BBK 12: ಧ್ರುವಂತ್‌ಗೆ ಸವಾಲು ಹಾಕಿದ ರಕ್ಷಿತಾ ಶೆಟ್ಟಿ; ನಗೋದಲ್ಲ, ಆಕೆ ಮರಿ ರಾಕ್ಷಸಿ ಎಂದ ಫ್ಯಾನ್ಸ್

Published : Dec 20, 2025, 12:15 PM IST

ಬಿಗ್‌ಬಾಸ್ ಸೀಕ್ರೆಟ್ ರೂಮ್‌ನಲ್ಲಿರುವ ರಕ್ಷಿತಾ ಶೆಟ್ಟಿ ಮತ್ತು ಧ್ರುವಂತ್ ನಡುವೆ ಜಟಾಪಟಿ ನಡೆದಿದೆ. ಮನೆಯೊಳಗೆ ಹೋಗಲು ಧ್ರುವಂತ್ ಒಪ್ಪದಿದ್ದಾಗ, ಸುದೀಪ್ ಮುಂದೆಯೇ ರಕ್ಷಿತಾ ಸವಾಲು ಹಾಕಿದ್ದು, "ನಿಮ್ಮ ನೆಮ್ಮದಿ ನನ್ನ ಕೈಯಲ್ಲಿದೆ" ಎಂದು ಬೆದರಿಸಿದ್ದಾರೆ. 

PREV
15
ಸವಾಲು ಹಾಕಿದ ರಕ್ಷಿತಾ ಶೆಟ್ಟಿ

ಬಿಗ್‌ಬಾಸ್ ಮನೆಯ 11 ಸ್ಪರ್ಧಿಗಳ ಆಟಕ್ಕಿಂತ ಸೀಕ್ರೆಟ್ ರೂಮ್‌ನಲ್ಲಿರುವ ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿಯನ್ನು ನೋಡಲು ವೀಕ್ಷಕರು ಹೆಚ್ಚೆಚ್ಚು ಇಷ್ಟಪಟ್ಟಿದ್ದರು. ಸೋಶಿಯಲ್ ಮೀಡಿಯಾದಲ್ಲಿಯೂ ಇವರಿಬ್ಬರ ನಡುವಿನ ಸಂಭಾಷಣೆ ಟ್ರೋಲ್ ಆಗುತ್ತಿದೆ. ನಾಗವಲ್ಲಿ ಹಾಡಿಗೆ ಇಬ್ಬರ ಸಂಭಾಷಣೆ ಮತ್ತು ವರ್ತನೆಯನ್ನು ಹೋಲಿಕೆ ಮಾಡಲಾಗುತ್ತಿದೆ. ಇದೀಗ ವೀಕೆಂಡ್ ಎಪಿಸೋಡ್‌ನಲ್ಲಿ ಸುದೀಪ್ ಮುಂದೆಯೇ ಧ್ರುವಂತ್‌ಗೆ ರಕ್ಷಿತಾ ಶೆಟ್ಟಿ ಸವಾಲು ಹಾಕಿದ್ದಾರೆ.

25
ರಕ್ಷಿತಾ ಶೆಟ್ಟಿ ಮನವಿ

ಸೀಕ್ರೆಟ್ ರೂಮ್‌ನೊಳಗೆ ಬರುತ್ತಿದ್ದಂತೆ ಧ್ರುವಂತ್ ಜೊತೆಯಲ್ಲಿ ಹೇಗಿರಬೇಕು ಎಂದು ರಕ್ಷಿತಾ ಶೆಟ್ಟಿ ತಲೆ ಹಿಡಿದುಕೊಂಡಿದ್ದರು. ಹಾವು-ಮುಂಗುಸಿಯಂತಿರೊ ಇಬ್ಬರ ನಿರ್ಧಾರ, ಯೋಚನೆ ಸಂಪೂರ್ಣ ತದ್ವಿರುದ್ಧವಾಗಿವೆ. ಇದೀಗ ವೀಕೆಂಡ್ ಸಂಚಿಕೆಯಲ್ಲಿ ಸುದೀಪ್ ಬರುತ್ತಿದ್ದಂತೆ ಸೀಕ್ರೆಟ್ ರೂಮ್‌ನಿಂದ ಹೊರಗೆ ಕಳುಹಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

35
ಧ್ರುವಂತ್‌ಗೆ ಸವಾಲು

ರಕ್ಷಿತಾ ಶೆಟ್ಟಿ ಮನವಿಯನ್ನು ಆಲಿಸಿದ ಸುದೀಪ್, ಇಬ್ಬರು ಒಮ್ಮತದ ನಿರ್ಧಾರ ತೆಗೆದುಕೊಂಡ್ರೆ ಮಾತ್ರ ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಡಬಹುದು ಎಂದು ಹೇಳುತ್ತಾರೆ. ಬಹುಶಃ ಧ್ರುವಂತ್ ಇನ್ನೊಂದಿಷ್ಟು ಸಮಯ ಸೀಕ್ರೆಟ್‌ ರೂಮ್‌ನಲ್ಲಿರುವ ಇಂಗಿತ ವ್ಯಕ್ತಪಡಿಸಿದಂತೆ ಕಾಣಿಸಿದೆ. ಹೀಗಾಗಿ ಧ್ರುವಂತ್‌ ಅವರಿಗೆ ಬೆದರಿಕೆ ರೂಪದಲ್ಲಿ ಮನವೊಲಿಸಲು ರಕ್ಷಿತಾ ಶೆಟ್ಟಿ ಮುಂದಾಗಿದ್ದಾರೆ. ರಕ್ಷಿತಾ ಅವರ ವರ್ತನೆ ನೋಡಿ ಸುದೀಪ್ ಸಹ ನಗಾಡಿದ್ದಾರೆ.

45
ರಕ್ಷಿತಾ ಹೇಳಿದ್ದೇನು?

ನನಗೆ ಇಲ್ಲಿ ನೆಮ್ಮದಿ ಇಲ್ಲದಂತಾಗಿದೆ. ಹಾಗಾಗಿ ಬಿಗ್‌ಬಾಸ್ ಮನೆಯೊಳಗೆ ಹೋಗಲು ಒಪ್ಪಿಕೊಳ್ಳಿ. ಇಲ್ಲವಾದ್ರೆ ನಿಮಗೆ ನೆಮ್ಮದಿಯಾಗಿ ಮಲಗಲು ನಾನು ಖಂಡಿತವಾಗಿ ಬಿಡಲ್ಲ. ಕಾರಣ ನಿಮ್ಮ ನೆಮ್ಮದಿ ನನ್ನ ಕೈಯಲ್ಲುಂಟು ಎಂದು ರಕ್ಷಿತಾ ಶೆಟ್ಟಿ ಹೇಳುತ್ತಾರೆ. ಇದಕ್ಕೆ ನಗುತ್ತಲೇ ಪ್ರತಿಕ್ರಿಯಿಸಿದ ಧ್ರುವಂತ್, ನನ್ನ ನೆಮ್ಮದಿ ನಿನ್ನ ಬಳಿಯಲ್ಲಿ ಹೇಗಿದೆ ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: BBK 12: ಧ್ರುವಂತ್ ನೆಮ್ಮದಿ ನನ್ನ ಕೈಯಲ್ಲುಂಟು: ಸುದೀಪ್ ಮುಂದೆ ಕಣ್ಣೀರಿನ ಕಥೆ ಹೇಳಿಕೊಂಡ ರಕ್ಷಿತಾ ಶೆಟ್ಟಿ

55
ರಕ್ಷಿತಾ ಶೆಟ್ಟಿ ಮರಿ ರಾಕ್ಷಸಿ

ಈ ಪ್ರೋಮೋ ನೋಡಿದ ನೆಟ್ಟಿಗರು, ಧ್ರುವಂತ್‌ ಅವರೇ ಸುಮ್ಮನೇ ನಗೋದಲ್ಲ. ರಕ್ಷಿತಾ ಶೆಟ್ಟಿ ಮರಿ ರಾಕ್ಷಸಿ. ಸುಮ್ಮನೇ ಒಪ್ಪಿಕೊಂಡು ಬಿಗ್‌ಬಾಸ್ ಮನೆಯೊಳಗೆ ಹೋಗಿ. ಇಲ್ಲಾ ಅಂದ್ರೆ ನಿಮ್ಮನ್ನ ಇರಿಟೇಟ್ ಮಾಡಿ ನಿಮ್ಮ ಮೆದುಳಿಗೆ ಕೈ ಹಾಕ್ತಾರೆ ಎಂದು ಕಮೆಂಟ್ ಮಾಡಿದ್ದಾರೆ. ಧ್ರುವಂತ್-ರಕ್ಷಿತಾ ಮನೆಯೊಳಗೆ ಯಾವಾಗ ಹೋಗ್ತಾರೆ ಎಂಬುದರ ಬಗ್ಗೆ ಕುತೂಹಲ ಮನೆ ಮಾಡಿದೆ.

ಇದನ್ನೂ ಓದಿ: BBK 12: ನೋಡಿದ್ದು, ಕೇಳಿದ್ದು ಸುಳ್ಳಾಗಬಹುದು: ಬಿಗ್‌ಬಾಸ್ ಸೀಸನ್ 12ರಲ್ಲಿ ರೋಚಕ ತಿರುವು

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories