೆ ಬಂದಿದ್ದಾರೆ. ಈ ದಿಢೀರ್ ಬೆಳವಣಿಗೆಯಿಂದ ಜೀ ಕನ್ನಡ ವಾಹಿನಿಯ ವೀಕ್ಷಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಟಿ.ಎಸ್.ನಾಗಾಭರಣ ಅವರ ಸ್ಥಾನಕ್ಕೆ ಮತ್ತೋರ್ವ ಕನ್ನಡದ ಹಿರಿಯ ನಟನನ್ನು ಕರೆದುಕೊಂಡು ಬರಲಾಗಿದೆ.
25
ಹೊಸ ನಟ ಯಾರು ಗೊತ್ತಾ?
ಹೌದು, ಕರ್ಣ ವಾಹಿನಿಯ ಪ್ರೋಮೋದಲ್ಲಿ ಹೊಸ ನಟನ ಆಗಮನವನ್ನು ತೋರಿಸಲಾಗಿದೆ. ಕರ್ಣ ಸೀರಿಯಲ್ ವಿಲನ್ ರಮೇಶ್ ಪಾತ್ರದಲ್ಲಿ ಟಿ.ಎಸ್.ನಾಗಾಭರಣ ನಟಿಸುತ್ತಿದ್ದರು. ರಂಗಭೂಮಿಯ ದೈತ್ಯ ಪ್ರತಿಭೆಯಾಗಿರುವ ನಾಗಭರಣ ಪಾತ್ರವನ್ನು ಜೀವಿಸಿದ್ದರು. ಈ ಪಾತ್ರ ತೆರೆ ಮೇಲೆ ಬಂದ್ರೆ ವೀಕ್ಷಕರು ಬೈದುಕೊಳ್ಳುವಷ್ಟು ರಮೇಶ್ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದನು. ಹಾಗಾದ್ರೆ ನಾಗಾಭರಣ ಅವರ ಬದಲಾಗಿ ಬಂದಿರೋ ನಟ ಯಾರು ಗೊತ್ತಾ?
35
ನಟ ಅಭಿಜಿತ್
ಇನ್ಮುಂದೆ ಕರ್ಣ ಸೀರಿಯಲ್‌ನಲ್ಲಿ ರಮೇಶ್ ಪಾತ್ರದಲ್ಲಿ ಚಂದನವನದ ಸ್ಪುರದ್ರೂಪಿ ನಟ ಅಭಿಜಿತ್ ಆಗಮಿಸಿದ್ದಾರೆ. ಕರ್ಣ ಮತ್ತು ನಿಧಿ ಫೋಟೋಗೆ ಪೂಜೆ ಮಾಡಿ ಪಿಂಡ ಬಿಡುತ್ತಿರುವ ದೃಶ್ಯವನ್ನು ಸಂಚಿಕೆಯಲ್ಲಿ ತೋರಿಸಲಾಗಿದೆ. ಕರ್ಣನ ವಿರುದ್ಧ ಕೋರ್ಟ್‌ನಲ್ಲಿ ಕೇಸ್ ನಡೆಯುತ್ತಿದ್ದರೂ ಕಳೆದ ಎರಡು ಸಂಚಿಕೆಗಳಿಂದ ರಮೇಶ್ ಪಾತ್ರ ತೋರಿಸಿರಲಿಲ್ಲ. ಇದು ವೀಕ್ಷಕರ ಅನುಮಾನಕ್ಕೆ ಕಾರಣವಾಗಿತ್ತು.
ಸಂಚಿಕೆಯಲ್ಲಿ ತೋರಿಸಿರುವ ಪ್ರಕಾರ, ರಮೇಶ್‌ನಾಗಿ ನಟ ಅಭಿಜಿತ್ ಬಂದಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ರಮೇಶ್ ಪಾತ್ರಧಾರಿ ಬದಲಾಗಿದ್ದಾರೆ. ಆದ್ರೆ ಅಭಿಜಿತ್ ಅವರುದ್ದು ಹೊಸ ಪಾತ್ರನಾ ಎಂಬುದರ ಬಗ್ಗೆ ವೀಕ್ಷಕರಲ್ಲಿ ಸಣ್ಣ ಗೊಂದಲವಿದೆ. ಕರ್ಣ ಸೀರಿಯಲ್ ಆರಂಭವಾದ ಮೊದಲ ದಿನದಿಂದಲೂ ನಾಗಭರಣ ಈ ಪಾತ್ರವನ್ನು ಒಪ್ಪಿಕೊಳ್ಳಬಾರದಿತ್ತು ಎಂಬ ಮಾತುಗಳು ಕೇಳಿ ಬಂದಿದೆ. ಧಾರವಾಹಿಯಿಂದ ಟಿ.ಎಸ್.ನಾಗಭರಣ ಹೊರ ಬಂದಿರೋದು ಯಾಕೆ ಎಂಬುದರ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ.
ಸುಳ್ಳು ಆರೋಪ ಮತ್ತು ರಮೇಶ್-ತಾರಾ ಪ್ಲಾನ್‌ನಿಂದ ಕರ್ಣ ಜೈಲು ಸೇರುವಂತಾಗಿತ್ತು. ಇದೆಲ್ಲದರ ಹಿಂದಿರುವ ಡಾ.ಮನೀಶ್‌ನನ್ನು ಹಿಡಿದುಕೊಂಡು ನ್ಯಾಯಾಲಯ ಮುಂದೆ ನಿತ್ಯಾ ಹಾಜರುಪಡಿಸಿದ್ದಳು. ಡಾಕ್ಟರ್ ಆಗಿದ್ರೂ ನ್ಯಾಯಾಲಯದಲ್ಲಿ ಲಾಯರ್ ಆಗಿ ನಿಧಿ ವಾದ ಮಾಡಿದ್ದು ವೀಕ್ಷಕರಲ್ಲಿ ಅಚ್ಚರಿಯನ್ನುಂಟು ಮಾಡಿತ್ತು. ನಂತರ ಇದು ಸೀರಿಯಲ್ ಅಲ್ಲವಾ? ಹಾಗಾಗಿ ಇಲ್ಲಿ ಎಲ್ಲವೂ ಸಾಧ್ಯ ಎಂದು ತಮಗೆ ತಾವೇ ಸಮಾಧಾನ ಮಾಡಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.