ರಮೇಶ್‌ನ ಕುತಂತ್ರದಿಂದ ಕರ್ಣನು ನಿತ್ಯಾಳನ್ನು ಮದುವೆಯಾಗಿದ್ದಾನೆ. ತನ್ನ ಪ್ರೀತಿಯನ್ನು ಕಳೆದುಕೊಂಡ ನಿಧಿ ಕಣ್ಣೀರಲ್ಲಿ ಮುಳುಗಿದ್ದರೆ, ಕರ್ಣನು ನಿತ್ಯಾಳ ಗರ್ಭದ ಜವಾಬ್ದಾರಿ ಹೊತ್ತಿದ್ದಾನೆ. ಮೊದಲ ರಾತ್ರಿಯಲ್ಲಿ ಈ ಸತ್ಯಗಳ ಗಂಟು ಬಿಚ್ಚುವುದೇ ಎಂಬುದು ಕಥೆಯ ತಿರುವು.
ಕರ್ಣ ಸೀರಿಯಲ್ ಇದೀಗ ಹೊಸ ತಿರುವುಗಳೊಂದಿಗೆ ಪ್ರಸಾರವಾಗುತ್ತಿದೆ. ರಮೇಶ್‌ನ ಕುತಂತ್ರದಿಂದಾಗಿ ನಿತ್ಯಾ, ನಿಧಿ ಮತ್ತು ಶಾಂತಿ ಮನೆಗೆ ಬಂದಿದ್ದಾರೆ. ಇದೀಗ ಮನೆ ಬಂದಿರುವ ಅಜ್ಜನ ಫೋಟೋ ಮುಂದೆ ನಿಂತುಕೊಂಡು ಮದುವೆಯಲ್ಲಿ ನಡೆದ ಎಲ್ಲಾ ರಹಸ್ಯಗಳನ್ನು ಹೇಳಿಕೊಂಡಿದ್ದಾನೆ. ಆ ಸಮಯದಲ್ಲಿ ತಾನು ತೆಗೆದುಕೊಂಡು ನಿರ್ಧಾರ ಸರಿ ಆಗಿತ್ತು ಎಂದು ಕರ್ಣ ಹೇಳಿದ್ದಾನೆ.
25
ಕರ್ಣನಿಗೆ ಮತ್ತೊಂದು ಜವಾಬ್ದಾರಿ
ಅಜ್ಜನ ಫೋಟೋ ಮುಂದೆ ನಿಂತು ಕರ್ಣ ಮತ್ತೊಂದು ಮಹತ್ವದ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾನೆ. ನಿತ್ಯ ಹೊಟ್ಟೆಯಲ್ಲಿರುವ ಅಡಗಿರುವ ಸತ್ಯ, ತಾಯಿ ಹೊಟ್ಟೆಯಲ್ಲಿರುವ ಮಗು, ಗರ್ಭಗುಡಿಯಲ್ಲಿರುವ ದೇವರ ಸಮಾನ ಎಂದು ನೀವು ನನಗೆ ಹೇಳಿದ್ದೀರಿ. ಇನ್ಮುಂದೆ ನಿತ್ಯಾ ಜೊತೆಯಲ್ಲಿ ಆಕೆಯ ಹೊಟ್ಟೆಯಲ್ಲಿರುವ ಜವಾಬ್ದಾರಿಯನ್ನು ಕರ್ಣ ತೆಗೆದುಕೊಂಡಿದ್ದಾನೆ.
35
ಕ್ಷಣ ಕ್ಷಣಕ್ಕೂ ಕಣ್ಣೀರು ಹಾಕ್ತಿರೋ ನಿಧಿ
ಕರ್ಣ ಮತ್ತು ನಿತ್ಯಾಳ ಮೊದಲ ರಾತ್ರಿಗೆ ನಿಧಿಯಿಂದಲೇ ಕೋಣೆಯನ್ನು ಅಲಂಕರಿಸುವಂತೆ ರಮೇಶ್ ಮಾಡಿದ್ದಾನೆ. ಭಾರವಾದ ಹೃದಯದಿಂದಲೇ ಕರ್ಣನ ಕೋಣೆಯನ್ನು ನಿಧಿ ಹೂಗಳಿಂದ ಅಲಂಕಾರ ಮಾಡಿದ್ದಾಳೆ. ಇನ್ಮುಂದೆ ಕರ್ಣ ನನ್ನ ಸ್ವತ್ತು ಅಲ್ಲ. ಈಗ ನಿತ್ಯಾ ಅಕ್ಕಳ ಗಂಡ ಎಂಬ ಸತ್ಯವನ್ನು ಮನವರಿಕೆ ಮಾಡಿಕೊಂಡಿದ್ದಾಳೆ. ಆದ್ರೂ ಕರ್ಣನ ಪ್ರೀತಿಯನ್ನು ಕಳೆದುಕೊಂಡು ನಿಧಿ ಕ್ಷಣ ಕ್ಷಣಕ್ಕೂ ಕಣ್ಣೀರು ಹಾಕಿದ್ದಾಳೆ.
ಕರ್ಣನ ಸೂಚನೆಯಂತೆ ನಿತ್ಯಾ ಕೊರಳಿಗೆ ತಾಳಿ ಕಟ್ಟಿಕೊಂಡಿದ್ದಾಳೆ. ಮುಂದಿನ ದಿನಗಳಲ್ಲಿ ಈ ಸತ್ಯ ತಿಳಿಯುವ ಸಮಯ ಬರಲಿದೆ ಎಂದು ಕರ್ಣ ಹೇಳಿದ್ದಾನೆ. ಸಪ್ತಪದಿ ತುಳಿಯುವ ವೇಳೆ ನಿತ್ಯಾ ಗರ್ಭಿಣಿ ಎಂಬ ಸತ್ಯ ಕರ್ಣನಿಗೆ ಗೊತ್ತಾಗಿದೆ. ಮೊದಲ ರಾತ್ರಿಯಲ್ಲಿ ಈ ಸತ್ಯವನ್ನು ಕರ್ಣನಿಗೆ ನಿತ್ಯಾ ಹೇಳ್ತಾಳಾ ಅನ್ನೋದು ಮುಂದಿನ ಸಂಚಿಕೆಯಲ್ಲಿ ತಿಳಿಯಲಿದೆ.
ಇಡೀ ದಿನ ನಡೆದ ಘಟನೆಗಳಿಂದ ನೊಂದಿರುವ ನಿಧಿ, ಗೊಂಬೆಯನ್ನು ಹಿಡಿದುಕೊಂಡು ಕಣ್ಣೀರು ಹಾಕುತ್ತಿದ್ದಾಳೆ. ಪ್ರೇಯಸಿ ನಿಧಿ ಮುಂದೆ ನಾಲ್ಕು ಗೋಡೆ ನಡುವೆ ಸತ್ಯವನ್ನು ಹೇಳಲು ಕರ್ಣ ಮುಂದಾಗಿದ್ದಾನೆ. ಇತ್ತ ರಮೇಶ್ ತಾನು ಗೆದ್ದೆ ಎಂಬ ಖುಷಿಯಲ್ಲಿ ರಮೇಶ್ ತೇಲಾಡುತ್ತಿದ್ದು, ಹೆಂಡತಿ ಮಾಲತಿ ಮುಂದೆ ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾನೆ. ರಮೇಶ್ ವಶಿಷ್ಠ ಹೆಚ್ಚು ರಾಕ್ಷಸ, ಸ್ವಲ್ಪ ಮನುಷ್ಯ ಎಂದು ರಮೇಶ್ ಡೈಲಾಗ್ ಹೊಡೆದಿದ್ದಾನೆ.