Lakshmi Nivasa: ಪತ್ನಿಗೆ ಕೆಲಸ ಕೊಟ್ಟವನನ್ನೇ ಜಜ್ಜಿದ ಜಯಂತ್​: ಉಫ್​! ಈ ಸೈಕೋ ಮನಸ್ಥಿತಿಗೆ ನೆಟ್ಟಿಗರು ಫುಲ್​ ಖುಷ್​

Published : Aug 25, 2026, 12:35 PM IST

ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ, ಪತಿಯ ಸೈಕೋ ಪ್ರವೃತ್ತಿಯಿಂದ ಬೇಸತ್ತು ಜಾಹ್ನವಿ ಅವನಿಂದ ದೂರವಾಗುತ್ತಾಳೆ. ಸ್ವಂತ ಕಾಲ ಮೇಲೆ ನಿಲ್ಲಲು ಕೆಲಸಕ್ಕೆ ಸೇರಿದರೆ, ಜಯಂತ್ ಆ ಕಂಪನಿಯನ್ನೇ ತನ್ನದಾಗಿಸಿಕೊಳ್ಳುತ್ತಾನೆ. ಜಯಂತ್‌ನ ಈ ಸೈಕೋ ವರ್ತನೆಗೆ ನೆಟ್ಟಿಗರು ಜೈಕಾರ ಹಾಕುತ್ತಿರುವುದು ಅಚ್ಚರಿ ಮೂಡಿಸಿದೆ.

PREV
16
ಬದಲಾದ ವೀಕ್ಷಕರ ಮನಸ್ಥಿತಿ

ಇದ್ದರೆ ಇಂಥ ಗಂಡ ಇರಬೇಕು, ತನ್ನ ಪ್ರಾಣಕ್ಕಿಂತಲೂ ಹೆಚ್ಚಾಗಿ ಪತ್ನಿಯನ್ನು ನೋಡಿಕೊಳ್ತಾನೆ ಎಂದು ಒಂದು ಕಾಲದಲ್ಲಿ ಲಕ್ಷ್ಮೀ ನಿವಾಸ ಸೀರಿಯಲ್​ (Lakshmi Nivasa Serial) ನೋಡಿದ ಎಷ್ಟೋ ಮಹಿಳಾ ಪ್ರೇಮಿಗಳು ಅಂದುಕೊಂಡಿದ್ದು ಉಂಟು. ಬರಬರುತ್ತಾ, ಅದು ಪ್ರೀತಿ ಅಲ್ಲ, ಮಾನಸಿಕ ರೋಗ ಎನ್ನೋದು ತಿಳಿಯುತ್ತಲೇ, ದೇವರೇ ಇಂಥ ಗಂಡ ಮಾತ್ರ ಕೊಡಬೇಡಪ್ಪಾ ಎನ್ನತೊಡಗಿದರು.

26
ಪ್ರೀತಿ ಹೆಸರಲ್ಲಿ ಟಾರ್ಚರ್​

ಈ ಸೀರಿಯಲ್​ ಇದೀಗ ಬಹಳ ಮುಂದಕ್ಕೆ ಹೋಗಿದೆ. ಕ್ಷಣ ಕ್ಷಣವೂ ಪತ್ನಿಗೆ ಪ್ರೀತಿಯ ಹೆಸರಿನಲ್ಲಿ ಟಾರ್ಚರ್​ ಕೊಡುತ್ತಿದ್ದ ಸೈಕೋ ಜಯಂತ್​ನಿಂದ ಚಿನ್ನುಮರಿ ದೂರ ಆಗಿದ್ದಾಳೆ. ವೆಂಕಿಯ ಅಮ್ಮನನ್ನು ಕೂಡಿ ಹಾಕಿದ್ದು, ತನ್ನ ಗಂಡನೇ ಎಂದು ತಿಳಿದ ಮೇಲೆ, ಇವನು ಬದಲಾಗಲ್ಲ ಎಂದು ಅವನಿಂದ ದೂರವಾಗಿದ್ದಾಳೆ.

36
ಪತ್ನಿಗೇ ಚಾಲೆಂಜ್​

ನಾನು ಇಲ್ಲದೇ ನೀವು ಹೇಗೆ ಬದುಕುತ್ತೀ ಎನ್ನುವ ಚಾಲೆಂಜ್​ ಮಾಡಿದ್ದಾನೆ ಜಯಂತ್​. ಹೆಣ್ಣಿಗೆ ಬದುಕಲು ಗಂಡು ಬೇಕೇ ಬೇಕು, ಹೆಣ್ಣು ತನ್ನ ಕಾಲ ಮೇಲೆ ತಾನು ನಿಂತುಕೊಳ್ಳಲು ಸಾಧ್ಯವಿಲ್ಲ ಎನ್ನೋದು ಅವನ ವಾದ. ಅದಕ್ಕೆ ತಿರುಗೇಟು ನೀಡಿ, ಕೆಲಸ ಗಿಟ್ಟಿಸಿಕೊಂಡಿದ್ದಾಳೆ ಜಾಹ್ನವಿ.

46
ಕೆಲಸಕ್ಕೆ ತೆಗೆದುಕೊಳ್ಳಬೇಡ ಎಂದಿದ್ದ

ಜಾಹ್ನವಿಗೆ ಒಂದು ಕಂಪೆನಿಯಲ್ಲಿ ಕೆಲಸ ಸಿಗುತ್ತದೆ ಎಂದು ತಿಳಿದಾಗ, ಅದರ ಮ್ಯಾನೇಜರ್​ಗೆ ಕಾಲ್​ ಮಾಡಿ ಕೆಲಸಕ್ಕೆ ತೆಗೆದುಕೊಳ್ಳಬೇಡ ಎಂದು ಜಯಂತ್​ ಹೇಳಿದ್ದ. ಆದರೆ ಇವರಿಗೆ ಎಲ್ಲಾ ಅರ್ಹತೆ ಇದೆ, ನೀವ್ಯಾರು ಹೇಳಲು ಎಂದು ಆತ ಕೆಲಸಕ್ಕೆ ತೆಗೆದುಕೊಂಡಿದ್ದ.

56
ಕಂಪೆನಿಯನ್ನೇ ತನ್ನ ಹೆಸರಿಗೆ ಮಾಡಿಕೊಂಡ

ತನ್ನ ಪತ್ನಿ ಕಾಲಮೇಲೆ ನಿಂತುಕೊಳ್ಳುತ್ತಿದ್ದಾಳೆ, ಇನ್ನು ಅವಳಿಗೆ ನನ್ನ ಅವಶ್ಯಕತೆ ಇಲ್ಲ ಎಂದು ತಿಳಿಯುತ್ತಲೇ ಸೈಕೋ ಜಯಂತ್​ಗೆ ಉರಿ ಹೊತ್ತಿಕೊಂಡಿದೆ. ತಾನು ಬೇಡ ಎಂದರೂ ಅವನು ಕೆಲಸ ಕೊಟ್ಟ ಎಂದು ಮ್ಯಾನೇಜರ್​ ಅನ್ನೇ ಜಜ್ಜಿ ಹಾಕಿದ್ದಾನೆ ಜಯಂತ್​. ಕೊನೆಗೆ ನೀನು ಹೇಳಿದಂತೆ ಮಾಡುತ್ತೇನೆ. ನನ್ನನ್ನು ಏನೂ ಮಾಡಬೇಡ ಎಂದು ಮ್ಯಾನೇಜರ್​ ಕೇಳಿದಾಗ, ಜಯಂತ್​, ನಿನ್ನ ಕಂಪೆನಿಯನ್ನು ನನ್ನ ಹೆಸರಿಗೆ ಬರೆದುಕೊಡು ಎಂದಾಗ, ಜೀವ ಉಳಿದರೆ ಸಾಕು ಎಂದು ಆತ ಓಕೆ ಎಂದಿದ್ದಾನೆ.

66
ಜೈಜೈ ಹಾಕ್ತಿರೋ ನೆಟ್ಟಿಗರು!

ಆದರೆ, ಇಲ್ಲೊಂದು ವಿಚಿತ್ರ ಎಂದರೆ, ಈ ಪ್ರೊಮೋದ ಕಮೆಂಟ್​ ತುಂಬೆಲ್ಲಾ ಸೈಕೋ ಜಯಂತ್​ನ ಗುಣಗಾನ ನಡೆದಿದೆ. ಅವನು ಮಾಡ್ತಿರೋದು ಸರಿ ಎಂದೇ ಹಲವರು ಬರೆದಿದ್ದಾರೆ. ನಮ್ಮ ಹೀರೋ ಅಂದ್ರೆ ಹೀಗೆನೇ ಎನ್ನುತ್ತಿದ್ದಾರೆ. ಹಾಗಿದ್ದರೆ ಸೈಕೋ ಮನಸ್ಥಿತಿ ಅಷ್ಟು ಮಂದಿಗೆ ಇಷ್ಟವಾಗತ್ತಾ ಎನ್ನುವ ದೊಡ್ಡ ಪ್ರಶ್ನೆ ಈಗ ಎದುರಾಗಿದೆ. ಅದರಲ್ಲಿಯೂ ಹೆಣ್ಣುಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಜಯಂತ್​ ವರ್ತನೆಯಗೆ ಗುಡ್​ ಗುಡ್​ ಎನ್ನುತ್ತಿದ್ದಾರೆ!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories