ಪುಟ್ಟಕ್ಕನ ಹರಕೆ ಫಲಿಸಲಿಲ್ಲ, ಜೀವದ ಗೆಳತಿ ಉಳಿಯಲಿಲ್ಲ: ಬಡ್ಡಿ ಬಂಗಾರಮ್ಮ ಇನ್ನಿಲ್ಲ

Published : Nov 07, 2025, 01:12 PM IST

‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ, ಬಿಗ್‌ಬಾಸ್‌ನಿಂದ ಮಂಜು ಭಾಷಿಣಿ ವಾಪಸ್ಸಾದರೂ ಬಂಗಾರಮ್ಮ ಪಾತ್ರವು ಸಾವಿನೊಂದಿಗೆ ಅಂತ್ಯಗೊಂಡಿದೆ. ಈ ಅನಿರೀಕ್ಷಿತ ಬೆಳವಣಿಗೆಯಿಂದ ಕಂಠಿ ತಬ್ಬಲಿಯಾಗಿದ್ದು, ಕಥೆಯು ಎಳೆಯುತ್ತಿರುವುದರಿಂದ ವೀಕ್ಷಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

PREV
15
ಬಂಗಾರಮ್ಮ ಪಾತ್ರ

ಅಪಾಯದಲ್ಲಿ ಸಿಲುಕಿದ್ದ ಸಹನಾಳ ರಕ್ಷಣೆಗೆ ಹೋಗಿದ್ದ ಬಂಗಾರಮ್ಮ ಆಸ್ಪತ್ರೆಯಲ್ಲಿ ಸೇರುವಂತಾಗಿತ್ತು. ಬಂಗಾರಮ್ಮ ಪಾತ್ರದಲ್ಲಿ ಮಂಜು ಭಾಷಿಣಿ ನಟಿಸುತ್ತಿದ್ದರು. ಮಂಜು ಭಾಷಿಣಿ ಬಿಗ್‌ಬಾಸ್ ಶೋಗೆ ಹೋಗಿದ್ದರಿಂದ ಬಂಗಾರಮ್ಮ ಪಾತ್ರ ಕೊನೆ ಮಾಡಲಾಗಿದೆ ಎಂದು ಹೇಳಲಾಗಿತ್ತು. ಆದ್ರೆ ಮೂರನೇ ವಾರಕ್ಕೆ ಮಂಜು ಭಾಷಿಣಿ ಬಿಗ್‌ಬಾಸ್‌ನಿಂದ ಹೊರ ಬಂದಿದ್ದರು. ಹಾಗಾಗಿ ಬಂಗಾರಮ್ಮ ಪಾತ್ರ ಮುಂದುವರಿಯಲಿದೆ ಎಂಬ ಮಾತುಗಳು ಕೇಳಿ ಬಂದಿದ್ದವು.

25
ಫಲಿಸದ ಪುಟ್ಟಕ್ಕಳ ಹರಕೆ

ಈ ಹಿಂದಿನ ಸಂಚಿಕೆಗಳಲ್ಲಿ ಬಂಗಾರಮ್ಮ ಆರೋಗ್ಯದಲ್ಲಿ ಚೇತರಿಕೆ ಕಾಣಿಸುತ್ತಿದೆ ಎಂದು ವೈದ್ಯರು ಹೇಳಿದ್ದರು. ಈ ವಿಷಯ ತಿಳಿಸಲು ಪುಟ್ಟಕ್ಕನ ಬಳಿ ಕಂಠಿ ಓಡೋಡಿ ಬಂದಿದ್ದನು. ಜೀವದ ಗೆಳತಿಗಾಗಿ ಕೈಯನ್ನು ತ್ರಿಶೂಲದ ಮೇಲಿಟ್ಟು ಪುಟ್ಟಕ್ಕ ಹರಕೆ ಕಟ್ಟಿಕೊಂಡಿದ್ದರು. ಕಂಠಿ ಬಂದು ವಿಷಯ ಹೇಳುತ್ತಿದ್ದಂತೆ ಪುಟ್ಟಕ್ಕ ಖುಷಿಯಾಗಿದ್ದಳು.

35
ತಬ್ಬಲಿಯಾದ ಕಂಠಿ

ಬಂಗಾರಮ್ಮ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿರುವ ವಿಷಯ ಕೇಳಿ ಪುಟ್ಟಕ್ಕ, ಸಹನಾ ಸೇರಿದಂತೆ ಎಲ್ಲರೂ ಖುಷಿಯಾಗಿದ್ದರು. ಅಷ್ಟರಲ್ಲಿಯೇ ಅಲ್ಲಿಗೆ ಬಂದ ವಸು ಕಣ್ಣೀರು ಹಾಕುತ್ತಾ, ಅವ್ವ ನಮ್ಮನ್ನು ಬಿಟ್ಟು ಹೋದ್ಲು ಎಂದು ಶಾಕಿಂಗ್ ವಿಷಯ ಹೇಳಿದಳು. ಬಂಗಾರದಂತಹ ಅವ್ವನ ಕಳೆದುಕೊಂಡು ಶ್ರೀಕಂಠೇಶ್ವರ ತಬ್ಬಲಿಯಾಗಿದ್ದಾನೆ.

45
ಪುಟ್ಟಕ್ಕನ ಮಕ್ಕಳು

ದಿನದಿಂದ ದಿನಕ್ಕೆ ಪುಟ್ಟಕ್ಕನ ಮಕ್ಕಳು ಸೀರಿಯಲ್ ತನ್ನ ಜನಪ್ರಿಯತೆಯನ್ನು ಕಳೆದುಕೊಳ್ಳಲಾರಂಭಿಸಿದೆ. ಕಥೆಯನ್ನು ಎಳೆಯುತ್ತಿರೋದು ಸಹ ವೀಕ್ಷಕರ ಬೇಸರಕ್ಕೆ ಕಾರಣವಾಗಿದೆ. ಮತ್ತೊಂದೆಡೆ ಪಾತ್ರಧಾರಿಗಳು ವೈಯಕ್ತಿಕ ಕಾರಣಗಳನ್ನು ನೀಡಿ ಧಾರಾವಾಹಿಯಿಂದ ಹೊರಗೆ ಬರುತ್ತಿದ್ದಾರೆ. ಈ ಹಿಂದೆ ಸ್ನೇಹಾ ಪಾತ್ರಧಾರಿ ಸಂಜನಾ ಹೊರಗೆ ಬಂದಿದ್ದರಿಂದ ಪಾತ್ರದಲ್ಲಿಯೇ ಬದಲಾವಣೆ ತೆಗೆದುಕೊಂಡು ಬರಲಾಗಿತ್ತು.

ಇದನ್ನೂ ಓದಿ: ಫ್ಯಾನ್ಸ್​ಗೆ ಬಿಗ್​ ಶಾಕ್​ ಕೊಟ್ಟ Bigg Boss ಮಂಜು ಭಾಷಿಣಿ: ನಟಿಯ ನಿರ್ಧಾರದಿಂದ ಅಭಿಮಾನಿಗಳಲ್ಲಿ ಬೇಸರ

55
ಉಮಾಶ್ರೀ ನಟನೆಗೆ ಫಿದಾ

ಇಂದು ಬಿಡುಗಡೆಯಾಗಿರುವ ಪ್ರೋಮೋಗೆ ಕಮೆಂಟ್ ಮಾಡಿರುವ ನೆಟ್ಟಿಗರು, ಫಸ್ಟ್ ಸೀರಿಯಲ್ ಕ್ಲೋಸ್ ಮಾಡಿ. ಈ ಕರ್ಮ ನೋಡೋಕೆ ಆಗಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಪುಟ್ಟಕ್ಕ ಪಾತ್ರದಲ್ಲಿ ನಟಿಸುತ್ತಿರುವ ಉಮಾಶ್ರೀ ನಟನೆಗೆ ವೀಕ್ಷಕರು ಫಿದಾ ಆಗಿದ್ದಾರೆ.

ಇದನ್ನೂ ಓದಿ: Bigg Bossನಿಂದ ಮಂಜು ಭಾಷಿಣಿಗೆ ಸಿಕ್ಕ ಸಂಭಾವನೆ ಎಷ್ಟು? ಖರ್ಚಾದದ್ದೆಷ್ಟು? ನಟಿ ರಿವೀಲ್

Read more Photos on
click me!

Recommended Stories