ಮೊಸಳೆ ಬಾಯಿಗೆ ಕೈ ಹಾಕಿದ ಮಧುರಾ; ಪೆದ್ದಿ ಅಂದವರಿಗೆಲ್ಲಾ ಶಾಕ್, ಜೈದೇವ್‌ ಅಬ್ಬರಕ್ಕೆ ಬ್ರೇಕ್!

Published : Aug 26, 2026, 10:38 AM IST

ಜೀ ಕನ್ನಡದ ಅಮೃತಧಾರೆ ಸೀರಿಯಲ್‌ನಲ್ಲಿ, ಭೂಮಿಕಾ ಮತ್ತು ಮಲ್ಲಿ ಬೀಸಿದ ಬಲೆಗೆ ಜೈದೇವ್ ಸಿಲುಕಿದ್ದಾನೆ. ಮಧುರಾಳ ಮೂಲಕ ದಿಯಾಳ ಬಗ್ಗೆ ಸತ್ಯ ಹೊರತೆಗೆಯಲು ಯತ್ನಿಸುತ್ತಿದ್ದು, ಕುಡಿದ ಮತ್ತಿನಲ್ಲಿ ಜೈದೇವ್ ಸತ್ಯ ಬಾಯ್ಬಿಡುತ್ತಾನಾ ಎಂಬ ಕುತೂಹಲ ಮೂಡಿದೆ.

PREV
15
ಅಮೃತಧಾರೆ ಸೀರಿಯಲ್‌

ಜೀ ಕನ್ನಡದ ಅಮೃತಧಾರೆ ಸೀರಿಯಲ್‌ನಲ್ಲಿ ಭೂಮಿಕಾ ಮತ್ತು ಮಲ್ಲಿ ಬೀಸಿದ ಬಲೆಯಲ್ಲಿ ಜೈದೇವ್‌ ಕೊನೆಗೂ ತಗ್ಲಾಕೊಂಡಿದ್ದಾನೆ. ಜೈದೇವ್‌ನ ಗೆಳತಿಯರಾದ ದಿಯಾ ಮತ್ತು ಅನು ದಿಢೀರ್ ಹೋಗಿದ್ದೆಲ್ಲಿಗೆ ಎಂಬುದನ್ನು ತಿಳಿದುಕೊಳ್ಳಲು ಮಲ್ಲಿ ಪ್ರಯತ್ನಿಸುತ್ತಿದ್ದಾಳೆ. ಇದಕ್ಕಾಗಿ ಸಹೋದ್ಯೋಗಿ ಮಧುರಾ ಸಹಾಯ ಪಡೆದುಕೊಂಡಿದ್ದಾಳೆ. ಆರಂಭದಲ್ಲಿ ಮಧುರಾಳನ್ನು ಪೆದ್ದಿ ಅಂದಿದ್ದ ಜನರು, ಜೈದೇವ್‌ ಬಾಯಿ ಬಿಡುಸುತ್ತಿರೋದನ್ನು ಕಂಡು ಮೆಚ್ಚುಗೆ ಸೂಚಿಸುತ್ತಿದ್ದಾರೆ.

25
ಜೈದೇವ್ ಸ್ನೇಹ ಬೆಳೆಸಿರುವ ಮಧುರಾ

ಜೈದೇವ್ ಸ್ನೇಹ ಬೆಳೆಸಿರುವ ಮಧುರಾ ಆತನೊಂದಿಗೆ ಕ್ಲೋಸ್ ಆಗಿದ್ದಾಳೆ. ಪಬ್‌ನಲ್ಲಿ ಕುಡಿದು ನಶೆಯಲ್ಲಿದ್ದ ಜೈದೇವ್‌ನನ್ನು ಮಧುರಾಳೇ ಮನೆಗೆ ಕರೆದುಕೊಂಡು ಬಂದಿದ್ದಾಳೆ. ನಶೆಯಲ್ಲಿರುವ ಜೈದೇವ್ ಜೊತೆ ಮಾತನಾಡುತ್ತಾ, ದಿಯಾ ಬೇಬಿ ವಿಷಯ ಬಗ್ಗೆ ಮಧುರಾ ಕೇಳಿದ್ದಾಳೆ. ದಿಯಾ ಹೆಸರು ಕೇಳ್ತಿದ್ದಂತೆ ಅಲರ್ಟ್ ಆದ ಜೈದೇವ್, ಆಕೆ ಬಗ್ಗೆ ನಿನಗೆ ಹೇಗೆ ಗೊತ್ತು ಎಂದು ಪ್ರಶ್ನೆ ಮಾಡಿದ್ದಾನೆ.

35
ದಿಯಾಗಾಗಿ ಹುಡುಕಾಟ

ಜೈದೇವ್ ಪ್ರಶ್ನೆ ಮಾಡುತ್ತಿದ್ದಂತೆ ಅಲರ್ಟ್ ಆದ ಮಧುರಾ, ನೀವೇ ಅಲ್ಲವಾ ದಿಯಾ ಹೆಸರು ಹೇಳಿದ್ದು ಎಂದು ಮರುಪ್ರಶ್ನೆ ಮಾಡಿ ಎಸ್ಕೇಪ್ ಆಗಿದ್ದಾಳೆ. ಇಲ್ಲಿಗೆ ಸುಮ್ಮನಾಗದ ಮಧುರಾ, ಮುಂದುವರಿದು ಈಗ ದಿಯಾ ಎಲ್ಲಿದ್ದಾರೆ ಎಂದು ಕೇಳಿದ್ದಾಳೆ. ನನಗೆ ಯಾರ್ ಯಾರು ಮೋಸ ಮಾಡ್ತಾರೋ ಅವರೆಲ್ಲಾ ಹೋಗುವ ಜಾಗ ಅದು ಎಂದು ಹೇಳುತ್ತಾ ಜೈದೇವ್ ಸಿಗರೇಟ್‌ಗೆ ಬೆಂಕಿ ಹಚ್ಚಿದ್ದಾನೆ.

45
ಜೈದೇವ್ ಸತ್ಯ ಹೇಳ್ತಾನಾ ?

ದಿಯಾಗೆ ಏನಾದ್ರೂ ಮಾಡದೀರಾ ಅಂತ ಕೇಳುತ್ತಿದ್ದಂತೆ ದಿಯಾ ಹತ್ತಿರಕ್ಕೆ ಬಂದು ಮಾಡ್ದೇ ಎಂದು ಗುಡುಗಿದ್ದಾನೆ. ಜೈದೇವ್ ಮತ್ತು ಮಧುರಾ ನಡುವಿನ ಮಾತುಗಳನ್ನು ದೂರದಿಂದಲೇ ಭೂಮಿಕಾ ಮತ್ತು ಮಲ್ಲಿ ಕೇಳಿಸಿಕೊಳ್ಳುತ್ತಿದ್ದಾರೆ. ಜೈದೇವ್ ಸತ್ಯ ಹೇಳ್ತಾನಾ ಅನ್ನೋದು ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ.

55
ಶಕುಂತಲಾಗೆ ಅನುಮಾನ

ಮತ್ತೊಂದೆಡೆ ತನ್ನ ಮಗನ ವಿರುದ್ಧ ಭೂಮಿಕಾ ಮತ್ತು ಮಲ್ಲಿ ಏನೋ ಸಂಚು ಮಾಡುತ್ತಿರುವ ಬಗ್ಗೆ ಶಕುಂತಲಾಗೆ ಅನುಮಾನ ಮೂಡಿದೆ. ಆದ್ರೆ ಯಾರಿಂದಲೂ ಶಕುಂತಲಾಗೆ ಸ್ಪಷ್ಟವಾದ ಉತ್ತರ ಸಿಗುತ್ತಿಲ್ಲ. ಕಂಪನಿಯಲ್ಲಿ ನಡೆಯುತ್ತಿರೋ ವಿಷಯಗಳನ್ನು ತಿಳಿದುಕೊಳ್ಳಲು ಶಕುಂತಲಾ ಮುಂದಾಗಿದ್ದು, ಅಲ್ಲಿಯೂ ಫೇಲ್ ಆಗಿದ್ದಾಳೆ. ಶಕುಂತಲಾಳನ್ನು ಹೇಳಿದವರನ್ನು ಕೆಲಸಕ್ಕೆ ಸೇರಿಸಿಕೊಳ್ಳಲು ಪಾರ್ಥ್ ಹಿಂದೇಟು ಹಾಕಿದ್ದಾನೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories