ಅಮೃತಧಾರೆ ಧಾರಾವಾಹಿಯಲ್ಲಿ, ಜೈಲು ಸೇರಿರುವ ಜೈದೇವ್‌ಗೆ ಜಾಮೀನು ಕೊಡಿಸಲು ಅವನ ಹಳೆ ಶತ್ರು ಶಕುನಿಮಾಮ ಲಕ್ಷ್ಮೀಕಾಂತ್ ಬಂದಿದ್ದಾನೆ. ಈ ಅನಿರೀಕ್ಷಿತ ಬೆಳವಣಿಗೆಯು, ಇದರ ಹಿಂದೆ ಶಕುಂತಲಾ ಅಥವಾ ಗೌತಮ್ ಇರಬಹುದೇ ಎಂಬ ಅನುಮಾನಗಳನ್ನು ಹುಟ್ಟುಹಾಕಿದ್ದು, ಕಥೆಯು ಕುತೂಹಲಕಾರಿ ತಿರುವು ಪಡೆದಿದೆ.
ದಿಯಾ ಬೇಬಿ ನೀಡಿದ ದೂರಿನಿಂದ ಜೈಲು ಸೇರಿರುವ ಜೈದೇವ್‌ಗೆ ಜಾಮೀನು ನೀಡಲು ಶಕುನಿಮಾಮ ಲಕ್ಷ್ಮೀಕಾಂತ್ ಆಗಮಿಸಿದ್ದಾನೆ. ಆರಂಭದಲ್ಲಿ ಲಕ್ಷ್ಮೀಕಾಂತ್ ಸಹಾಯ ತಿರಸ್ಕರಿಸಿದ್ರೂ ಅನಿವಾರ್ಯವಾಗಿ ಜೈದೇವ್ ಒಪ್ಪಿಕೊಳ್ಳುವಂತಾಗಿದೆ. ಜಾಮೀನು ಒಪ್ಪದಿದ್ರೆ ಮತ್ತೆ ಅದೇ ಕತ್ತಲಕೋಣೆ ಮತ್ತು ಪೊಲೀಸರ ಲಾಠಿ ಏಟು ನೆನಪಿಸಿಕೊಂಡು ಜೈದೇವ್ ಸುಮ್ಮನಾಗಿದ್ದಾನೆ.
35
ಲಕ್ಷ್ಮೀಕಾಂತ್ ಬಂದಿದ್ದು ಯಾಕೆ?
ಜೈದೇವ್ ಜೈಲು ಸೇರಿರುವ ವಿಷಯ ಶಕುಂತಲಾಗೆ ತಿಳಿದಿತ್ತು. ಪೊಲೀಸರು ಕಾಲ್ ಮಾಡಿ ವಿಷಯ ತಿಳಿಸಿದ್ರೂ ಜೈದೇವ್ ಯಾರು ಎಂದು ಗೊತ್ತಿಲ್ಲ ಎಂದು ಹೇಳಿದ್ದಳು. ಈಗ ಸೋದರ ಲಕ್ಷ್ಮೀಕಾಂತ್ ಮೂಲಕ ಕೆಡಿ ಮಗನಿಗೆ ಶಕುಂತಲಾ ಜಾಮೀನು ಕೊಡಿಸಿದಳಾ ಎಂಬ ಅನುಮಾನ ವೀಕ್ಷಕರಲ್ಲಿ ಮೂಡಿದೆ. ಮತ್ತೊಂದು ಕಡೆ ಲಕ್ಷ್ಮೀಕಾಂತ್ ಮೂಲಕ ಗೌತಮ್ ಜಾಮೀನು ಕೊಡಿಸಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ.
ಹಳೆ ಪ್ರಕರಣದಲ್ಲಿ ಜೈಲು ಸೇರಿದ್ದ ಲಕ್ಷ್ಮೀಕಾಂತ್‌ನನ್ನು ಗೌತಮ್ ಹೊರಗಡೆ ಕರೆದುಕೊಂಡು ಬಂದಿದ್ದನು. ಈ ಘಟನೆ ಬಳಿಕ ಗೌತಮ್‌ಗೆ ಲಕ್ಷ್ಮೀಕಾಂತ್ ಪ್ರಾಮಾಣಿಕನಾಗಿದ್ದನು. ಜೈದೇವ್ ಮಾಡ್ತಿದ್ದ ಪ್ಲಾನ್‌ಗಳೆಲ್ಲವನ್ನು ಆನಂದ್ ಮತ್ತು ಗೌತಮ್‌ಗೆ ತಿಳಿಸುತ್ತಿದ್ದನು. ಈ ವಿಷಯ ತಿಳಿಯುತ್ತಿದ್ದಂತೆ ಲಕ್ಷ್ಮೀಕಾಂತ್ ಪ್ರಾಣ ತೆಗೆಯಲು ಮುಂದಾಗಿದ್ದನು. ಇದೀಗ ಲಕ್ಷ್ಮೀಕಾಂತ್‌ನಿಂದ ಜೈದೇವ್ ಜೈಲಿನಿಂದ ಹೊರಗೆ ಬರುವಂತಾಗಿದೆ.
ಬದಲಾಗಿರುವ ಶಕುಂತಲಾಳನ್ನು ವೀಕ್ಷಕರು ಮಾತ್ರ ನಂಬುತ್ತಿಲ್ಲ. ಭೂಮಿಕಾಳನ್ನು ಮನೆ ತುಂಬಿಸಿಕೊಂಡಿರುವ ಶಕುಂತಲಾ, ತನ್ನ ಹಿಂದಿನ ವರ್ತನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಳು. ಇಬ್ಬರು ಗಂಡು ಮಕ್ಕಳಲ್ಲಿ ಜೈದೇವ್ ಬೀದಿ ಪಾಲಾದ್ರೆ, ಮತ್ತೋರ್ವ ಮಗ ಪಾರ್ಥನಿಗೆ ಮಕ್ಕಳಾಗಿಲ್ಲ ಎಂಬ ಚಿಂತೆ ಶಕುಂತಲಾಳನ್ನು ಕಾಡುತ್ತಿದೆ. ಒಂದು ವೇಳೆ ಜೈದೇವ್ ಬಂದು ಕ್ಷಮೆ ಕೇಳಿದ್ರೆ ಶಕುಂತಲಾ, ಭೂಮಿಕಾ, ಗೌತಮ್ ಏನ್ ಮಾಡ್ತಾರೆ ಅನ್ನೋದರ ಬಗ್ಗೆ ಕುತೂಹಲ ಮೂಡಿದೆ .
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.