Karna Serial ಅನಿರೀಕ್ಷಿತ ತಿರುವು: ಗಂಡನಿಗೆ ಮಾಲತಿ ಕಪಾಳಮೋಕ್ಷ- ಕಮೆಂಟಿಗರ ರಿಪ್ಲೈಗೆ ಗಂಡಸರು ಶಾಕ್​​

Published : Jul 07, 2026, 09:07 PM IST

ಕರ್ಣ ಸೀರಿಯಲ್‌ನಲ್ಲಿ ಪತ್ನಿ ಮಾಲತಿ ಮೇಲೆ ನಿರಂತರ ದೌರ್ಜನ್ಯ ಎಸಗುತ್ತಿದ್ದ ಪತಿ ರಮೇಶ್‌ಗೆ ಕಪಾಳ ಮೋಕ್ಷವಾಗಿದೆ. ಸೊಸೆ ನಿಧಿಯ ಬೆಂಬಲದಿಂದ, ಮಾಲತಿ ತನ್ನ ಮೇಲೆ ಕೈ ಮಾಡಲು ಬಂದ ಪತಿಗೆ ತಿರುಗಿ ಹೊಡೆದಿದ್ದು, ಈ ಘಟನೆಗೆ ವೀಕ್ಷಕರಿಂದ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

PREV
16
ಸೀರಿಯಲ್‌ಗೂ-ನಿಜ ಜೀವನಕ್ಕೂ ವ್ಯತ್ಯಾಸ

ಸೀರಿಯಲ್‌ಗೂ, ನಿಜ ಜೀವನಕ್ಕೂ ಅಜಗಜಾಂತರ ವ್ಯತ್ಯಾಸ ಇರತ್ತೆ ಬಿಡಿ. ಸೀರಿಯಲ್‌ಗಳಲ್ಲಿ ಹೆಣ್ಣಿನ ಮೇಲೆ ದೌರ್ಜನ್ಯ ಆಗುವುದನ್ನು ನೋಡುತ್ತಿರುವಾಗ ಅಥವಾ ವಿಲನ್‌ಗಳು, ಅವರು ಲೇಡಿನೇ ಆಗಿರಲಿ, ಪುರುಷರೇ ಆಗಿರಲಿ ಟಾರ್ಚರ್‌ ಕೊಡುವುದನ್ನು ನೋಡಿದಾಗ, ಹೋಗಿ ಬಾರಿಸಿಬಿಡಬೇಕು ಎನ್ನಿಸುತ್ತದೆ, ಇವನ್ನೆಲ್ಲಾ ಅವರು ಯಾಕೆ ಸಹಿಸಿಕೊಳ್ಳಬೇಕು ಎಂದು ಪ್ರಶ್ನಿಸುವವರೇ ನಿಜ ಜೀವನದಲ್ಲಿ ಹೀಗೇನಾದ್ರೂ ಅಕ್ಕ-ಪಕ್ಕದ ಮನೆಯವರು ಮಾಡಿಬಿಟ್ಟರೆ ಸಂತ್ರಸ್ತರ ಮೇಲೆಯೇ ಗೂಬೆ ಕುಳ್ಳರಿಸುವುದು ಇದೆ. ಅದರಲ್ಲಿಯೂ ಸಂಬಂಧಿಕರ ಮನೆಯಲ್ಲಿ ಹೊರಗಿನ ಹೆಣ್ಣಿನ ಮೇಲೆ ದೌರ್ಜನ್ಯ ನಡೆಯುವಾಗ, ಸಂಬಂಧಿಕರ ಪರವಾಗಿಯೇ ನಿಲ್ಲುವ ಎಷ್ಟು ಪ್ರಕರಣಗಳು ಇಲ್ಲ ಹೇಳಿ.

26
ಸೀರಿಯಲ್‌ಗಳಲ್ಲಿ ಬೇರೆ

ಆದರೆ ಮೊದಲೇ ಹೇಳಿದಂತೆ ಸೀರಿಯಲ್‌ಗಳನ್ನು ನೋಡುವಾಗ ಮಾತ್ರ, ವೀಕ್ಷಕರು ವಿಲನ್‌ಗಳ ವಿರೋಧಿಗಳಾಗಿರುತ್ತಾರೆ. ಒಂದೆರಡು ಬಾರಿಸಬಾರದಾ ಎಂದು ಹೇಳುವುದೂ ಉಂಟು. ಕರ್ಣ ಸೀರಿಯಲ್‌ (Karna Serial) ವಿಷಯಕ್ಕೆ ಬರುವುದಾದರೆ, ಕುತಂತ್ರಿ ರಮೇಶ್‌ನನ್ನು ನೋಡಿದರೆ ವೀಕ್ಷಕರು ಉರಿದು ಬೀಳುವುದು ಇದೆ. ಪ್ರತಿಬಾರಿಯೂ ರಮೇಶ್‌ ಮಾಡುವ ಕುತಂತ್ರ ಕಂಡಾಗಲೆಲ್ಲಾ ಕರ್ಣ ಎರಡು ಬಾರಿಸಬಾರದೇ ಎಂದವರೇ ಹೆಚ್ಚು. ಅದರಲ್ಲಿಯೂ ಪತ್ನಿ ಮಾಲತಿ ಮೇಲೆ ಎಸಗುವ ದೌರ್ಜನ್ಯ ಕಂಡಾಗಲೆಲ್ಲಾ ಇದ್ಯಾಕೋ ಪತ್ನಿಯರು ಹೀಗೆ ಸುಮ್ಮನೆ ಇದ್ದರೆ ಆಗುವುದಿಲ್ಲ, ದೌರ್ಜನ್ಯ ಎಷ್ಟು ವರ್ಷ ಸಹಿಸಿಕೊಳ್ಳಬೇಕು ಎಂದು ಹೇಳಿದವರೇ ಎಲ್ಲಾ.

36
ವೀಕ್ಷಕರ ಆಸೆ ಈಡೇರಿತು

ವೀಕ್ಷಕರ ಆ ಆಸೆ ಕೊನೆಗೂ ನೆರವೇರಿದೆ. ರಮೇಶ್‌ ಪದೇ ಪದೇ ಪತ್ನಿ ಮಾಲತಿ ಮೇಲೆ ದೌರ್ಜನ್ಯ ಎಸಗುತ್ತಲೇ ಬಂದಿದ್ದಾನೆ. ಆದರೆ ಈಗ ಸೊಸೆ ನಿಧಿಯ ಸಪೋರ್ಟ್‌ ಹಾಗೂ ಬುದ್ಧಿಮಾತಿನಿಂದ ಮಾಲತಿ ಬದಲಾಗಿದ್ದಾಳೆ.

46
ಪತಿಗೆ ಕಪಾಳ ಮೋಕ್ಷ

ತನ್ನ ಮೇಲೆ ಕೈಮಾಡಲು ಬಂದಿರುವ ಪತಿಯ ಕೈಯನ್ನು ಹಿಡಿದುಕೊಂಡಿದ್ದಾಳೆ. ಮಾತ್ರವಲ್ಲದೇ ತಿರುಗಿ ಪತಿಯ ಕೆನ್ನೆಗೆ ರಪಾರ್‌ ಎಂದು ಬಾರಿಸಿದ್ದಾಳೆ. ಇದನ್ನು ಕಂಡು ರಮೇಶ್‌ ಅಂತೂ ತತ್ತರಿಸಿಹೋಗಿದ್ದಾನೆ. ಕರ್ಣ, ನಿಧಿಗೆ ಮಾಲತಿಯ ಈ ಬದಲಾವಣೆ ಕಂಡು ಖುಷಿಯಾಗಿದೆ.

56
ಥರಥರ ನಡುಗುತ್ತಿರೋ ರಮೇಶ್‌ ಪ್ರತಿರೂಪಗಳು

ಇನ್ನು ಕಮೆಂಟಿಗರ ಕಮೆಂಟ್‌ ನೋಡಿ ರಮೇಶ್‌ನಂಥ ಪುರುಷರು ಥರ ಥರ ನಡುಗುತ್ತಿದ್ದಾರೆ. ಬಹುತೇಕ ಎಲ್ಲರೂ ಮಾಲತಿ ಪರವೇ ನಿಂತಿದ್ದಾರೆ. ಪುರುಷರು ಕೂಡ ಮಾಲತಿ ಸರಿಯಾಗಿ ಮಾಡಿದ್ದಾಳೆ ಎನ್ನುತ್ತಿದ್ದಾರೆ. ಇಂಥ ಗಂಡಂದಿರಿಗೆ ಹೀಗೆಯೇ ಮಾಡಬೇಕು. ದೌರ್ಜನ್ಯ ಎಂದಿಗೂ ಸಹಿಸಬಾರದು. ಇದು ಎಲ್ಲಾ ಹೆಣ್ಣುಮಕ್ಕಳಿಗೂ ಮಾದರಿಯಾಗಬೇಕು ಎನ್ನುತ್ತಿದ್ದಾರೆ.

66
ಮಹಿಳೆಯರಿಗೆ ಪಾಠ-ಪುರುಷರಿಗೆ ಸಂಕಟ

ಒಟ್ಟಿನಲ್ಲಿ ಪತಿ ರಕ್ಕಸನಾಗಿದ್ದರೂ, ಪತಿಯೇ ಪರದೈವ ಎಂದು ಜೀವನಪೂರ್ತಿ ಆತನ ದೌರ್ಜನ್ಯ ಸಹಿಸಿಕೊಳ್ಳುವುದು ಇನ್ನು ಸಲ್ಲದು, ಪತ್ನಿಯನ್ನು ಗೌರವಿಸುವ ಪತಿಗೆ ಗೌರವ ಕೊಡಿ, ಆದರೆ ಕಾಲ ಕಸಕ್ಕಿಂತ ಕಡೆಯಾಗಿ ನೋಡುವ, ಕ್ಷಣ ಕ್ಷಣಕ್ಕೂ ನರಕಯಾತನೆ ನೀಡುವ ಇಂಥ ಗಂಡಸರಿಗೆ ತಕ್ಕಬುದ್ಧಿ ಕಲಿಸಬೇಕು ಎನ್ನುವ ಕಮೆಂಟಿಗರ ಕಮೆಂಟ್‌ ನೋಡಿ ಹಲವರು ಸುಸ್ತಾಗಿರೋದಂತೂ ಗ್ಯಾರೆಂಟಿ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories