Karna Nidhi Nitya story: ಕರ್ಣನಿಂದ ನಿಧಿಯನ್ನು ದೂರ ಮಾಡಲು ರಮೇಶ್ ರೂಪಿಸಿದ ಸಂಚು ವಿಫಲವಾಗಿದೆ. ಮನೆ ಕಳೆದುಕೊಂಡ ನಿಧಿಯನ್ನು ಕರ್ಣ ತನ್ನ ಮನೆಗೆ ಕರೆತಂದಿದ್ದು, ಪತ್ನಿ ನಿತ್ಯಾ ಜೊತೆಯಲ್ಲೇ ಮಾಜಿ ಪ್ರೇಯಸಿ ನಿಧಿಯ ಗೃಹಪ್ರವೇಶವೂ ನಡೆದಿದೆ. ಇದು ಕಥೆಯಲ್ಲಿ ಹೊಸ ಕುತೂಹಲಕ್ಕೆ ಕಾರಣವಾಗಿದೆ.
ಜೀ ಕನ್ನಡದಲ್ಲಿ ಪ್ರಸಾರವಾಗುವ ಕರ್ಣ ಸೀರಿಯಲ್ ಪ್ರತಿ ಸಂಚಿಕೆಯಲ್ಲಿಯೂ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ನಿಧಿಯನ್ನು ಪ್ರೀತಿ ಮಾಡಿದ್ದ ಕರ್ಣ ತನ್ನನ್ನು ಸದಾ ದ್ವೇಷಿಸುವ ನಿತ್ಯಾ ಜೊತೆ ಸಪ್ತಪದಿ ತುಳಿದಿದ್ದಾನೆ. ಕರ್ಣನ ಮಾಜಿ ಪ್ರೇಯಸಿ ನಿಧಿ ಆತನ ಮುಂದೆಯೇ ಇರಬೇಕು. ಪ್ರೀತಿ ಕಳೆದುಕೊಂಡ ನೋವು ಪ್ರತಿದಿನ ಕರ್ಣನಿಗೆ ಕಾಡುತ್ತಿರಬೇಕು ಎಂದು ನಿಧಿ ಮನೆಗೆ ರಮೇಶ್ ಬೆಂಕಿ ಹಚ್ಚಿಸಿದ್ದಾನೆ.
25
ರಮೇಶ್‌ನ ನೀಚ ಪ್ಲಾನ್
ಮನೆ ಕಳೆದುಕೊಂಡು ಶಾಂತಜ್ಜಿ ಜೊತೆ ನಿಧಿ ಬೀದಿಗೆ ಬಂದಿದ್ದಾಳೆ. ನಿತ್ಯಾ ನಮ್ಮ ಸೊಸೆ, ಆಕೆಯನ್ನು ನಾವು ಮನೆಗೆ ಕರೆದುಕೊಂಡು ಹೋಗುತ್ತವೆ. ಆದ್ರೆ ನಿಧಿ ಮತ್ತು ಶಾಂತಜ್ಜಿ ಅವರ ಮುಂದಿನ ಕಥೆ ಏನು ಎಂದು ತಾಯಿ ಮುಂದೆ ರಮೇಶ್ ಹೇಳಿದ್ದಾನೆ. ಆಗ ಕರ್ಣ, ಇನ್ಮುಂದೆ ಅವರಿಬ್ಬರು ನಮ್ಮೊಂದಿಗೆ ನಮ್ಮ ಮನೆಯಲ್ಲಿರುತ್ತಾರೆ ಎಂದು ಹೇಳಿದ್ದಾನೆ. ಇಲ್ಲಿಗೆ ರಮೇಶ್‌ನ ಮತ್ತೊಂದು ಪ್ಲಾನ್ ಸಕ್ಸಸ್ ಆಗಿದೆ.
35
ಗೆದ್ದೆ ಎಂಬ ಹೆಮ್ಮೆಯಲ್ಲಿ ರಮೇಶ್
ಎಲ್ಲವೂ ತಾನು ಅಂದುಕೊಂಡಂತೆ ಆಗುತ್ತಿದೆ ಎಂದು ರಮೇಶ್ ಹೆಮ್ಮೆಯಿಂದ ಬೀಗುತ್ತಿದ್ದಾನೆ. ಆದ್ರೆ ನಿತ್ಯಾ ಕೊರಳಿಗೆ ಕರ್ಣ ತಾಳಿ ಕಟ್ಟೇ ಇಲ್ಲ ಎಂಬ ವಿಷಯ ರಮೇಶ್‌ನಿಗೆ ಗೊತ್ತಿಲ್ಲ. ಇನ್ನು ಮಗ-ಸೊಸೆಯನ್ನು ಮನೆ ತುಂಬಿಸಿಕೊಳ್ಳುವ ವೇಳೆ ನಿಧಿ ಪ್ರಜ್ಞೆ ಕಳೆದುಕೊಂಡಿದ್ದಾಳೆ. ಇದರಿಂದ ನಿಧಿಯನ್ನು ಎತ್ತಿಕೊಂಡು ನಿತ್ಯಾ ಜೊತೆ ಕರ್ಣ ಮನೆಯೊಳಗೆ ಬಂದಿದ್ದಾನೆ. ಇಬ್ಬರು ಸೋದರಿಯರು ಕರ್ಣನೊಂದಿಗೆ ಮನೆಯೊಳಗೆ ಬಂದಿದ್ದಾರೆ.
ಇಂದಿನ ಪ್ರೋಮೋ ನೋಡಿದ ವೀಕ್ಷಕರು, ತಾನೊಂದು ಬಗೆದರೆ ದೈವವೊಂದು ಬಗೆಯಿತು ಎಂದು ಹೇಳುತ್ತಿದ್ದಾರೆ. ಕರ್ಣನಿಂದ ನಿಧಿಯನ್ನು ದೂರ ಮಾಡಬೇಕು ಎಂದು ರಮೇಶ್ ಸಂಚು ರೂಪಿಸಿದ್ದನು. ಇದೀಗ ರಮೇಶ್‌ನ ಮುಂದೆಯೇ ಕರ್ಣನೊಂದಿಗೆ ನಿಧಿಯ ಗೃಹಪ್ರವೇಶವಾಗಿರೋದನ್ನು ಕಂಡು ಪ್ರೇಕ್ಷಕರು ಹಿರಿ ಹಿರಿ ಹಿಗ್ಗಿದ್ದಾರೆ.
ಮುಂದೆ ಕರ್ಣ ತನ್ನ ಪ್ರೀತಿಯನ್ನು ಹೇಗೆ ಉಳಿಸಿಕೊಳ್ಳುತ್ತಾನೆ? ಮದುವೆಗೂ ಮುಂಚೆಯೇ ಗರ್ಭಿಣಿಯಾಗಿರುವ ವಿಷಯವನ್ನು ಕರ್ಣನಿಗೆ ನಿತ್ಯಾ ಹೇಳ್ತಾಳಾ? ಹೀಗೆ ಹಲವು ಕುತೂಹಲಗಳನ್ನು ಕರ್ಣ ಧಾರಾವಾಹಿ ಒಳಗೊಂಡಿದೆ. ಮುಂದಿನ ದಿನಗಳಲ್ಲಿ ಸೀರಿಯಲ್ ಮತ್ತಷ್ಟು ರೋಚಕ ತಿರುವು ಪಡೆದುಕೊಳ್ಳಲಿದೆ ಎಂಬುದರ ಸುಳಿವು ಪ್ರೇಕ್ಷಕರಿಗೆ ಸಿಕ್ಕಿದೆ.