ಜೈಲುಪಾಲಾದ ಮಗ ಜೈದೇವ್‌ಗೆ ಸಹಾಯ ಮಾಡಲು ತಾಯಿ ಶಕುಂತಲಾ ನಿರಾಕರಿಸುತ್ತಾಳೆ. ಆದರೆ, ಸೋದರಮಾವ ಲಕ್ಷ್ಮೀಕಾಂತ್ ಜಾಮೀನು ಕೊಡಿಸಿ, ಬದಲಾಗುವಂತೆ ಬುದ್ಧಿ ಹೇಳಿದರೂ, ಜೈದೇವ್ ತನ್ನ ದ್ವೇಷದ ಹಾದಿಯನ್ನೇ ಮುಂದುವರಿಸುವುದಾಗಿ ಹೇಳುತ್ತಾನೆ.
ಜಗತ್ತಿನಲ್ಲಿ ಯಾರೇ ಕೈಬಿಟ್ರೂ ಮಕ್ಕಳ ಸಹಾಯಕ್ಕೆ ತಾಯಿ ಬರುತ್ತಾಳೆ ಎಂಬ ಮಾತಿದೆ. ಆದ್ರೆ ಈ ಮಾತು ಜೈದೇವ್ ವಿಷಯದಲ್ಲಿ ಸುಳ್ಳು ಆಗಿದೆ. ಈ ಹಿಂದೆ ಜೈದೇವ್ ಮಾಡಿದ ಪಾಪ ಕೆಲಸಗಳಿಗೆ ತಕ್ಕ ಶಿಕ್ಷೆ ಆಗ್ತಿದೆ ಎಂಬುವುದು ಸೀರಿಯಲ್ ವೀಕ್ಷಕರು ಮತ್ತು ಶಕುಂತಲಾಳ ಅಭಿಪ್ರಾಯವಾಗಿದೆ.
25
ಅಳಿಮಯ್ಯನ ಸಹಾಯಕ್ಕೆ ಬಂದ ಸೋದರಮಾವ
ಜೈದೇವ್ ಜೈಲುಪಾಲಾಗಿರೋ ವಿಷಯವನ್ನು ಸೋದರ ಲಕ್ಷ್ಮೀಕಾಂತ್ ಜೊತೆ ಶಕುಂತಲಾ ಹಂಚಿಕೊಂಡಿದ್ದಾಳೆ. ಈ ವಿಷಯ ಕೇಳುತ್ತಿದ್ದಂತೆ ಯಾಕೆ ಜೈದೇವ್ ಸಹಾಯಕ್ಕೆ ಹೋಗಲಿಲ್ಲ ಎಂದು ಲಕ್ಷ್ಮೀಕಾಂತ್ ಪ್ರಶ್ನೆ ಮಾಡಿದ್ದಾಳೆ. ಈಗಾಗಲೇ ಜೈದೇವ್ ಕಷ್ಟದ ಸ್ಥಿತಿಯಲ್ಲಿದ್ದು, ಜೈಲಿನಿಂದ ಹೊರಗೆ ಕರೆದುಕೊಂಡು ಬರಬೇಕಾಗಿತ್ತು ಎಂದು ಸಲಹೆ ನೀಡುತ್ತಾನೆ.
35
ಜೈದೇವ್‌ಗೆ ಸಿಕ್ತು ಜಾಮೀನು
ಆತನ ಸಹಾಯಕ್ಕೆ ಹೋದ್ರೆ ಅದು ನಮ್ಮ ವೀಕ್‌ನೆಸ್ ಎಂದು ಜೈದೇವ್ ತಿಳಿಯುತ್ತಾನೆ. ಮಾಡಿದ ಕರ್ಮಕ್ಕೆ ರಿಟರ್ನ್ ಸಿಗುತ್ತಿದೆ. ಅವನು ನಮ್ಮ ಮಾತನ್ನು ಎಲ್ಲಿ ಕೇಳುತ್ತಾನೆ. ಅವನಿಗೆ ಭಯ ಏನು ಅನ್ನೋದು ಗೊತ್ತಾಗಬೇಕು. ಹಾಗಾಗಿ ನಾನೇ ನಾಲ್ಕು ಏಟು ನೀಡುವಂತೆ ಹೇಳಿದ್ದೇನೆ ಎಂದು ಶಕುಂತಲಾ ಹೇಳಿದ್ದನ್ನು ಕೇಳಿ ಲಕ್ಷ್ಮೀಕಾಂತ್ ಶಾಕ್ ಆಗಿದ್ದಾನೆ. ತಂಗಿ ಮಾತು ಕೇಳಿದ ಕೂಡಲೇ ಲಕ್ಷ್ಮೀಕಾಂತ್ ಅಳಿಯ ಜೈದೇವ್‌ಗೆ ಜಾಮೀನು ಕೊಡಿಸಿದ್ದಾನೆ.
ಆರಂಭದಲ್ಲಿ ಜಾಮೀನು ಸ್ವೀಕರಿಸಲು ಒಪ್ಪದಿದ್ರೂ ನಂತರ ಜೈಲಿನಿಂದ ಹೊರಗೆ ಬರುತ್ತಾನೆ. ಬದಲಾವಣೆ ಜಗದ ನಿಯಮ. ನಾನು ಮತ್ತು ನಿಮ್ಮ ಅಮ್ಮಾ ಸಹ ಬದಲಾದ್ಳು. ಈಗ ನೀನು ಬದಲಾದ್ರೆ ಮಾತ್ರ ನಮ್ಮೊಂದಿಗಿರಲು ಸಾಧ್ಯವಾಗುತ್ತದೆ ಎಂದು ಜೈದೇವ್‌ಗೆ ಮಾವ ಲಕ್ಷ್ಮೀಕಾಂತ್ ಸಲಹೆ ನೀಡುತ್ತಾನೆ. ಆಗ ಜೈದೇವ್ ಹೇಳುವ ಒಂದೊಂದು ಮಾತು ಆತನಲ್ಲಿನ ದ್ವೇಷ ಎಷ್ಟಿದೆ ಎಂಬುದನ್ನು ಹೇಳುತ್ತಿತ್ತು.
ದ್ವೇಷ ಇಟ್ಕೊಂಡು ನಾನು ಹುಟ್ಟಿದ್ದಾ? ಇಲ್ಲ, ನನ್ನನ್ನು ಆ ರೀತಿ ಬೆಳೆಸಿದ್ದು ನೀವೆಲ್ಲಾ. ಈ ಜೈದೇವ್ ಗುರಿ ತಲುಪವರೆಗೂ ನಿಲ್ಲೋವನು ಅಲ್ಲ. ನನ್ನ ಗುರಿಗೆ ನೀನು, ಆ ಗೌತಮ್ ದಿವಾನ್ ಅಥವಾ ಅಮ್ಮಾ ಸಹ ಬಂದ್ರೂ ನಾನು ಸುಮ್ಮನೇ ಬಿಡುವನಲ್ಲ. ಯಾರನ್ನೂ ಸುಮ್ಮನೇ ಬಿಡೋದಿಲ್ಲ ಎಂದು ಹೇಳಿ ಜೈದೇವ್ ಅಲ್ಲಿಂದ ಹೊರಡುತ್ತಾನೆ. ಯಾವ ಮಕ್ಕಳು ಸಹ ಜನ್ಮದಿಂದ ಕೆಟ್ಟವರಾಗಿರಲ್ಲ. ಆದ್ರೆ ಜೈದೇವ್‌ನನ್ನು ಬೆಳೆಸಿದ್ದು, ತಾಯಿ ಶಕುಂತಲಾ ಅಲ್ಲವಾ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.