ಜೀ ಕನ್ನಡದ 'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ಭಾವನಾ-ಸಿದ್ದೇಗೌಡರ ಗೃಹಪ್ರವೇಶದ ದೃಶ್ಯವು ವೀಕ್ಷಕರ ಬೇಸರಕ್ಕೆ ಕಾರಣವಾಗಿದೆ. ಅರಿಶಿನ-ಕುಂಕುಮವಿಲ್ಲದೆ ಪೂಜೆ ಮಾಡಿರುವುದು ಮತ್ತು ಲಕ್ಷ್ಮೀ-ಶ್ರೀನಿವಾಸ್ ಸ್ವಂತ ಮನೆ ಇಲ್ಲದಿರುವಾಗ ಮಕ್ಕಳು ಪ್ರತ್ಯೇಕವಾಗುತ್ತಿರುವುದು ಟೀಕೆಗೆ ಗುರಿಯಾಗಿದೆ.
ಜೀ ಕನ್ನಡದಲ್ಲಿ ಪ್ರಸಾರವಾಗುವ ಲಕ್ಷ್ಮೀ ನಿವಾಸ ಧಾರಾವಾಹಿಯ ಶುಕ್ರವಾರದ ಸಂಚಿಕೆ ಬಗ್ಗೆ ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ. ಭಾವನಾ ಮತ್ತು ಸಿದ್ದೇಗೌಡ ಜೊತೆಯಾಗಿ ಹೊಸ ಮನೆ ಮಾಡಿಕೊಂಡಿದ್ದು, ಶ್ರೀನಿವಾಸ್-ಲಕ್ಷ್ಮೀ ಸಮ್ಮುಖದಲ್ಲಿ ಹಾಲು ಉಕ್ಕಿಸುವ ಕಾರ್ಯಕ್ರಮ ಮಾಡಿದ್ದಾರೆ.
25
ಅರಿಶಿನ ಕುಂಕುಮ ಇಲ್ಲದೇ ಪೂಜೆ
ಮಗಳು-ಅಳಿಯನ ಮುಂದಿನ ಜೀವನಕ್ಕೆ ಶುಭ ಹಾರೈಸಿ ಹೊರಡುತ್ತಿರುತ್ತಾರೆ. ಈ ವೇಳೆ ಹೊಸ ಮನೆಯಾಗಿದ್ದರಿಂದ ಅರಿಶಿನ-ಕುಂಕುಮ ತಂದಿಲ್ಲ. ಇನ್ನೊಮ್ಮೆ ಬಂದಾಗ ಕೊಡುವೆ ಎಂದು ತಾಯಿಗೆ ಭಾವನಾ ಹೇಳುತ್ತಾಳೆ. ಇದಕ್ಕೆ ನಾವೇನು ನೆಂಟರೇನು ಎಂದು ಮಗಳಿಗೆ ತಾಯಿ ಸಮಾಧಾನ ಮಾಡ್ತಾರೆ. ಸೀರಿಯಲ್‌ನ ಈ ಭಾಗ ನೋಡಿದ ವೀಕ್ಷಕರು, ಈ ದೃಶ್ಯದಲ್ಲಾದ ತಪ್ಪುಗಳನ್ನು ಕಂಡು ಹಿಡಿದಿದ್ದಾರೆ.
35
ಸಂಭಾಷಣೆ ಬೇಕಿರಲಿಲ್ಲ
ತಾಯಿಗೆ ಕೊಡಲು ಅರಿಶಿನ-ಕುಂಕುಮ ಇಲ್ಲ ಅಂದ್ರೆ ಹೇಗೆ ಹಾಲು ಉಕ್ಕಿಸುವ ಪೂಜೆ ಮಾಡಿದ್ರಿ ಎಂದು ವೀಕ್ಷಕರು ಪ್ರಶ್ನೆ ಮಾಡಿದ್ದಾರೆ. ಒಲೆಗೆ ಅರಿಶಿನ-ಕುಂಕುಮ ಹಚ್ಚದೆಯೇ ಹೇಗೆ ಪೂಜೆ ಮಾಡಿದ್ರಿ ಎಂದು ಕೇಳಿದ್ದಾರೆ. ಲಕ್ಷ್ಮೀ ಮತ್ತು ಭಾವನಾ ನಡುವಿನ ಸಂಭಾಷಣೆಯ ಅವಶ್ಯಕತೆ ಇರಲಿಲ್ಲ ಎಂದು ವೀಕ್ಷಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಮತ್ತೊಂದೆಡೆ ಲಕ್ಷ್ಮೀ ಮತ್ತು ಶ್ರೀನಿವಾಸ್‌ಗೆ ಒಂದು ಸೂರು ಕಟ್ಟಿಕೊಳ್ಳಬೇಕು ಅನ್ನೋದು ಆಸೆ. ಅದಕ್ಕಾಗಿಯೇ ಸೀರಿಯಲ್ ಮೊದಲ ಸಂಚಿಕೆಯಿಂದ ಇಬ್ಬರು ಕಷ್ಟಪಡುತ್ತಿದ್ದಾರೆ. ಆದ್ರೆ ಲಕ್ಷ್ಮೀ ಮತ್ತು ಶ್ರೀನಿವಾಸ್ ದಂಪತಿ ಮಕ್ಕಳು ಪ್ರತ್ಯೇಕ ಮನೆ ಮಾಡಿಕೊಳ್ಳೋದು ನೋಡಿದ್ರೆ ಎಲ್ಲಿಯ ಲಕ್ಷ್ಮೀ ನಿವಾಸ ಎಂದು ವೀಕ್ಷಕರು ಕೇಳಿದ್ದಾರೆ.
ಜಿಪುಣ ಸಂತೋಷ್ ಸ್ವಂತ ಮನೆ ಕಟ್ಕೊಂಡು ದೂರವಾಗಿದ್ದಾರೆ. ಇತ್ತ ಉಂಡಾಡಿ ಗುಂಡ ಹರೀಶ್ ಪತ್ನಿಯ ತವರು ಸೇರಿಕೊಂಡಿದ್ದಾನೆ. ತುಂಬು ಕುಟುಂಬದಲ್ಲಿದ್ದ ಭಾವನಾ ಇದೀಗ ಹೊಸ ಮನೆ ಮಾಡಿಕೊಂಡಿದ್ದಾಳೆ. ಇನ್ನು ಜಾನು ದಿಕ್ಕು ದೆಸೆ ಇಲ್ಲದಂತೆ ಸೋದರಮಾವನ ಮನೆಯಲ್ಲಿಯೇ ಕೆಲಸದವಳಾಗಿ ಆಶ್ರಯ ಪಡೆದುಕೊಂಡಿದ್ದಾಳೆ. ಲಕ್ಷ್ಮೀ ಮತ್ತು ಶ್ರೀನಿವಾಸ್ ದಂಪತಿಯ ಹಿರಿಯ ಮಗಳು ಮಿಸ್ಸಿಂಗ್ ಆದ್ರೆ, ವೆಂಕಿ-ಚೆಲುವಿ ಮಾತ್ರ ಪೋಷಕರ ಜೊತೆಯಲ್ಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.