ಖಮೇನಿ ಹತ್ಯೆ, ಭಾರತ ತೊರೆದು ಇರಾನ್‌ನಲ್ಲಿ ನೆಲೆಸಲು ಸಿದ್ಧ ಎಂದ ಬಿಗ್ ಬಾಸ್ ಮಾಜಿ ಸ್ಪರ್ಧಿ, ಸರ್ವೋಚ್ಚ ನಾಯಕನ ಹತ್ಯೆ ಬೆನ್ನಲ್ಲೇ ತಾನು ಭಾರತ ತೊರೆದು ಇರಾನ್‌ಗೆ ಮರಳಲು ಸಿದ್ದ ಎಂದಿದ್ದಾರೆ.
ಇಸ್ರೇಲ್ ಹಾಗೂ ಅಮೇರಿಕ ನಡೆಸಿದ ದಾಳಿಯಲ್ಲಿ ಇರಾನ್ ಸರ್ವೋಚ್ಚ ನಾಯಕ ಅಯೊತೊಲಾ ಖಮೇನಿ ಹತ್ಯೆಯಾಗಿ ದಿನಗಳು ಉರುಳಿದೆ. ಆದರೆ ವಿಶ್ವಾದ್ಯಂತ ಮುಸ್ಲಿಮರು ಖಮೇನಿ ಹತ್ಯೆ ಖಂಡಿಸಿ ಪ್ರತಿಭಟನೆ, ಶೋಕಾಚರಣೆ ನಡೆಸುತ್ತಿದ್ದಾರೆ. ಭಾರತದಲ್ಲಿ ವಿವಿದೆಡೆ ಹತ್ಯೆ ಖಂಡಿಸಿ ಪ್ರತಿಭಟನೆಗಳು ನಡೆಯುತ್ತಿದೆ. ಶೋಕಾಚರಣೆ, ಬಂದ್ ನಡೆಸಲಾಗಿದೆ. ಇದರ ಬೆನ್ನಲ್ಲೇ ಮಾಜಿ ಬಿಗ್ ಬಾಸ್ ಸ್ಪರ್ಧಿ ನೀಡಿದ ಹೇಳಿಕೆ ಭಾರಿ ಕೋಲಾಹಲ ಸೃಷ್ಟಿಸಿದೆ.
26
ಭಾರತ ತೊರೆದು ಇರಾನ್ ನೆಲೆಸಲು ಸಿದ್ಧ
ಬಿಗ್ ಬಾಸ್ 9ನೇ ಆವೃತ್ತಿಯಲ್ಲಿ ಕಾಣಿಸಿಕೊಂಡ ಮಾಡೆಲ್ ಕಮ್ ನಟಿ ಮಂದನಾ ಕರಿಮಿ ಇದೀಗ ಭಾರತ ತೊರೆಯಲು ಸಿದ್ದ ಎಂದಿದ್ದಾರೆ. ಈಗಾಗಲೇ ಬ್ಯಾಗ್ ಪ್ಯಾಕ್ ಮಾಡಿದ್ದು, ಯಾವುದೇ ಕ್ಷಣದಲ್ಲೂ ಇರಾನ್‌ಗೆ ಮರಳುತ್ತೇನೆ. ಭಾರತ ತೊರೆದು ಇರಾನ್ ನೆಲೆಸದಲ್ಲಿ ನಾನು ಸಿದ್ಧಳಾಗಿದ್ದೇನೆ ಎಂದಿದ್ದಾರೆ.
36
ಸಂಚಲನ ಸೃಷ್ಟಿಸಿದ ಹೇಳಿಕೆ
ಮಂದನಾ ಕರಿಮಿ ಇಂಡಿಯನ್ ಇರಾನಿಯನ್ ಮಾಡೆಲ್. ಹುಟ್ಟಿ ಬೆಳೆದಿದ್ದು ಎಲ್ಲಾ ಇರಾನ್‌ನಲ್ಲಿ. ಕಳೆದ ಕೆಲ ದಶಕದಿಂದ ಭಾರತದಲ್ಲಿ ನೆಲೆಸಿದ್ದಾರೆ. ಹಿಂದಿ ಬಿಗ್ ಬಾಸ್ 9ನೇ ಆವೃತ್ತಿಯಲ್ಲಿ ಮಂದಾನ ಕರಿಮಿ ಕಾಣಿಸಿಕೊಂಡಿದ್ದರು. ಬಾಲಿವುಡ್ ಸೇರಿದಂತೆ ಕೆಲ ವೇದಿಕೆಗಳಲ್ಲೂ ಕಾಣಿಸಿಕೊಂಡಿದ್ದಾರೆ. ಆಯತೊಲ್ಲಾ ಖಮೇನಿ ಹತ್ಯೆಯ ಬೆನ್ನಲ್ಲೇ ಹೇಳಿಕೆ ಈ ಮಾತು ಇದೀಗ ಭಾರಿ ಸಂಚಲನ ಸೃಷ್ಟಿಸಿದೆ.
ಬಾಲಿವುಡ್ ಹಂಗಾಮಗೆ ನೀಡಿದ ಸಂದರ್ಶನದಲ್ಲಿ ಮಂದಾನ ಕರಿಮಿ ಈ ಮಾತುಗಳನ್ನು ಹೇಳಿದ್ದಾರೆ. ಇರಾನ್ ದೇಶ ಇರಾನ್ ಆಗಿ ಇರಬೇಕು. ಮಹಿಳೆಯರು ಸ್ವತಂತ್ರರಾಗಬೇಕು. ಮಹಿಳೆಯ ಸ್ವಾತಂತ್ರಕ್ಕೆ ನಿರ್ಬಂಧ, ನಿಬಂಧನೆಗಳು ಇರಬಾರದು. ಖಮೇನಿ ಹತ್ಯೆಯಾದ ಬಳಿಕ ಇರಾನ್ ಮತ್ತೆ ಗತವೈಭವಕ್ಕೆ ಮರಳುವ ಸಾಧ್ಯತೆ ಇದೆ ಅನ್ನೋ ವಿಶ್ವಾಸವಿದೆ ಎಂದಿದ್ದಾರೆ. ಹೀಗಾಗಿ ತಾನು ಇರಾನ್‌ಗೆ ಮರಳುವುದಾಗಿ ಹೇಳಿದ್ದಾರೆ.
56
ಭಾರತದಲ್ಲಿ ನನ್ನ ಧ್ವನಿಗೆ ಅಡ್ಡಿ
ನಾನು ಕಳೆದ ಹಲವು ವರ್ಷಗಳಿಂದ ಭಾರತದಲ್ಲಿ ಇದ್ದೇನೆ. ಭಾರತ ನನಗೆ ಎಲ್ಲೂವೂ ನೀಡಿದೆ. ಆದರೆ ಇತ್ತೀಚೆಗೆ ಭಾರತದಲ್ಲಿ ನನ್ನ ಧ್ವನಿಗೆ ಹಲವು ಅಡೆ ತಡೆ ಎದುರಾಗುತ್ತಿದೆ. ಭಾರತ ತೊರೆಯುವುದು ಸುಲಭದ ವಿಚಾರವಲ್ಲ. ಭಾವನಾತ್ಮಕವಾಗಿ ನಾನು ಬೆಸೆದುಕೊಂಡಿದ್ದೇನೆ ಎಂದು ಮಂದನಾ ಕರಿಮಿ ಹೇಳಿದ್ದಾರೆ.
66
ನಾನು ಸಂಭ್ರಮಿಸುತ್ತೇನೆ
ಇರಾನ್‌ಗೆ ತೆರಳಿ ನಾನು ಸಂಭ್ರಮಿಸುತ್ತೇನೆ. ಇರಾನ್ ಕಳೆದ ಹಲವು ವರ್ಷಗಳಿಂದ ಯಾವ ಕೆಟ್ಟ ಪರಿಸ್ಥಿತಿಯಲ್ಲಿತ್ತು ಅನ್ನೋದು ಜಗತ್ತು ನೋಡಿದೆ. ಕಳೆದ 48 ವರ್ಷಗಳಿಂದ ಇರಾನ್ ಮುಗ್ದ ಜನರು ನಗು ಕಳೆದುಕೊಂಡಿದ್ದಾರೆ. ಸ್ವತಂತ್ರವಾಗಿ ಹಾರಾಡುಲು ಸಾಧ್ಯವಾಗದ ಪರಿಸ್ಥಿತಿಯಲಲ್ಲಿದ್ದರು. ಇದೀಗ ಎಲ್ಲವೂ ಬದಲಾಗಲಿದೆ ಅನ್ನೋ ನಂಬಿಕೆ ಇದೆ ಎಂದಿದ್ದಾರೆ.
ನಾನು ಸಂಭ್ರಮಿಸುತ್ತೇನೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.