Sharade Serial: ಶಾರದೆ ಧಾರಾವಾಹಿಯಿಂದ ಏಕಕಾಲಕ್ಕೆ ಹೊರಬಿದ್ದ ನಟ, ನಟಿ! ಕಾರಣ ಏನು?

Published : Oct 22, 2025, 07:58 PM ISTUpdated : Oct 22, 2025, 08:00 PM IST

ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಶಾರದೆ ಧಾರಾವಾಹಿಯಿಂದ ಏಕಕಾಲಕ್ಕೆ ನಟ, ನಟಿ ಇಬ್ಬೂ ಹೊರಗಡೆ ಬಂದಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್‌ ಹಂಚಿಕೊಂಡು ಮಾಹಿತಿ ನೀಡಿದ್ದಾರೆ. 

PREV
15
ಆ ನಟ, ನಟಿ ಯಾರು?

ಶಾರದೆ ಧಾರಾವಾಹಿಯಿಂದ ನಟ ರಾಜೇಶ್‌ ಧ್ರುವ, ರಾಧಿಕಾ ರಾವ್‌ ಅವರು ಹೊರಗಡೆ ಬಂದಿದ್ದಾರೆ. 

25
ರಾಜೇಶ್‌ ಧ್ರುವ ಹೇಳಿದ್ದೇನು?

“ಪ್ರತಿಯೊಂದು ಪ್ರಯಾಣವು ಸುಂದರ ವಿದಾಯವನ್ನು ಹೊಂದಿದೆ, ನೆನಪುಗಳಿಂದ ತುಂಬಿದ ಹೃದಯವನ್ನು ಹೊಂದಿದೆ. ಪ್ರೀತಿ, ನಗು ಮತ್ತು ಭಾವನೆಗಳ 233 ಕಂತುಗಳು ಪೂರೈಸಿತ್ತು. ಇಂದು ಶಾರದೆ ಧಾರಾವಾಹಿಯಿಂದ ನರಸಿಂಹ ಮತ್ತು ಶೋಭಾ ಸೈನ್‌ ಆಫ್‌ ಮಾಡುತ್ತಿದ್ದಾರೆ” ಎಂದು ರಾಜೇಶ್‌ ಧ್ರುವ ಹೇಳಿದ್ದಾರೆ.

35
ಈ ಸುಂದರ ಅಧ್ಯಾಯ

“ಸುವರ್ಣ ವಾಹಿನಿಗೆ ತಂಡಕ್ಕೆ ಧನ್ಯವಾದಗಳು. ನಿಮ್ಮ ಪ್ರೀತಿಯೇ - ನಮ್ಮ ಶಕ್ತಿ, ಈ ಸುಂದರ ಅಧ್ಯಾಯಕ್ಕೆ ಸದಾ ಚಿರಋಣಿ” ಎಂದು ಅವರು ಹೇಳಿದ್ದಾರೆ.

45
ಗಂಡ-ಹೆಂಡತಿ ಪಾತ್ರ

ರಾಜೇಶ್‌ ಧ್ರುವ ಅವರು ನರಸಿಂಹನಾಗಿ, ರಾಧೆ ರಾವ್‌ ಅವರು ಶೋಭಾ ಪಾತ್ರವನ್ನು ಮಾಡುತ್ತಿದ್ದರು. ಇವೆರಡು ಗಂಡ-ಹೆಂಡತಿ ಪಾತ್ರವಾಗಿತ್ತು.

55
ಕಾರಣ ಏನು?

ಯಾಕೆ ಧಾರಾವಾಹಿಯಿಂದ ಹೊರಗಡೆ ಬಂದೆವು ಎಂದು ರಾಜೇಶ್‌ ಆಗಲೀ, ಶೋಭಾ ಆಗಲೀ ಯಾವುದೇ ಮಾಹಿತಿಯನ್ನು ನೀಡಿಲ್ಲ. ಇವರಿಬ್ಬರು ಬೇರೆ ಪ್ರಾಜೆಕ್ಟ್‌ಗಳನ್ನು ಮಾಡುತ್ತಿದ್ದಾರಾ? ಇಲ್ಲವಾ ಎಂದು ಕೂಡ ಗೊತ್ತಿಲ್ಲ. ಅಂದಹಾಗೆ ರಾಜೇಶ್‌ ಧ್ರುವ ಅವರು ಸಿನಿಮಾಗಳಲ್ಲಿ ಕೂಡ ನಟಿಸುತ್ತಿದ್ದಾರೆ.

Read more Photos on
click me!

Recommended Stories