Karna Serial: ಒಡೆದ ಹೃದಯಗಳ ಪಿಸುಮಾತಿಗೆ ಸಾಕ್ಷಿಯಾದ ಕರ್ಣ-ನಿಧಿ ಮೌನ, ಅಸಹಾಯಕಳಾಗಿ ನಿಂತ ನಿತ್ಯಾ

Published : Oct 21, 2025, 02:59 PM IST

ಸ್ವಾರ್ಥಿ ರಮೇಶನ ಕುತಂತ್ರದಿಂದಾಗಿ ಕರ್ಣನು ನಿಧಿಯ ಬದಲು ಆಕೆಯ ಅಕ್ಕ ನಿತ್ಯಾಳನ್ನು ಮದುವೆಯಾಗಿದ್ದಾನೆ. ಪ್ರೀತಿ ಕಳೆದುಕೊಂಡು ನೊಂದಿರುವ ನಿಧಿಗೆ, ರಮೇಶನು ಕರ್ಣನ ಮೇಲೆ ದ್ವೇಷ ಬರುವಂತೆ ಮಾಡುತ್ತಿದ್ದಾನೆ. ಆದರೆ, ಈ ಮದುವೆಯ ಹಿಂದೆ ನಿತ್ಯಾಳ ಗರ್ಭಧಾರಣೆಯ ರಹಸ್ಯ ಅಡಗಿದೆ.

PREV
15
ರಮೇಶ್ ಕುತಂತ್ರ

ಸ್ವಾರ್ಥಿ, ನೀಚ ರಮೇಶ್ ಕುತಂತ್ರದಿಂದಾಗಿ ಪ್ರೀತಿಸಿದ ಎರಡು ಹೃದಯಗಳು ದೂರವಾಗಿವೆ. ಸದಾ ದ್ವೇಷಿಸುತ್ತಿದ್ದ ವ್ಯಕ್ತಿ ಜೊತೆಯಲ್ಲಿ ನಿತ್ಯಾ ಸಪ್ತಪದಿ ತುಳಿದಿದ್ದಾಳೆ. ಅಕ್ಕ ನಿತ್ಯಾಳ ಕೊರಳಲ್ಲಿ ತಾಳಿ ನೋಡಿದ ನಿಧಿಗೆ ಯಾರ ಮುಂದೆ ತನ್ನ ನೋವು ಹೇಳಿಕೊಳ್ಳಬೇಕು ಅನ್ನೋದು ತಿಳಿಯದೇ ಕಣ್ಣೀರು ಹಾಕುತ್ತಿದ್ದಾರೆ.

25
ಕರ್ಣನ ಮೇಲೆ ದ್ವೇಷ ಬರುವಂತೆ ರಮೇಶ್‌ನ ಮಾತು

ಈಗಾಗಲೇ ಪ್ರೀತಿಯನ್ನು ಕಳೆದುಕೊಂಡಿರುವ ನಿಧಿಗೆ ಸಾಂತ್ವಾನ ಮಾಡುವ ನೆಪದಲ್ಲಿ ಕರ್ಣನ ಮೇಲೆ ದ್ವೇಷ ಬರುವಂತೆ ರಮೇಶ್ ಮಾತನಾಡಿದ್ದಾನೆ. ಅಳುತ್ತಿದ್ದ ನಿಧಿಯನ್ನು ಮಂಟಪದತ್ತ ರಮೇಶ್ ಕರೆದುಕೊಂಡಿದ್ದಾನೆ. ಕೆಲ ಸಮಯದ ಹಿಂದೆಯಷ್ಟೇ ತನಗೆ ಪ್ರಪೋಸ್ ಮಾಡಿ ಅಕ್ಕನಿಗೆ ತಾಳಿ ಕಟ್ಟಿದ್ದಾನೆ ಎಂಬ ವಿಷಯ ಕೇಳಿ ಶರಪಂಜರದ ಕಲ್ಪನಾ ರೀತಿಯಲ್ಲಿಯಾಗಿದ್ದಾಳೆ ನಿಧಿ.

35
ನಿಧಿ ಕಣ್ಣೀರು

ಕೊಟ್ಟ ಪ್ರೀತಿಯನ್ನು ಯಾಕೆ ಕಿತ್ತುಕೊಂಡೇ ದೇವರೇ? ನಾನು ನಿನಗೆ ಏನು ಅನ್ಯಾಯ ಮಾಡಿದ್ದೆ? ನನ್ನ ಪ್ರೀತಿಗೆ ಯಾಕೆ ಅನ್ಯಾಯ ಮಾಡಿದೆ? ಇಷ್ಟೆಲ್ಲಾ ಆದ್ಮೇಲೆಯೂ ನಾನೇಕೆ ಬದುಕಿರಬೇಕು ಎಂದು ನಿಧಿ ಕಣ್ಣೀರು ಹಾಕಿದ್ದಾಳೆ. ಈ ವೇಳೆ ಅಲ್ಲಿಗೆ ರಮೇಶ್, ನಿನ್ನ ಅಳು ಎಲ್ಲವನ್ನು ಸರಿ ಮಾಡುತ್ತೆ ಅಂತಿದ್ರೆ ದಿನವಿಡೀ ಅಳುವಂತೆ ಹೇಳುತ್ತಿದ್ದೆ. ಆದ್ರೆ ಎಲ್ಲವೂ ನಮ್ಮ ಕೈ ಮೀರಿ ಹೋಗಿದೆ ಎಂದು ಹೇಳಿದ್ದಾನೆ.

45
ರಮೇಶ್ ಮೊಸಳೆ ಕಣ್ಣೀರು

ನಾನು ಯಾರಿಗೆ ಏನು ಅನ್ಯಾಯ ಮಾಡಿದ್ದೆ? ಇದನ್ನೆಲ್ಲಾ ಯಾರ ಬಳಿ ಕೇಳಲಿ ಎಂದು ನಿಧಿ ಪ್ರಶ್ನೆ ಮಾಡಿದ್ದಾಳೆ. ಇದಕ್ಕೆಲ್ಲಾ ಕಾರಣ ಆ ದೇವರು? ಯಾವತ್ತು ನನ್ನ ಮಾತು ಕೇಳುವ ಕರ್ಣ ಇವತ್ತು ಕಲ್ಲಾಗಿಬಿಟ್ಟ. ನಿತ್ಯಾ ಮತ್ತು ಅಜ್ಜಿಗೆ ನೀನೇ ಧೈರ್ಯ ತುಂಬಬೇಕು. ಕರ್ಣನಿಗೂ ನೀನೇ ಸಮಾಧಾನ ಮಾಡಬೇಕು ಎಂದು ರಮೇಶ್ ಮೊಸಳೆ ಕಣ್ಣೀರು ಹಾಕಿದ್ದಾನೆ.

ಇದನ್ನೂ ಓದಿ: ತಾಳಿ ಕಟ್ಟಲಿಲ್ಲ, ಗಂಡನಾಗಲಿಲ್ಲ; ನಿತ್ಯಾ ಹೊಟ್ಟೆಯಲ್ಲಿ ಬೆಳೆಯುವ ಮಗುವಿಗೆ ಅಪ್ಪನಾಗ್ತಾನಾ ಕರ್ಣ?

55
ರಹಸ್ಯ

ರಮೇಶ್‌ನ ಮೋಸದಾಟದಲ್ಲಿ ಕರ್ಣ, ನಿಧಿ ಮತ್ತು ನಿತ್ಯಾ ಜೀವಂತ ಗೊಂಬೆಗಳಾಗಿದ್ದಾರೆ. ಎಲ್ಲವೂ ತಾನು ಅಂದುಕೊಂಡಂತೆ ಆಗುತ್ತಿದೆ ಅಂತ ತಿಳಿದಿರುವ ರಮೇಶ್‌ಗೆ ನಾಲ್ಕು ಗೋಡೆಯಲ್ಲಿ ನಡೆದ ಮೂರು ಗಂಟಿನ ರಹಸ್ಯ ಗೊತ್ತಿಲ್ಲ. ನಿತ್ಯಾ ಗರ್ಭಿಣಿ ಅನ್ನೋ ರಹಸ್ಯವೂ ಮನೆಯಲ್ಲಿ ಯಾರಿಗೂ ತಿಳಿದಿಲ್ಲ.

ಇದನ್ನೂ ಓದಿ: Karna Serial: ಕರ್ಣನ ನಗು ಕಿತ್ತುಕೊಂಡ್ರು ನೀಚರಿಗೆ ತೃಪ್ತಿಯಾಗಲಿಲ್ವಾ? ನಿತ್ಯಾ, ನಿಧಿಗೆ ಶಾಕ್‌ ಮೇಲೆ ಶಾಕ್

Read more Photos on
click me!

Recommended Stories