ಗೌತಮ್ ಮನೆಯ ಬಗ್ಗೆ ತಿಳಿಯುವ ಕುತೂಹಲದಿಂದ ಮಲ್ಲಿ, ಆಕಾಶ್‌ನನ್ನು ಅವರ ಮನೆಗೆ ಕಳುಹಿಸುತ್ತಾಳೆ. ಆದರೆ ಈ ವಿಷಯ ಭೂಮಿಕಾ ಮುಂದೆ ಬಾಯಿ ತಪ್ಪಿ ಹೇಳಿದಾಗ, ಗೌತಮ್ ಮತ್ತು ಭೂಮಿಕಾ ನಡುವಿನ ಸಂಬಂಧದಲ್ಲಿ ಹೊಸ ಬಿಕ್ಕಟ್ಟು ಶುರುವಾಗುತ್ತದೆ, ಇದರಿಂದ ಭೂಮಿಕಾ ಮುಂದಿನ ನಿರ್ಧಾರದ ಬಗ್ಗೆ ಕುತೂಹಲ ಮೂಡಿದೆ.
ಅಮೃತಧಾರೆ (Amruthadhaare) ಸೀರಿಯಲ್ನಲ್ಲಿ ಸದ್ಯ ಭಾರಿ ಟ್ವಿಸ್ಟ್ ಸಿಕ್ಕಿದ್ದು, ಗೌತಮ್ ಮನೆಯಲ್ಲಿ ಎಷ್ಟು ಮಂದಿ ಇದ್ದಾರೆ ಎಂದು ನೋಡುವ ಕುತೂಹಲದಿಂದ ಮಲ್ಲಿ ಆಕಾಶ್‌ನನ್ನು ಗೌತಮ್ ಮನೆಗೆ ಕಳುಹಿಸಿದ್ದಳು. ಅವರ ಮನೆಗೆ ಹೋಗುವುದು ಬೇಡ ಎಂದು ಭೂಮಿಕಾ ಮಲ್ಲಿಗೆ ಹೇಳಿದ್ದರಿಂದ ಅವಳು ಆಕಾಶ್‌ನನ್ನು ಕಳುಹಿಸಿದ್ದಳು.
26
ಆಕಾಶ್‌ನನ್ನು ಕಳುಹಿಸಿದ ಮಲ್ಲಿ
ಬೇಡ ಬೇಡ ಎಂದರೂ ಕೇಳದೇ ಆಕಾಶ್ನಿಗೆ ಒತ್ತಾಯ ಮಾಡಿ ಕಳುಹಿಸಿದ್ದಳು ಮಲ್ಲಿ. ಅಲ್ಲಿ ಗೌತಮ್ ಬಿಸಿಬೇಳೆ ಬಾತ್ ಮಾಡಿದ್ದ. ಇದನ್ನು ನೋಡಿ ಆಕಾಶ್ ಬಾಯಲ್ಲಿ ನೀರೂರಿತು. ಸುಮ್ನೆ ಬಿಡ್ತಾನಾ ಡುಮ್ಮ ಸರ್ ಮಗ? ಚೆನ್ನಾಗಿ ಬಾರಿಸಿದ.
36
ಬಿಸಿಬೇಳೆ ಬಾತ್
ಮನೆಗೆ ಬಂದು ನೋಡಿದ್ರೆ ಭೂಮಿಕಾನೂ ಬಿಸಿಬೇಳೆ ಬಾತ್ನ್ನೇ ಮಾಡಿದ್ದಳು. ಅಲ್ಲಿ ಹೋಗಿದ್ದನ್ನು ಕೇಳಿಕೊಳ್ಳಲಾಗದೇ ಸಂಕಟ ಪಟ್ಟ ಆಕಾಶ್. ವಿಷ್ಯ ಗೊತ್ತಾಗತ್ತೆ ಎಂದು ಅದನ್ನೂ ತಿಂದ.
ಕೊನೆಗೆ ಮಾತು ಮಾತಿನ ನಡುವೆ ಮಲ್ಲಿ ಗೌತಮ್ ಮನೆಯಲ್ಲಿ ಇಬ್ಬರೇ ಇರೋದು ಅಂತ ಭೂಮಿಕಾ ಎದುರು ಬಾಯಿ ತಪ್ಪಿ ಹೇಳಿದಳು. ಹೇಳಿ ಕೇಳಿ ಹೆಡ್ ಮಿಸ್ಸು ಭೂಮಿ ಮಿಸ್ಸು, ಕೇಳ್ಬೇಕಾ? ಅದು ಹೇಗೆ ಗೊತ್ತಾಯ್ತು ಅಂತ ಪ್ರಶ್ನಿಸಿದಳು.
56
ವಿಷ್ಯ ತಿಳಿದೇ ಹೋಯ್ತು
ಆಗ ಮಲ್ಲಿ, ಆಕಾಶ್ ಗೌತಮ್ ಮನೆಗೆ ಹೋಗಿದ್ದ ವಿಷ್ಯ ಹೇಳೇಬಿಟ್ಟಳು. ಆಕಾಶ್‌ನನ್ನು ಭೂಮಿಕಾ ಕೇಳಿದಾಗ, ಚಿಕ್ಕಿನೇ ಫೋರ್ಸ್ ಮಾಡಿ ಕಳಿಸಿರೋ ವಿಷ್ಯ ಹೇಳಿದ.
66
ಮುಂದೇನ್ ಮಾಡ್ತಾಳೆ ಭೂಮಿಕಾ?
ಕೊನೆಯಲ್ಲಿ ಗೌತಮ್ ಸರ್ಗೆ ಬೇಸರ ಆಗಬಾರದು ಎಂದು ಬಿಸಿಬೇಳೆ ಬಾತ್ ತಿಂದೆ, ಇಲ್ಲಿ ನಿಂಗೆ ಬೇಸರ ಆಗ್ಬಾರ್ದು ಎಂದು ಇಲ್ಲೂ ತಿಂದೆ ಎಂದ. ಮುಂದೆ ಭೂಮಿಕಾ ಏನು ಮಾಡ್ತಾಳೋ ನೋಡಬೇಕಿದೆ. ಮನೆ ಚೇಂಜ್ ಮಾಡ್ತಾಳಾ ಎನ್ನೋದು ಇನ್ನಷ್ಟೇ ಕಾದು ನೋಡಬೇಕಿದೆ.