ಜೀ ಕನ್ನಡದ ಕರ್ಣ ಧಾರಾವಾಹಿಯಲ್ಲಿ ಅನಿರೀಕ್ಷಿತ ತಿರುವು ಎದುರಾಗಿದ್ದು, ಕರ್ಣ ತನ್ನ ಪ್ರೀತಿಯನ್ನು ತ್ಯಾಗ ಮಾಡಿ ನಿತ್ಯಾಳನ್ನು ಮದುವೆಯಾಗುವ ಪರಿಸ್ಥಿತಿ ಬಂದಿದೆ. ಆದರೆ, ನಿತ್ಯಾ ತಾನೇ ತಾಳಿ ಕಟ್ಟಿಕೊಳ್ಳುವ ಮೂಲಕ ಕಥೆಗೆ ಹೊಸ ರೂಪ ನೀಡಲಾಗಿದೆ.
ಜೀ ಕನ್ನಡದ ಕರ್ಣ ಸೀರಿಯಲ್ ರೋಚಕ ತಿರವು ಪಡೆದುಕೊಂಡಿದೆ. ಮದುವೆಯೇ ಬೇಡ ಅಂತಿದ್ದ ಕರ್ಣನ ಹೃದಯದಲ್ಲಿ ಪ್ರೀತಿ ಹೂ ಅರಳುತ್ತಿರುವಾಗಲೇ ವಿಧಿಯಾಟ ಎಲ್ಲವನ್ನು ಬದಲಿಸಿದೆ. ಮದುವೆ ಮಂಟಪದಿಂದ ತೇಜಸ್ ಪಲಾಯನ ಮಾಡಿದ್ದರಿಂದ ನಿತ್ಯಾಳನ್ನು ಮದುವೆಯಾಗುವಂತೆ ಕರ್ಣನಿಗೆ ಅಜ್ಜಿ ಹೇಳುತ್ತಾರೆ.
25
ಕರ್ಣ ಮತ್ತು ನಿತ್ಯಾ ನಡುವೆ ನಡೆದ ಒಪ್ಪಂದ
ಅಜ್ಜಿ ಮಾತಿನಂತೆ ತನ್ನ ಪ್ರೀತಿಯನ್ನು ತ್ಯಾಗ ಮಾಡಿ ನಿತ್ಯಾಳನ್ನು ಮದುವೆಯಾಗುತ್ತಿರುವ ಪ್ರೋಮೋ ತೋರಿಸಲಾಗಿತ್ತು. ಆದ್ರೆ ಇಂದಿನ ಪ್ರೋಮೋದಲ್ಲಿ ನಾಲ್ಕು ಗೋಡೆ ನಡುವೆ ಕರ್ಣ ಮತ್ತು ನಿತ್ಯಾ ನಡುವೆ ನಡೆದ ಒಪ್ಪಂದವನ್ನು ತೋರಿಸಲಾಗಿದೆ. ತಾಳಿ ಹಿಡಿದು ನಿತ್ಯಾ ಕೋಣೆಗೆ ಹೋಗುವ ಕರ್ಣ, ತಾನೂ ಯಾರಿಗೂ ಮೋಸ ಮಾಡಲಾರೆ ಎಂದು ಹೇಳುತ್ತಾನೆ.
35
ನಿಧಿ ಹುಚ್ಚಿಯಾಗಿ ಕಣ್ಣೀರು
ಅಜ್ಜಿಯ ಮಾತು ತಪ್ಪದ ಕರ್ಣ ತನ್ನ ಭಾವನೆಗಳನ್ನು ನಿತ್ಯಾಳೊಂದಿಗೆ ಹಂಚಿಕೊಂಡಿದ್ದಾನೆ. ಅಂತಿಮವಾಗಿ ತಾನೇ ಕೊರಳಿಗೆ ತಾಳಿ ಕಟ್ಟಿಕೊಂಡ ನಿತ್ಯಾ ಹೊರಗೆ ಬಂದಿದ್ದಾಳೆ. ಇತ್ತ ಅಕ್ಕನ ಜೊತೆಯಲ್ಲಿ ತನ್ನ ಪ್ರಿಯಕರನ ಮದುವೆಯಾಗಿರುವ ವಿಷಯ ತಿಳಿದು ನಿಧಿ ಹುಚ್ಚಿಯಾಗಿ ಕಣ್ಣೀರು ಹಾಕಿದ್ದಾಳೆ.
ಮತ್ತೊಂದೆಡೆ ಸಪ್ತಪದಿ ತುಳಿಯುವಾಗಲೇ ನಿತ್ಯಾ ಗರ್ಭಿಣಿ ಅನ್ನೋ ವಿಷಯ ಡಾಕ್ಟರ್ ಕರ್ಣನಿಗೆ ಗೊತ್ತಾಗಿದೆ. ನಿತ್ಯಾ ಜೊತೆ ಕರ್ಣ ಸಪ್ತಪದಿ ತುಳಿದಿರೋದನ್ನು ನೋಡಿ ಶಾಂತಿ ಅಜ್ಜಿ ಖುಷಿಯಾಗಿದ್ದಾರೆ. ಗೆಳತಿಯ ಮನೆಗೆ ಮೊಮ್ಮಗಳು ಹೋಗುತ್ತಿರೋದಕ್ಕೆ ಶಾಂತಿ ಖುಷಿಯಾಗಿದ್ದಾರೆ.
ಇಂದಿನ ಪ್ರೋಮೋ ನೋಡಿದ ವೀಕ್ಷಕರು, ಇಲ್ಲಿ ಯಾರಿಗೂ ಮೋಸ ಆಗಿಲ್ಲ. ನಿರ್ದೇಶಕರು ಕಥೆಯನ್ನು ಸರಿಯಾಗಿ ತೆಗೆದುಕೊಂಡು ಹೋಗುತ್ತಿದ್ದಾರೆ. ಆದ್ರೆ ಈ ಸತ್ಯ ಆದಷ್ಟು ಬೇಗ ನಿಧಿಗೆ ಗೊತ್ತಾಗುವಂತೆ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.