Shwetha Prasad: ಕನ್ನಡ ಕಿರುತೆರೆಯ ಜನಪ್ರಿಯ ನಟಿ ಹಾಗೂ ಹಿರಿತೆರೆಯಲ್ಲೂ ಸಹ ಗುರುತಿಸಿಕೊಂಡಿರುವ ನಟಿ ಶ್ವೇತಾ ಆರ್ ಪ್ರಸಾದ್ ಅವರ ಫಿಟ್ನೆಸ್, ಬೋಲ್ಡ್ ಲುಕ್ ನೋಡಿ ಅಭಿಮಾನಿಗಳು ಹಾಲಿವುಡ್ ನಟಿ ಏಂಜಲೀನಾ ಜೋಲಿಗೆ ಹೋಲಿಕೆ ಮಾಡಿದ್ದಾರೆ.
ಕನ್ನಡ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಮಿಂಚಿದ ನಟಿ ಶ್ವೇತಾ ಆರ್ ಪ್ರಸಾದ್. ಕನ್ನಡದಲ್ಲಿ ಸೂಪರ್ ಹಿಟ್ ಸೀರಿಯಲ್ ಗಳಲ್ಲಿ ನಟಿಸಿ, ರಾಧಾ ಮಿಸ್ ಎಂದೇ ಜನಪ್ರಿಯತೆ ಪಡೆದಿರುವ ನಟಿ. ಒಂದೆರಡು ಸಿನಿಮಾಗಳಲ್ಲೂ ನಟಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಂತೂ ನಟಿ ಸಿಕ್ಕಾಪಟ್ಟೆ ಫೇಮಸ್.
26
ಬೋಲ್ಡ್ ಅವತಾರ
ಶ್ವೇತಾ ಪ್ರಸಾದ್ ತಮ್ಮ ಇನ್’ಸ್ಟಾಗ್ರಾಂನಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುತ್ತಾರೆ. ಅವರು ಒಂದಲ್ಲ ಒಂದು ಫೋಟೊಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಈ ಬಾರಿ ನಟಿ ಹಂಚಿಕೊಂಡಿರುವ ಫಿಟ್ನೆಸ್ ಮತ್ತು ಬೋಲ್ಡ್ ಫೋಟೊಗಳು ಇದೀಗ ಸಖತ್ ವೈರಲ್ ಆಗುತ್ತಿದೆ. ನಟಿಯನ್ನು ಹಾಲಿವುಡ್ ಬ್ಯೂಟಿಗೆ ಹೋಲಿಕೆ ಮಾಡಿದ್ದಾರೆ ಜನ.
36
ಏಂಜಲೀನಾ ಜೋಲಿ
ನಟಿಯ ಸುಂದರ ಫೋಟೊಗಳು ಹಾಗೂ ಫಿಟ್ನೆಸ್ ಕಡೆಗೆ ನಟಿ ಗಮನ ಕೊಡುತ್ತಿರುವ ರೀತಿ ನೋಡಿ ಅಭಿಮಾನಿಗಳು ನಿಮ್ಮ ಫಿಟ್ನೆಸ್ ನೋಡಿದ್ರೆ ಏಂಜಲೀನಾ ಜೋಲಿ ಥರ ಕಾಣಿಸುತ್ತೀರಿ. ನೀವು ಸ್ಯಾಂಡಲ್ ವುಡ್ ಏಂಜಲೀನಾ ಜೋಲಿ ಎಂದಿದ್ದಾರೆ. ನಿಜಕ್ಕೂ ಹಾಗೇ ಕಾಣಿಸುತ್ತಿದ್ದಾರೆಯೇ? ನೀವೆ ನೋಡಿ ಹೇಳಿ.
ನಟಿ ಶ್ವೇತಾ ಪ್ರಸಾದ್ ತಮ್ಮ ಆಹಾರದ ಜೊತೆಗೆ ಎಂದಿಗೂ ರಾಜಿ ಮಾಡಿಕೊಳ್ಳೋದಿಲ್ಲ, ಸಿಹಿ, ಊಟ ಎನ್ನುತ್ತಾ ಎಲ್ಲವನ್ನೂ ತಿನ್ನುತ್ತಾರೆ. ಆದರೆ ಫಿಟ್ನೆಸ್ ಬಗ್ಗೆ ರಾಜಿ ಮಾಡಿಕೊಳ್ಳುವುದಿಲ್ಲ. ವರ್ಕೌಟ್, ಯೋಗ, ಜಿಮ್ ಎಂದು ನಟಿ ತಮ್ಮ ದೇಹದ ಬಗ್ಗೆ ಸಿಕ್ಕಾಪಟ್ಟೆ ಕೇರ್ ತೆಗೆದುಕೊಳ್ಳುತ್ತಿದ್ದಾರೆ.
56
ಹೊಸ ಪೋಸ್ಟ್ ಮೂಲಕ ಸಲಹೆ
ಮಾರುಕಟ್ಟೆಗಳು, ಟ್ರೆಂಡ್ ಗಳು, ಜನರು ಅಥವಾ ಭಾವನೆಗಳು ನಿಮ್ಮ ಸಂತೋಷವು ನಿಮ್ಮ ಹೊರಗೆ ಎಲ್ಲೋ ಇದೆ ಎಂದು ನಿಮ್ಮನ್ನು ಮನವೊಲಿಸಲು ಬಿಡಬೇಡಿ. ನಿಮ್ಮ ಆರೋಗ್ಯ ಮತ್ತು ಶಾಂತಿ ಮುಖ್ಯ, ಖರೀದಿ ಅಲ್ಲ ಎಂದು ನಟಿ ತಮ್ಮ ಅಭಿಮಾನಿಗಳಿಗೆ ಸಲಹೆ ನೀಡಿದ್ದಾರೆ.
66
ಪ್ರಸಾದ್ ಫೌಂಡೇಶನ್ ಮೂಲಕ ನೆರವು
ಇನ್ನು ಶ್ವೇತಾ ಪ್ರಸಾದ್ ನಟನೆ ಮಾತ್ರ ಅಲ್ಲ, ಪ್ರಸಾದ್ ಫೌಂಡೇಶನ್ ಮೂಲಕ SSLC ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪ್ರಾಯೋಜಕತ್ವ, ನೆರವು ಟ್ರಸ್ಟ್ ಮೂಲಕ ಫೋರ್ ಮೀಲ್ ಡ್ರೈವ್, ಪ್ರತಿ ತಿಂಗಳು ಅನಾಥಾಶ್ರಮಕ್ಕೆ ಭೇಟಿ, ಹಿರಿಯ ನಾಗರೀಕರಿಗೆ ನೆರವು ಸೇರಿ ಹಲವು ಸಮಾಜಸೇವೆ ಕಾರ್ಯಗಳನ್ನು ಮಾಡುತ್ತಿರುತ್ತಾರೆ ನಟಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.