ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಹುದಿನಗಳಿ ರಾಮಾಚಾರಿ ಹಾಗೂ ಯಜಮಾನ ಧಾರಾವಾಹಿಯ ಮಹಾಸಂಗಮ ನಡೆಯುತ್ತಿದೆ. ಅತ್ತ ಜಾನ್ಸಿ-ರಘು ಜೀವನ ಸರಿಯಾಗ್ತಿಲ್ಲ, ಇತ್ತ ರಾಮಾಚಾರಿ ಮತ್ತು ಚಾರು ಕಷ್ಟಗಳು ಮುಗಿಯುತ್ತಲೇ ಇಲ್ಲ. ಎರಡೂ ಧಾರಾವಾಹಿ ಜೊತೆ ಸೇರಿ ವೀಕ್ಷಕರ ತಾಳ್ಮೆಯನ್ನೇ ಪರೀಕ್ಷೆ ಮಾಡುವಂತಿತ್ತು.
25
ಗರ್ಭಿಣಿ ಚಾರು
ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಗರ್ಭಿಣಿಯಾಗಿದ್ದು, ಕಳೆದ 4-5 ತಿಂಗಳಿಂದಲೂ ಗರ್ಭಿಣಿಯಾಗಿರುವ ಎಪಿಸೋಡ್ ಗಳನ್ನೇ ತೋರಿಸುತ್ತಾ ಬಂದಿದ್ದಾರೆ. ಗರ್ಭಿಣಿಯಾಗಿರುವಾಗಲೇ ಇನ್ನೊಂದು ಮದುವೆ ಸೀನ್, ಹೊಡೆದಾಟ, ಬಡಿದಾಟ ಎಲ್ಲವೂ ನಡೆಯುತ್ತಲೇ ಬಂದಿದೆ.
35
ಕೊನೆಗೂ ಚಾರುಗೆ ಡೆಲಿವರಿ
ಹಲವಾರು ಸಮಸ್ಯೆಗಳಿಂದ ನೊಂದು ಬೆಂದ ಚಾರು ಮತ್ತು ರಾಮಾಚಾರಿ, ದೇಗುಲವೊಂದರ ವಠಾರ ತಲುಪಿದ್ದು, ಇದೀಗ ಕೊನೆಗೂ ಚಾರುಗೆ ಅಜ್ಜಿಯೊಬ್ಬರ ಸಹಾಯದಿಂದ ಡೆಲಿವರಿ ಆಗಿದೆ. ಬಾಹಬಲಿಯಂತೆ ಮಗುವನ್ನು ಎತ್ತಿ ತೋರಿಸಿಯೂ ಆಗಿದೆ. ಕೃಷ್ಣನೇ ಮತ್ತೆ ಹುಟ್ಟಿ ಬಂದಿರೋದಾಗಿ ಜನ ಅಂದುಕೊಂಡಿದ್ದೂ ಆಗಿದೆ.
ಇದೆಲ್ಲಾ ನೋಡಿದ ವೀಕ್ಷಕರಿಗೆ ಒಂದು ಪ್ರಶ್ನೆ ತುಂಬಾನೆ ಕಾಡಿದೆ. ಅದೇನೆಂದರೆ… ಈ ಟಿವಿ ಸೀರಿಯಲ್ ಗಳವರು ಧಾರಾವಾಹಿಯಲ್ಲಿ ಅದೆಷ್ಟೇ ಆಗರ್ಭ ಶ್ರೀಮಂತರಾಗಿದ್ದರೂ ಸಹ, ಅವರಿಗೆ ಡೆಲಿವರಿ ಆಗೋದು ಮಾತ್ರ ರಸ್ತೆಯಲ್ಲಿ, ಜನರಿಲ್ಲದ ಊರಲ್ಲಿ, ಕಾಡಲ್ಲಿಯೇ ಯಾಕೆ ಅನ್ನೋದನ್ನು ಪ್ರಶ್ನಿಸಿದ್ದಾರೆ.
55
ಏನು ನಡೆಯುತ್ತೆ ಸೀರಿಯಲ್ ಗಳಲ್ಲಿ?
ಸಾಮಾನ್ಯವಾಗಿ ಸೀರಿಯಲ್ ಗಳಲ್ಲಿ ಹೈಲೈಟ್ ಮಾಡೋದೆ ಗರ್ಭಿಣಿ ಮಹಿಳೆಯನ್ನು. ಹೆಚ್ಚಾಗಿ ಧಾರಾವಾಹಿಗಳಲ್ಲಿ ಮಹಿಳೆಯರನ್ನು ಗರ್ಭಿಣಿ ಎಂದು ಘೋಷಿಸಿ, ಕೊನೆಗೆ ವಿಲನ್ ಗಳ ದ್ವೇಷಕ್ಕೆ ಹುಟ್ಟೋಕ್ಕಿಂತ ಮೊದಲು ಮಗು ಬಲಿಯಗುತ್ತೆ. ಇಲ್ಲ ಹೀಗೇ ಯಾರೂ ದಿಕ್ಕು ಇಲ್ಲದಂತೆ ರೋಡಲ್ಲಿ ಡೆಲಿವರಿ ಆಗೋದು ಕಾಮನ್ ಆಗಿದೆ.