ರಕ್ಷಿತಾ ಶೆಟ್ಟಿಯ 'ನೀರುಳ್ಳಿ' ರಾಗ! ಹಾಡು ಹೇಳುತ್ತಾ ತಾನೇ ಕನ್ಫ್ಯೂಸ್ ಆದ್ರು ಬಿಗ್‌ಬಾಸ್ ಮನೆಯ ಪುಟ್ಟಿ

Published : Nov 07, 2025, 12:17 PM IST

ಬಿಗ್‌ಬಾಸ್ ಮನೆಯಲ್ಲಿ ತನ್ನ ತುಳು-ಹಿಂದಿ ಮಿಶ್ರಿತ ಕನ್ನಡದಿಂದ ಗಮನ ಸೆಳೆಯುತ್ತಿರುವ ರಕ್ಷಿತಾ ಶೆಟ್ಟಿ, ಇದೀಗ ಅಡುಗೆ ಮನೆಯಲ್ಲಿ ಈರುಳ್ಳಿಗಾಗಿ ಹಾಡು ಹಾಡಿದ್ದಾರೆ. 'ನೀರುಳ್ಳಿ, ನೀರುಳ್ಳಿ' ಎಂದು ಹಾಡುವ ಮೂಲಕ ಅವರು ಮನೆಯವರನ್ನು ರಂಜಿಸಿದ್ದಾರೆ.

PREV
15
ರಕ್ಷಿತಾ ಶೆಟ್ಟಿ

ಈ ಬಾರಿಯ ಬಿಗ್‌ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿ ತಮ್ಮ ಮಾತುಗಳಿಂದಲೇ ಜನಪ್ರಿಯತೆ ಪಡೆದುಕೊಳ್ಳುತ್ತಿದ್ದಾರೆ. ತುಳು-ಹಿಂದಿ ಮಿಶ್ರಿತ ಕನ್ನಡ ಮಾತನಾಡುವ ರಕ್ಷಿತಾ ಶೆಟ್ಟಿ ಬಿಗ್‌ಬಾಸ್ ಶೋನ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದ್ದಾರೆ. ಇದೀಗ ನೀರುಳ್ಳಿ ನೀರುಳ್ಳಿ ಎಂದು ಹಾಡು ಹೇಳಿದ್ದಾರೆ.

25
ಅಡುಗೆ

ಅಭಿಷೇಕ್, ರಘು ಮ್ಯೂಟಂಟ್ ಮತ್ತು ರಕ್ಷಿತಾ ಶೆಟ್ಟಿ ಜೊತೆಯಾಗಿ ಅಡುಗೆ ಮಾಡುತ್ತಿರುತ್ತಾರೆ. ಈ ವೇಳೆ ಅಭಿಷೇಕ್, ಅಡುಗೆ ಮಾಡಲು ಈರುಳ್ಳಿ ಬೇಕೆಂದು ಕ್ಯಾಪ್ಟನ್ ಧನುಷ್‌ಗೆ ಕೇಳುತ್ತಾರೆ. ಧನುಷ್ ಬಳಿಯಲ್ಲಿ ಬಂದ ರಕ್ಷಿತಾ ಶೆಟ್ಟಿ, ಬಟರ್‌ಫ್ಲೈ ವೇರ್ ಆರ್ ಯು ಗೋಯಿಂದ ಹಾಡಿನ ಟ್ಯೂನ್‌ನಲ್ಲಿ ನೀರುಳ್ಳಿ, ನೀರುಳ್ಳಿ ಎಂದು ಹೇಳಲು ಆರಂಭಿಸುತ್ತಾರೆ.

35
ನೀರುಳ್ಳಿ ಅಲ್ಲ ಈರುಳ್ಳಿ

ಆಗ ಅಲ್ಲಿದ್ದ ಸೂರಜ್ ಅದು ನೀರುಳ್ಳಿ ಅಲ್ಲ, ಈರುಳ್ಳಿ ಅಂತಾರೆ. ಅಲ್ಲಿ ಬಾಗಿಲು ಬಳಿ ನಿಂತು ಕೇಳಿ, ನಾಲ್ಕು ಕೊಡ್ತಾರೆ ಎಂದು ಹೇಳುತ್ತಾರೆ. ನಮ್ಮ ತುಳು ಭಾಷೆಯಲ್ಲಿ ನೀರುಳ್ಳಿ ಅಂತಾನೇ ಕರೆಯುತ್ತಾರೆ. ಇಷ್ಟಕ್ಕೆ ನಿಲ್ಲದ ರಕ್ಷಿತಾ ಶೆಟ್ಟಿ, ಮತ್ತೆ ಹಾಡು ಹೇಳುತ್ತಾ ನಮಗೆ ಈರುಳ್ಳಿ ಬೇಕೆಂದು ಕ್ಯಾಪ್ಟನ್ ಧನುಷ್‌ ಹೇಳುತ್ತಾರೆ.

ಹಲವು ಬಾರಿ ನೀರುಳ್ಳಿ. ನೀರುಳ್ಳಿ ಎಂದು ಹೇಳಿದ ರಕ್ಷಿತಾಗೆ ಮುಂದೇನು ಹೇಳಬೇಕೆಂದು ತೋಚದೇ ಕನ್ಪ್ಯೂಸ್ ಆಗಿದ್ರು.

45
ಧನುಷ್ ಒಂದು ಕ್ಷಣ ಕನ್ಫ್ಯೂಸ್

ರಕ್ಷಿತಾ ಶೆಟ್ಟಿ ನೀರುಳ್ಳಿ ಅಂತ ಕೇಳಿದಾಗ ಧನುಷ್ ಒಂದು ಕ್ಷಣ ಕನ್ಫ್ಯೂಸ್ ಆಗ್ತಾರೆ. ಅದು ಈರುಳ್ಳಿ ಅಂತಾ ತಿಳಿದಾಗ ಧನುಷ್ ನಗುತ್ತಾರೆ. ರಕ್ಷಿತಾ ಹಾಡು ಹೇಳಿದ ರೀಲ್ಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ರೀಲ್ಸ್ ಕಮೆಂಟ್ ಮಾಡಿರುವ ನೆಟ್ಟಿಗರು, ಮುಗ್ದ ಮನಸ್ಸಿನ ರಕ್ಷಿತಾ, ರಕ್ಷಿತಾ ಅಂದ್ರೆ ಸುಮ್ಮನೆನಾ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: BBK 12: ಗಿಲ್ಲಿ ಅಂದ್ರೆ ಸಿಲ್ಲಿನಾ? ಮುಗಿಬಿದ್ದ ಅಶ್ವಿನಿ ಗೌಡ, ರಿಷಾ, ಧ್ರುವಂತ್? ತಪ್ಪಾಗಿದ್ದು ಯಾರಿಂದ?

55
ಮನೆಯಲ್ಲಿ ಒಂಟಿಯಾಗಿರುವ ರಕ್ಷಿತಾ

ಮನೆಯಲ್ಲಿ ತನ್ನೊಂದಿಗೆ ಯಾರು ಹೆಚ್ಚಾಗಿ ಮಾತನಾಡುತ್ತಿಲ್ಲ ಎಂದು ಚಂದ್ರಪ್ರಭಾ ಮುಂದೆ ರಕ್ಷಿತಾ ಶೆಟ್ಟಿ ಹೇಳಿಕೊಂಡಿದ್ದಾರೆ. ಸಡೆ ವಿಷಯದ ಬಗ್ಗೆ ಚರ್ಚೆ ಬಳಿಕ ಸುಧಿ ನನ್ನೊಂದಿಗೆ ಮಾತನಾಡುತ್ತಿಲ್ಲ. ಅಶ್ವಿನಿ ಗೌಡ, ರಿಷಾ ಸಹ ಮಾತಾಡಲ್ಲ ಎಂದು ರಕ್ಷಿತಾ ಹೇಳಿದ್ದಾರೆ. ಮನೆಯಿಂದ ಹೊರ ಹೋಗಿರುವ ಮಲ್ಲಮ್ಮ ಅವರನ್ನು ನೆನಪು ಮಾಡಿಕೊಂಡು ರಕ್ಷಿತಾ ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ: ರಕ್ಷಿತಾ ಶೆಟ್ಟಿ ಹುಟ್ಟು ಹೋರಾಟಗಾರ್ತಿಯೇ? ಇಲ್ಲಿದೆ ಈ ಟ್ರೆಂಡ್ ಕ್ರಿಯೇಟರ್ ಲೇಡಿ ಲೈಫ್ ಸ್ಟೋರಿ ಸೀಕ್ರೆಟ್!

Read more Photos on
click me!

Recommended Stories