ಆ ಹುಡ್ಗಿ ಮನೆ ಬಿಟ್ಟು ನಮ್​ ಮನೆಗೆ ಬಂದು ಬಿಟ್ಟಳು: ಪ್ಲೀಸ್​ ​ ಹೀಗೆಲ್ಲಾ ಮಾಡ್ಬೇಡಿ; ಕಂಪ್ಲೇಟ್​ ಆಗತ್ತೆ- ಭವ್ಯಾ ಗೌಡ ಮನವಿ

Published : Jul 07, 2026, 10:26 PM IST

'ಕರ್ಣ' ಧಾರಾವಾಹಿ ಖ್ಯಾತಿಯ ನಟಿ ಭವ್ಯಾ ಗೌಡ ತಮ್ಮ ಹೊಸ ಹೂವಿನ ಉದ್ಯಮಕ್ಕೆ ಅಭಿಮಾನಿಗಳಿಂದಲೇ ತೊಂದರೆಯಾಗುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಕೆಲವರು ವ್ಯಾಪಾರದ ಫೋನ್ ಸಂಖ್ಯೆಗೆ ಕರೆ ಮಾಡಿ ತೊಂದರೆ ನೀಡಿದರೆ, ಮತ್ತೊಬ್ಬ ಯುವತಿ ನಟಿಯಾಗುವ ಆಸೆಯಿಂದ  ಮನೆಗೆ ಬಂದಿರುವ ಬಗ್ಗೆ ತಿಳಿಸಿದ್ದಾರೆ. 

PREV
16
ನಿಧಿ ಭವ್ಯಾ ಗೌಡ ಹೂವಿನ ಬಿಜಿನೆಸ್​

ಕರ್ಣ ಸೀರಿಯಲ್​ ನಿಧಿಯಾಗಿ ಎಲ್ಲರ ಮನ ಸೆಳೆಯುತ್ತಿರುವ ನಟಿ ಭವ್ಯಾ ಗೌಡ ಅವರು, ಕೆಲ ತಿಂಗಳುಗಳಿಂದ ಸಹೋದರಿ ದಿವ್ಯಾ ಗೌಡ ಜೊತೆ ಸೇರಿ 'ಹೌಸ್ ಆಫ್ ಫ್ಲವರ್ಸ್' ಎಂಬ ಹೊಸ ಉದ್ಯಮವನ್ನು ಪ್ರಾರಂಭಿಸಿದ್ದಾರೆ. ಇದರಲ್ಲಿ ಒಣ ಹೂವುಗಳನ್ನು ಬಳಸಿ ಕೈಯಿಂದ ತಯಾರಿಸಿದ ಬೊಕ್ಕೆಗಳನ್ನು (handmade bouquets) ಅವರು ಮಾರಾಟ ಮಾಡುತ್ತಿದ್ದಾರೆ. ಒಣ ಹೂವುಗಳನ್ನು ಬಳಸಿ ವಿಶಿಷ್ಟವಾದ, ಕೈಯಿಂದ ಮಾಡಿದ ಹೂವಿನ ಬೊಕ್ಕೆಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ.

26
ಜನರಿಂದ ತೊಂದರೆ

ಇದರ ಬಗ್ಗೆ ಅವರು ಮಾಹಿತಿ ನೀಡುತ್ತಲೇ, ಹೂವಿನ ಬಗ್ಗೆ ವಿಚಾರಿಸೋದನ್ನು ಬಿಟ್ಟು ಮೊಬೈಲ್​ ನಂಬರ್​ ಸಿಕ್ಕಿಬಿಟ್ಟಿದೆ ಎನ್ನುವ ಖುಷಿಯಲ್ಲಿ ಭವ್ಯಾ ಗೌಡ ಅವರ ಜೊತೆಗೆಮಾತನಾಡಲು ಅಭಿಮಾನಿಗಳು ದಿನನಿತ್ಯವೂ ಆಮೊಬೈಲ್​ಗೆ ಕರೆಮಾಡಿ ಬಿಜಿನೆಸ್​ಗೆ ತೊಂದರೆ ಉಂಟು ಮಾಡುತ್ತಿರುವ ಬಗ್ಗೆ ಭವ್ಯಾ ಅವರು ನೋವು ತೋಡಿಕೊಂಡಿದ್ದಾರೆ.

36
ಫೋನ್​ ನನ್ನದಲ್ಲ

ಈ ಫೋನ್​ ನನ್ನ ಬಳಿ ಇರುವುದಿಲ್ಲ. ಅದು ಬಿಜಿನೆಸ್​ ಮಾಡುವವರ ಬಳಿ ಇರುತ್ತದೆ. ಅವರಿಗೆ ಕಾಲ್​ಮಾಡಿ ನನ್ನ ಬಗ್ಗೆ ವಿಚಾರಿಸೋದು, ಫೋನ್​ ನಂಬರ್​ ಕೇಳೋದು ಹೀಗೆ ತುಂಬಾ ತೊಂದರೆ ಕೊಡುತ್ತಿದ್ದಾರೆ.ಪ್ಲೀಸ್​ ಹಾಗೆಲ್ಲಾ ಮಾಡಿ ಬಿಜಿನೆಸ್​ಗೆ ತೊಂದರೆ ಮಾಡಬೇಡಿ ಎಂದು ಭವ್ಯಾ ಕೇಳಿಕೊಂಡಿದ್ದಾರೆ..

46
ಹುಡುಗಿಯ ಸ್ಟೋರಿ

ಒಬ್ಬ ಹುಡುಗಿ ಕೆಲವು ದಿನಗಳ ಹಿಂದೆ ಬಂದು ಆ್ಯಕ್ಟಿಂಗ್​ಮಾಡಬೇಕು, ಇಲ್ಲೇ ಇರ್ತೇನೆ ಎಂದು ಬಂದುಬಿಟ್ಟಳು.ಮೊದಲಿಗೆ ಆ ಹುಡುಗಿಯ ಅಕ್ಕ ಬಂದು ಕರೆದುಕೊಂಡು ಹೋದರು. ಮತ್ತೊಮ್ಮೆ ಬಂದ ಹುಡುಗಿ, ನಿನ್ನೆ ಕೂಡ ಮತ್ತೆ ಬಂದಿದ್ದಾಳೆ. ಮನೆ ಬಿಟ್ಟು ಬಂದಿದ್ದೇನೆ. ನನಗೆ ನೀವು ಆ್ಯಕ್ಟಿಂಗ್​ ಕಲಿಸಲೇಬೇಕು. ಎಲ್ಲಿಯೂ ಹೋಗಲ್ಲ ಎಂದು ಬಟ್ಟೆ ಪ್ಯಾಕ್​ ಮಾಡಿಕೊಂಡು ಬಂದಿದ್ದಾಳೆ. ಹೀಗೆಲ್ಲಾ ಆದ್ರೆ ತುಂಬಾ ಭಯ ಆಗುತ್ತೆ ಎಂದಿದ್ದಾರೆ ನಟಿ.

56
ಹೀಗೆಲ್ಲಾ ಮಾಡಬೇಡಿ

ಕೊನೆಗೆ ಆ ಹುಡುಗಿ ನೇರವಾಗಿ ನಮ್ಮ ಮನೆಗೆ ಮಧ್ಯರಾತ್ರಿ ಬಂದಿದ್ದಾಳೆ. ನಮ್ಮ ಓನರ್​ ನೋಡಿ ಭಯಪಟ್ಟುಕೊಂಡಿದ್ದಾರೆ. ಹೀಗೆ ತೊಂದರೆ ಕೊಟ್ಟರೆ ಪೊಲೀಸ್​ ಕಂಪ್ಲೇಂಟ್​ ಕೊಡುವುದಾಗಿ ಅವರು ಹೇಳಿದ್ದಾರೆ. ಹೀಗೆಲ್ಲಾ ಆದರೆ ದೊಡ್ಡ ಇಶ್ಯು ಆಗುತ್ತದೆ, ದಯವಿಟ್ಟು ಸಹಕರಿಸಿ ಎಂದು ನಟಿ ಹೇಳಿದ್ದಾರೆ.

66
ಪೊಲೀಸ್​​ ಕಂಪ್ಲೇಂಟ್​ ಆಗತ್ತೆ

ನಮಗೂ ನಮ್ಮ ಪರ್ಸನಲ್​ ಲೈಫ್​ ಇದೆ. ಅದನ್ನು ಬದುಕಲು ಬಿಡಿ. ನನ್ನ ಸೋಷಿಯಲ್​ ಮೀಡಿಯಾ ಖಾತೆಗೆ ಎಷ್ಟೇ ಮೆಸೇಜ್ ಮಾಡಿ, ನಾನು ರೆಸ್ಪಾನ್ಸ್​ ಮಾಡುತ್ತೇನೆ. ಅದನ್ನು ಬಿಟ್ಟು ಹೀಗೆಲ್ಲಾ ನಮ್ಮ ಬಿಜಿನೆಸ್​ಗೆ ಬಂದು ತೊಂದರೆ ಕೊಡಬೇಡಿ ಎಂದಿದ್ದಾರೆ ನಟಿ ಭವ್ಯಾ ಗೌಡ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories