- Home
- Entertainment
- TV Talk
- ಲಕ್ಷ್ಮೀ ನಿವಾಸದಲ್ಲಿ ಅಪ್ಪ ಮಗ... ಗಂಧದಗುಡಿಯಲ್ಲಿ ಮಾವ- ಅಳಿಯ...ಯಾವ ಪಾತ್ರ ನಿಮ್ಮ ಫೇವರಿಟ್?
ಲಕ್ಷ್ಮೀ ನಿವಾಸದಲ್ಲಿ ಅಪ್ಪ ಮಗ... ಗಂಧದಗುಡಿಯಲ್ಲಿ ಮಾವ- ಅಳಿಯ...ಯಾವ ಪಾತ್ರ ನಿಮ್ಮ ಫೇವರಿಟ್?
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಅಪ್ಪ ಮಗನಾಗಿ ನಟಿಸಿದ ಭವಿಷ್ ಗೌಡ ಹಾಗೂ ನೀನಾಸಂ ಅಶ್ವಥ್ ಇದೀಗ ಜೀ ಕನ್ನಡ ವಾಹಿನಿ ಬಿಟ್ಟು ಕಲರ್ಸ್ ಕನ್ನಡದ ಗಂಧದ ಗುಡಿ ತಂಡ ಸೇರಿಕೊಂಡಿದ್ದು, ಈ ಧಾರಾವಾಹಿಯಲ್ಲಿ ಮಾವ ಮತ್ತು ಅಳಿಯನಾಗಿ ನಟಿಸುತ್ತಿದ್ದಾರೆ.

ಲಕ್ಷ್ಮೀ ನಿವಾಸ ಧಾರಾವಾಹಿ
ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ ಲಕ್ಷ್ಮೀ ನಿವಾಸದಲ್ಲಿ ವಿಶ್ವನ ಪಾತ್ರದಲ್ಲಿ ಈ ಹಿಂದೆ ಭವಿಷ್ ಗೌಡ ನಟಿಸುತ್ತಿದ್ದರು. ಹಾಗೂ ಅವರ ತಂದೆಯ ಪಾತ್ರದಲ್ಲಿ ನೀನಾಸಂ ಅಶ್ವಥ್ ಅವರು ನಟಿಸಿದ್ದರು. ಆದರೆ ಇಬ್ಬರೂ ಕೂಡ ಈಗ ಸೀರಿಯಲ್ ನಿಂದ ಹೊರ ನಡೆದಿದ್ದಾರೆ.
ಗಂಧದ ಗುಡಿ
ಕಲರ್ಸ್ ಕನ್ನಡದಲ್ಲಿ ಇತ್ತೀಚೆಗಷ್ಟೇ ಆರಂಭವಾದ ಗಂಧದಗುಡಿ ಧಾರಾವಾಹಿಯಲ್ಲಿ ಭವಿಷ್ ಗೌಡ ಹಾಗೂ ನೀನಾಸಂ ಅಶ್ವಥ್ ಮತ್ತೆ ಜೊತೆಯಾಗಿ ನಟಿಸುತ್ತಿದ್ದಾರೆ. ಆದರೆ ಇಲ್ಲಿ ಅಪ್ಪ ಮಗ ಆಗಿ ಅಲ್ಲ, ಅದಕ್ಕೆ ಸರಿ ವಿರುದ್ಧವಾಗಿ ಮಾವ ಮತ್ತು ಅಳಿಯನಾಗಿ ನಟಿಸುತ್ತಿದ್ದಾರೆ.
ಇತ್ತೀಚೆಗೆ ಶುರುವಾದ ಹೊಸ ಧಾರಾವಾಹಿ
ಗಂಧದ ಗುಡಿ ಕಲರ್ಸ್ ಕನ್ನಡದಲ್ಲಿ ಇತ್ತೀಚೆಗೆ ಶುರುವಾಗಿದ್ದು, ಹೆಣ್ಣು ಮಕ್ಕಳು ದಿಕ್ಕೇ ಇರದ ನಾಲ್ಕು ಜನ ಅಣ್ಣ-ತಮ್ಮಂದಿರ ಕಥೆಯಾಗಿದೆ. ಇದರಲ್ಲಿ ಎರಡನೇ ತಮ್ಮನಾಗಿ ಭವಿಷ್ ಗೌಡ ನಟಿಸುತ್ತಿದ್ದಾರೆ. ಇವರು ಕ್ಯಾಬ್ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ನೀನಾಸಂ ಅಶ್ವಥ್
ಗಂಧದಗುಡಿ ಧಾರಾವಾಹಿಯಲ್ಲಿ ನೀನಾಸಂ ಅಶ್ವಥ್ ನಾಯಕಿ ಸಂಜನಾ ಬುರ್ಲಿ ತಂದೆಯಾಗಿ ನಟಿಸುತ್ತಿದ್ದಾರೆ. ಸಂಜನಾ ನಾಯಕಿ ಚಂದನಾ ಆಗಿ ಹಾಗೂ ಭವಿಷ್ ಗೌಡಗೆ ಹೀರೋಯಿನ್ ಆಗಿ ನಟಿಸುತ್ತಿದ್ದಾರೆ. ನೀನಾಸಂ ಮಗಳಿಗೆ ಆದಷ್ಟು ಬೇಗ ಮದುವೆ ಮಾಡಿ ಮುಗಿಸುವ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಕ್ಯಾಬ್ ಡ್ರೈವರ್
ಭವಿಷ್ ಗೌಡ ಅತ್ಯುತ್ತಮ ಗುಣ ಸ್ವಭಾವದ ಕ್ಯಾಬ್ ಡ್ರೈವರ್ ಪಾತ್ರದಲ್ಲಿ ನಟಿಸುತ್ತಿದ್ದು, ಇವನಿಗೆ ಶ್ರೀಮಂತ ಮನೆತನದ, ಎಲ್ಲಾ ಕೆಲಸಕ್ಕೂ ಕೈಗೆ ಕಾಲಿಗೆ ಜನ ಇರುವಂತಹ, ಡಬಲ್ ಡಿಗ್ರಿ ಪಡೆದಂತಹ ಹುಡುಗಿ ಜೊತೆ ಹೇಗೆ ಮದುವೆಯಾಗುತ್ತೆ ಅನ್ನೋದೆ ಕಥೆ.
ಮಗಳ ಮದುವೆ ತಯಾರಿಯಲ್ಲಿ ಅಪ್ಪ
ನೀನಾಸಂ ಅವರು ಮಗಳು ಚಂದನಾ ಮದುವೆ ಮಾಡಲು ಹುಡುಗ ಫಿಕ್ಸ್ ಮಾಡಿದ್ದು, ಹುಡುಗನ ಸ್ವಭಾವ ಚಂದನಾಗೆ ಹಿಡಿಸದೇ ಇದ್ದರೂ ಸಹ, ಅಪ್ಪ ಮದುವೆಯಾಗಲೇಬೇಕು ಎಂದು ಈಗಾಗಲೇ ಎಲ್ಲಾ ರೀತಿಯಲ್ಲಿ ಸಿದ್ಧತೆ ಮಾಡಿ, ಎಂಗೇಜ್ ಮೆಂಟ್ ಡೇಟ್ ಕೂಡ ಫಿಕ್ಸ್ ಮಾಡಿದ್ದಾರೆ. ಮದುವೆಯಾಗೋದಕ್ಕೂ ಮುನ್ನ ಚಂದನಾ ಹೇಗೆ ಗಂಧದಗುಡಿಗೆ ಸೊಸೆಯಾಗಿ ಬರುತ್ತಾಳೆ ಅನ್ನೋದನ್ನು ನೋಡಬೇಕು.