'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ಸೈಕೋ ಜಯಂತ್ ಪಾತ್ರದ ಮೂಲಕ ದೀಪಕ್ ಸುಬ್ರಹ್ಮಣ್ಯ ಅದ್ಭುತ ನಟನೆಯಿಂದ ಗಮನ ಸೆಳೆದಿದ್ದಾರೆ. ಆದರೆ, ಈ ಬಾರಿಯ ಜೀ ಕುಟುಂಬ ಪ್ರಶಸ್ತಿ ಸಮಾರಂಭದಲ್ಲಿ ಅವರಿಗೆ ಯಾವುದೇ ಪ್ರಶಸ್ತಿ ಲಭಿಸದಿರುವುದು ಅಭಿಮಾನಿಗಳಲ್ಲಿ ತೀವ್ರ ನಿರಾಸೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.
ಲಕ್ಷ್ಮೀ ನಿವಾಸ (Lakshmi Nivasa) ಸೀರಿಯಲ್ನಲ್ಲಿ ಬೇರೆ ಬೇರೆ ಕಥೆಗಳು ಇದ್ದರೂ, ಈ ಸೀರಿಯಲ್ನ ಹೆಸರು ಹೇಳಿದಾಕ್ಷಣ ಸೀರಿಯಲ್ ಪ್ರೇಮಿಗಳ ಕಣ್ಣಿಗೆ ಮೊದಲು ಬರುವುದೇ ಸೈಕೋ ಜಯಂತ್. ನನ್ನ ಗಂಡ ನನ್ನನ್ನು ತುಂಬಾ ಪ್ರೀತಿಸಬೇಕು ಅಂದುಕೊಳ್ಳುವ ಹೆಣ್ಣುಮಕ್ಕಳೆಲ್ಲಾ ಬೆಚ್ಚಿಬಿದ್ದು, ದೇವರೇ ನನ್ನ ಗಂಡ ಪ್ರೀತಿಸದಿದ್ದರೂ ಪರವಾಗಿಲ್ಲ, ಇಂಥ ಗಂಡ ಬೇಡಪ್ಪಾ ಎಂದು ಬೇಡಿಕೊಳ್ಳುವ ಹಾಗೆ ಮಾಡ್ತಿರೋದು ಜಯಂತ್!
27
ಪತ್ನಿಗಾಗಿ ಪರಿತಪಿಸೋ ಸೈಕೋ
ಈಗ ಆತನ ವಿಪರೀತ ಸೈಕಿಕ್ ಪ್ರೀತಿಯನ್ನು ತಡೆದುಕೊಳ್ಳಲಾಗದೇ ಪತ್ನಿ ಜಾಹ್ನವಿ ತಲೆಮರೆಸಿಕೊಂಡಿದ್ದಾಳೆ. ಪತ್ನಿಗಾಗಿ ಜಯಂತ್ ಪರಿತಪಿಸುತ್ತಿರುವ ರೀತಿ ನೋಡಿದ ಎಂಥ ವೀಕ್ಷಕರಿಗೂ ಕಣ್ಣಲ್ಲಿ ನೀರು ಬರುವುದು ಇದೆ. ಅಬ್ಬಬ್ಬಾ ಅದೆಂಥ ನಟನೆ, ಅದೆಂಥ ನಟನೆ ಎಂದು ಎಲ್ಲರೂ ಹೇಳಿಕೊಳ್ಳುವಂಥ ಅತ್ಯದ್ಭುತ ನಟನೆ ಮಾಡ್ತಿರೋದು ನಟ ದೀಪಕ್ ಸುಬ್ರಹ್ಮಣ್ಯ (Deepak Subrahmanya).
37
ಸೈಕೋ ಜಯಂತ್
ಇವರ ನಟನೆಯ ಪ್ರೊಮೋ ಬಂದರೆ, ಸರ್ ನಿಮ್ಮ ನಟನೆಯ ವಿಡಿಯೋ ಪುನಃ ಪುನಃ ನೋಡ್ತೇವೆ, ಅದೆಂಥ ಭಾವನೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹೇಳುವ ದೊಡ್ಡ ವರ್ಗವೇ ಇದೆ. ಅದರಲ್ಲಿಯೂ ಪತ್ನಿ ಹತ್ತಿರದಲ್ಲಿ ಇದ್ದಾಗ ಆಕೆಯ ಮೇಲೆ ತೋರಿಸ್ತಿದ್ದ ಕಾಳಜಿ, ಈಗ ಆಕೆ ದೂರವಾದ ಮೇಲೆ ಅವಳು ಬದುಕಿದ್ದಾಳೆ ಎಂದು ಅವಳಿಗಾಗಿ ಪರಿತಪಿಸುವ ಪರಿ ಎಂಥವರದ್ದೂ ಮಂತ್ರಮುಗ್ಧರನ್ನಾಗಿಸುತ್ತದೆ.
ಇಂಥ ನಟ ದೀಪಕ್ ಅವರಿಗೆ ಈ ಬಾರಿಯ ಜೀ ಕುಟುಂಬ ಅವಾರ್ಡ್ಸ್ (Zee Kutumba Awards 2025) ಒಂದೇ ಒಂದು ಪ್ರಶಸ್ತಿ ಸಿಗದೇ ಇರುವುದು ಅವರ ಅಭಿಮಾನಿಗಳನ್ನು ಕೆರಳಿಸಿದೆ. ಈ ಬಾರಿ ಹಲವಾರು ಪ್ರಶಸ್ತಿಗಳನ್ನು ಹಲವು ನಟರಿಗೆ ನೀಡಲಾಗಿದೆ. ಕೆಲವರಿಗೆ 2-3 ಪ್ರಶಸ್ತಿಗಳೂ ಸಿಕ್ಕಿರುವಾಗ, ಜಯಂತ್ಗೆ ಒಂದೇ ಒಂದು ಪ್ರಶಸ್ತಿ ಯಾಕೆ ಕೊಟ್ಟಿಲ್ಲ ಎಂದು ಟೀಕೆಗಳ ಮಹಾಪೂರವೇ ಹರಿದುಬಂದಿದೆ.
57
ಕಳೆದ ವರ್ಷ ಅವಾರ್ಡ್
ಅಂದಹಾಗೆ, ದೀಪಕ್ ಸುಬ್ರಹ್ಮಣ್ಯ ಅವರಿಗೆ ಕಳೆದ ವರ್ಷ ಅಂದರೆ 2024ರಲ್ಲಿ ಬೆಸ್ಟ್ ನಟ ಅವಾರ್ಡ್ ಸಿಕ್ಕಿತ್ತು. ಅದಕ್ಕೂ ಮೊದಲು ಜಯಂತ್ಗಿಂತಲೂ ಸಂಪೂರ್ಣ ವಿಭಿನ್ನ ಪಾತ್ರದಲ್ಲಿ ಕಲರ್ಸ್ ಕನ್ನಡದಲ್ಲಿ ಕಾಣಿಸಿಕೊಂಡಿದ್ದ ದಾಸ ಪುರಂದರ ಪೌರಾಣಿಕ ಸೀರಿಯಲ್ನ ಶ್ರೀನಿವಾಸ ನಾಯಕ ಸೀರಿಯಲ್ಗೆ ಈ ವಾಹಿನಿಯ ಅನುಬಂಧ ಅವಾರ್ಡ್ ಕೂಡ ಸಿಕ್ಕಿದೆ. ಆದರೆ ಕಳೆದ ವರ್ಷ ಜೀ ಅವಾರ್ಡ್ ಸಿಕ್ಕ ಕೆಲವರಿಗೆ ಈ ವರ್ಷವೂ ಸಿಕ್ಕಿರುವಾಗ, ಇಂಥ ಅದ್ಭುತ ನಟನಿಗೆ ಏಕೆ ಸಿಕ್ಕಿಲ್ಲ ಎಂದು ಭಾರಿ ಗರಂ ಆಗಿದ್ದಾರೆ ವೀಕ್ಷಕರು.
67
ಇದೇ ಪ್ರಶ್ನೆ ಕೇಳ್ತಿರೋ ಫ್ಯಾನ್ಸ್
ಲಕ್ಷ್ಮೀ ನಿವಾಸ ಸೀರಿಯಲ್ ಪ್ರೊಮೋಗಳಲ್ಲಿ, ಪದೇ ಪದೇ ಇದೇ ಪ್ರಶ್ನೆಯನ್ನು ಕೇಳಲಾಗುತ್ತಿದೆ. ನಮಗೆ ಉತ್ತರ ಬೇಕಿದೆ. ಇವರಿಗೆ ಯಾಕೆ ಸಿಕ್ಕಿಲ್ಲ ಎನ್ನುವುದೊಂದೇ ಪ್ರಶ್ನೆಗಳನ್ನು ಅಭಿಮಾನಿಗಳು ಇಡುತ್ತಿದ್ದಾರೆ.
77
ಮಿಸ್ಟರ್ ರಾಣಿಯಾಗಿ...
ಈಚೆಗಷ್ಟೇ ಇವರು ಮಿಸ್ಟರ್ ರಾಣಿ ಸಿನಿಮಾದಲ್ಲಿ ಹೆಣ್ಣಿನ ವೇಷದಲ್ಲಿ ಕಾಣಿಸಿಕೊಂಡು ಮೋಡಿ ಮಾಡಿದ್ದಾರೆ. ಇವರು ಪುರುಷ ಎಂದು ತಿಳಿಯದಷ್ಟು ಮಟ್ಟಿಗೆ ಈ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಎಷ್ಟೋ ಗಂಡಸರು ಕಿರುಕುಳ ಕೊಟ್ಟಿದ್ದನ್ನೂ ಹೇಳಿಕೊಂಡಿದ್ದರು ದೀಪಕ್.