ಶ್ರೀಕಾಂತ್ ಕಾರ್ ಅಪಘಾತ ಪ್ರಕರಣದಲ್ಲಿ ಸಿದ್ದೇಗೌಡರ ಜಾಮೀನು ಅರ್ಜಿ ವಜಾಗೊಂಡಿದೆ. ಆದರೆ, ಅಪಘಾತಕ್ಕೆ ಲಾರಿ ಡಿಕ್ಕಿ ಕಾರಣ ಎಂಬ ಸತ್ಯ ಜವರೇಗೌಡನಿಗೆ ತಿಳಿದಿದ್ದು, ಎಲ್ಲರನ್ನೂ ಆಟವಾಡಿಸುತ್ತಿರುವ ನೀಲುಗೆ ಆತಂಕ ಶುರುವಾಗಿದೆ.
ಶ್ರೀಕಾಂತ್ ಕಾರ್ ಅಪಘಾತ ಪ್ರಕರಣದಲ್ಲಿ ಜೈಲು ಪಾಲಾಗಿರುವ ಸಿದ್ದೇಗೌಡರನ್ನು ಹೊರಗೆ ಕರೆದುಕೊಂಡು ಬರುವ ಮರೀಗೌಡ ಮತ್ತು ಭಾವನಾ ಪ್ರಯತ್ನಕ್ಕೆ ಸೋಲಾಗಿದೆ. ನ್ಯಾಯಾಲಯ ಸಿದ್ದೇಗೌಡನ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
25
ಕಾರ್ ಅಪಘಾತ
ಇಷ್ಟು ದಿನ ಸಿದ್ದೇಗೌಡ್ ಕಾರ್ ಡಿಕ್ಕಿ ಹೊಡೆದಿದ್ದರಿಂದ ಶ್ರೀಕಾಂತ್ ಸಾವು ಆಗಿದೆ ಎಂದು ಎಲ್ಲರೂ ನಂಬಿಕೊಂಡಿದ್ದರು. ಮಗನನ್ನ ಜೈಲಿಗೆ ಹೋಗುವಂತೆ ಮಾಡಿರುವ ಜವರೇಗೌಡರಿಗೂ ಅಪಘಾತದ ಸತ್ಯ ಗೊತ್ತಿಲ್ಲ. ಇದೀಗ ಲಾರಿ ಡಿಕ್ಕಿಯಾದ ನಂತರವೇ ಸಿದ್ದೇಗೌಡರ ಕಾರ್ ಡಿಕ್ಕಿ ಹೊಡೆದಿದೆ ಎಂಬ ಸತ್ಯ ಗೊತ್ತಾಗಿದೆ.
35
ರವಿ ಎಂಟ್ರಿ
ಶ್ರೀಕಾಂತ್ ಕಾರ್‌ಗೆ ಡಿಕ್ಕಿ ಹೊಡೆದ ಲಾರಿ ಯಾವುದು ಮತ್ತು ಚಾಲಕ ಯಾರು ಎಂಬುದನ್ನು ಭಾವನಾ ಪತ್ತೆ ಮಾಡಿದ್ದಾಳೆ. ಆದ್ರೆ ಇನ್ನೇನು ಲಾರಿ ಚಾಲಕ ಮುರಗ ತಗ್ಲಾಕೊಂಡ ಅನ್ನೋವಷ್ಟರಲ್ಲಿ ಆತನನ್ನು ರವಿ ಎತ್ತಾಕೊಂಡು ಹೋಗಿದ್ದಾನೆ. ಹೀಗಾಗಿ ಯಾವುದೇ ಸಾಕ್ಷಿಗಳಿಲ್ಲದೇ ಸಿದ್ದೇಗೌಡರ ಜಾಮೀನು ರದ್ದಾಗಿದೆ.
ಸೊಸೆ ನೀಲು ಹಾಕಿದ ತಾಳಕ್ಕೆ ಕುಣಿಯುತ್ತಿರುವ ಜವರೇಗೌಡನಿಗೂ ಅಪಘಾತದ ಸತ್ಯ ತಿಳಿದಿದೆ. ಇಷ್ಟು ದಿನ ತಮ್ಮಿಂದಲೇ ತಪ್ಪಾಗಿದೆ ಅಂದ್ಕೊಂಡಿದ್ದ ಜವರೇಗೌಡನಿಗೆ ಮಗ ಸಿದ್ದೇಗೌಡ ನಿರಪರಾಧಿ ಅನ್ನೋ ಸತ್ಯ ಗೊತ್ತಾಗಿದೆ. ಎಲ್ಲರನ್ನೂ ಆಟವಾಡಿಸುತ್ತಿರು ನೀಲುಗೆ ಈಗ ಆತಂಕ ಶುರುವಾಗಿದೆ.
ಸೇಫ್ ಆಗಿ ಎಲ್ಲರ ಮುಂದೆ ಒಳ್ಳೆಯವಳಂತೆ ನಟಿಸುತ್ತಿರುವ ನೀಲು ಮುಖವಾಡ ಕಳಚುವ ಸಮಯ ಬಂದಿದೆ ಎಂದು ವೀಕ್ಷಕರು ಕಮೆಂಟ್ ಮಾಡುತ್ತಿದ್ದಾರೆ. ಮುರುಗ ಮತ್ತು ಅಪಘಾತ ಮಾಡಿದ ಲಾರಿ ಸಹ ಮಿಸ್ ಆಗಿದೆ. ಸತ್ಯ ತಿಳಿದ ಜವರೇಗೌಡ ಮುಂದೆ ಏನು ಮಾಡ್ತಾನೆ ಎಂಬುದರ ಬಗ್ಗೆ ಕುತೂಹಲ ಮೂಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.