ಸತ್ಯಶೋಧಕ್ಕೆ ಮುಂದಾದ ಡಾಕ್ಟರ್ ಕರ್ಣ ಈಗ ಡಿಟೆಕ್ಟಿವ್; ಅಪಘಾತ ಜನ್ಮರಹಸ್ಯ ಬಯಲಾಗುತ್ತಾ?

Published : Jul 08, 2026, 08:35 AM IST

ಕರ್ಣ ಸೀರಿಯಲ್‌ನಲ್ಲಿ ಡಾಕ್ಟರ್ ಕರ್ಣ ಈಗ ಡಿಟೆಕ್ಟಿವ್ ಆಗಿ ಬದಲಾಗಿದ್ದಾರೆ. ಪತ್ನಿ ನಿಧಿಯ ತಂದೆ-ತಾಯಿಯ ಸಾವು ಅಪಘಾತವಲ್ಲ, ಕೊಲೆ ಎಂದು ತಿಳಿದು, ಹಳೆಯ ಕ್ಯಾಮೆರಾದ ಸಹಾಯದಿಂದ ಸತ್ಯಶೋಧಕ್ಕೆ ಮುಂದಾಗಿದ್ದಾರೆ. ಈ ತನಿಖೆಯು ಕರ್ಣನ ಜನ್ಮರಹಸ್ಯವನ್ನೂ ಬಯಲು ಮಾಡುವ ಹಾದಿಯಲ್ಲಿದೆ.

PREV
15
ಡಾಕ್ಟರ್ ಕರ್ಣ ಈಗ ಡಿಟೆಕ್ಟಿವ್

ಡಾಕ್ಟರ್ ಕರ್ಣ ಈಗ ಡಿಟೆಕ್ಟಿವ್ ಆದ್ರು; ಅಪಘಾತ, ಜನ್ಮರಹಸ್ಯ ಬಯಲಾಗುತ್ತಾ?

ಕರ್ಣ ಸೀರಿಯಲ್‌ ರೋಚಕ ತಿರುವು ಪಡೆದುಕೊಳ್ಳುತ್ತಿದ್ದು, ಡಾಕ್ಟರ್ ಕರ್ಣ ಇದೀಗ ಡಿಟೆಕ್ಟಿವ್ ಆಗಿ ಬದಲಾಗಿದ್ದಾರೆ. ಶಾಂತಿ ಅಜ್ಜಿ ತಂದುಕೊಟ್ಟ ಕ್ಯಾಮೆರಾ ಹಿಡಿದು ಹೋಗಿರುವ ಕರ್ಣನಿಗೆ ಅಚ್ಚರಿ ಸತ್ಯಗಳು ಕಣ್ಮುಂದೆ ಬಂದಿದೆ. ಸತ್ಯಶೋಧಕ್ಕೆ ಮುಂದಾಗಿರುವ ಕರ್ಣ, ಪತ್ನಿ ನಿಧಿ ತಂದೆ-ತಾಯಿ ಸಾವಿರ ರಹಸ್ಯ ಹುಡುಕಲು ಹೊರಟಿದ್ದಾನೆ.

25
ಹಳೆಯ ಕ್ಯಾಮೆರಾ

ಈ ಹಿಂದೆ ಮಾರಿಗುಡಿಗೆ ಹೋದಾಗ ನಿಧಿಗೆ ಹಳೆಯ ಕ್ಯಾಮೆರಾವೊಂದು ಸಿಕ್ಕಿತ್ತು. ಇದೀಗ ಕ್ಯಾಮೆರಾದಲ್ಲಿನ ಕೆಲ ಫೋಟೋಗಳು ಕರ್ಣನ ಕೈ ಸೇರಿವೆ. ಈ ಫೋಟೋದಲ್ಲಿ ಮಾರಿಗುಡಿಯಲ್ಲಿದ್ದ ಚೆನ್ನಯ್ಯ ಮತ್ತು ತನ್ನ ತಂದೆ ರಮೇಶ್ ವಶಿಷ್ಠ ಇರೋದನ್ನು ನೋಡಿ ಕರ್ಣ ಗೊಂದಲಕ್ಕೆ ಸಿಲುಕಿದ್ದಾನೆ. ಮತ್ತೊಂದು ಫೋಟೋದಲ್ಲಿ ಮಹಿಳೆಯೊಬ್ಬರ ಫೋಟೋ ಸಹ ತೀವ್ರ ಕುತೂಹಲ ಮೂಡಿಸಿದೆ.

35
ನಿಧಿ ತಂದೆ-ತಾಯಿ ಸಾವಿನ ರಹಸ್ಯ

ನಿಧಿ ತಂದೆ-ತಾಯಿ ಸಾವು ಅಪಘಾತವಲ್ಲ, ಅದೊಂದು ಕೊ*ಲೆ ಎಂಬ ವಿಷಯ ಕರ್ಣನಿಗೆ ಗೊತ್ತಾಗಿದೆ. ಈ ಸಾವುಗಳಿಗೆ ಕಾರಣ ಎಂದು ಹುಡುಕಲು ಹೊರಟನಿಗೆ ಆತನ ಜನ್ಮರಹಸ್ಯ ಗೊತ್ತಾಗೋದು ಪಕ್ಕಾ ಆಗಿದೆ. ಇಷ್ಟು ದಿನ ಹಣಕ್ಕಾಗಿ ಪೀಡಿಸುತ್ತಿರುವ ಮಹಿಳೆಯೇ ಕರ್ಣನ ತಾಯಿಯಾಗಿದ್ದು, ಈ ಸತ್ಯವೂ ಬಹಿರಂಗಗೊಳ್ಳಬೇಕಿದೆ.

45
ತಾಯಿಯಿಂದ ಬೇರ್ಪಟ್ಟು ಕರ್ಣ ಕಸದ ತೊಟ್ಟಿ ಸೇರಿದ್ದೇಗೆ ?

ಈ ಎಲ್ಲಾ ವಿಷಯ ಗೊತ್ತಿರೋ ತಾರಾ ಮಾತ್ರ ತನ್ನದೇ ಸಂಚು ಮಾಡಿಕೊಂಡು ಅಣ್ಣ ರಮೇಶ್‌ನಿಗೆ ಕಾಟ ಕೊಡುತ್ತಿದ್ದಾಳೆ. ರಮೇಶ್‌ನಿಗೆ ಕರ್ಣ ತನ್ನ ಸ್ವಂತ ಮಗ ಎಂಬ ಸತ್ಯ ತಿಳಿಯದೇ ಆತನ ವಿರುದ್ಧ ದ್ವೇಷ ಸಾಧಿಸುತ್ತಿದ್ದಾನೆ. ತಾಯಿಯಿಂದ ಬೇರ್ಪಟ್ಟು ಕರ್ಣ ಕಸದ ತೊಟ್ಟಿ ಸೇರಿದ್ದೇಗೆ ಎಂಬ ಸತ್ಯ ಗೊತ್ತಿರೋದ ತಾರಾಗೆ ಮಾತ್ರ ಗೊತ್ತಿದೆ.

55
ಅಣ್ಣ ರಮೇಶ್‌ ವಿರುದ್ಧ ತಾರಾ ಸಂಚು

ಸ್ವಂತ ಅಣ್ಣ ರಮೇಶ್‌ ವಿರುದ್ಧ ತಾರಾ ಸಂಚು ಮಾಡುತ್ತಿರೋದೇಕೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಈ ಎಲ್ಲಾ ಕಥೆ ನಡುವೆ ನಿತ್ಯಾ ಮಾತ್ರ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಮುಂದೆ ನಿತ್ಯಾ ಆಗಮನ ಮತ್ಯಾವ ಹೊಸ ತಿರುವು ಪಡೆದುಕೊಳ್ಳುತ್ತೆ ಎಂಬುದರ ಬಗ್ಗೆ ಕುತೂಹಲ ಮೂಡಿಸಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories