2 ಕೋಟಿ ಸಾಲ ಕೇಳಲು ಹೋದ ಜೈದೇವ್‌ಗೆ ಬಿಗ್ ಶಾಕ್; ಕೂಗಿ ಕೂಗಿ ಕರೆದ್ರೂ ಕೇಳಲಿಲ್ಲ ದಿಯಾ ಬೇಬಿ

Published : May 07, 2026, 07:33 PM IST

ಎಲ್ಲವನ್ನೂ ಕಳೆದುಕೊಂಡಿರುವ ಜೈದೇವ್, 2 ಕೋಟಿ ಸಾಲಕ್ಕಾಗಿ ಬ್ಯಾಂಕ್ ಮತ್ತು ಕ್ಲಬ್‌ನಲ್ಲಿ ಅವಮಾನಕ್ಕೊಳಗಾಗುತ್ತಾನೆ. ಬಳಿಕ ಹೆಂಡತಿ ದಿಯಾ ಬೇಬಿ ಬಳಿ ಹಣಕ್ಕಾಗಿ ಜಗಳವಾಡಿ, ಆಕೆ ನೀಡಿದ ದೂರಿನ ಅನ್ವಯ ಪೊಲೀಸರಿಂದ ಬಂಧಿಸಲ್ಪಟ್ಟು ಜೈಲು ಸೇರುತ್ತಾನೆ.

PREV
15
2 ಕೋಟಿ ಸಾಲ ಕೇಳಲು ಹೋದ ಜೈದೇವ್

ಎಲ್ಲವನ್ನು ಕಳೆದುಕೊಂಡಿರುವ ಜೈದೇವ್‌, ಮತ್ತೆ ಪುಟಿದೇಳಲು ಪ್ರಯತ್ನಿಸುತ್ತಿದ್ದಾನೆ. ಹಾಗಾಗಿ ಬ್ಯಾಂಕ್‌ವೊಂದರಲ್ಲಿ 2 ಕೋಟಿ ಸಾಲ ಕೇಳಲು ಜೈದೇವ್ ಹೋಗಿದ್ದಾನೆ. ಬ್ಯಾಂಕ್‌ ಮ್ಯಾನೇಜರ್ ಹೇಳಿದ ಮಾತುಗಳನ್ನು ಕೇಳಿ ಕೋಪಗೊಂಡ ಜೈದೇವ್, ಇಂದು ನನ್ನ ಬಳಿ ಏನೂ ಇಲ್ಲದಿರಬಹುದು. ಮತ್ತೆ ಎಲ್ಲವನ್ನು ಬಂದಾಗ ನೀವೆಲ್ಲಾ ಬರ್ತೀರಾ ಅಲ್ಲವಾ ಆಗ ನಿಮ್ಮನ್ನು ನೋಡಿಕೊಳ್ಳುತ್ತೇನೆ ಎಂದು ಚಾಲೆಂಜ್ ಹಾಕಿದ್ದಾನೆ.

25
ಜೈದೇವ್‌ಗೆ ಎಚ್ಚರಿಕೆ ನೀಡಿ ಕಳುಹಿಸಿದ ಬ್ಯಾಂಕ್ ಮ್ಯಾನೇಜರ್

ಈ ಹಿಂದೆ ನಿಮ್ಮ ಬಳಿಯಲ್ಲಿ ಎಲ್ಲವೂ ಇತ್ತು. ಆದ್ರೆ ಏನು ಇಲ್ಲದೇ ಬೀದಿಗೆ ಬಂದಿದ್ದೀರಿ. ಮೊದಲು ನಿಮಗೆ ಎಲ್ಲಾ ಅದೃಷ್ಟದ ಬಾಗಿಲುಗಳು ತೆರೆಯುತ್ತಿದ್ದವು. ಇಂದು ಒಂದು ಫೈಲ್ ಸಹ ತೆಗೆಯಲ್ಲ. ಜಾಮೀನಿಗೆ ಏನಾದ್ರು ನೀಡಿದ್ರೆ ಮಾತ್ರ ಸಾಲ ಸಿಗುತ್ತೆ. ದಯವಿಟ್ಟು ಇಲ್ಲಿಂದ ಹೊರಗೆ ಹೋಗಿ. ಇಲ್ಲಾಂದ್ರೆ ಸೆಕ್ಯೂರಿಟಿಯನ್ನು ಕರೀಬೇಕಾಗುತ್ತೆ ಎಂದು ಜೈದೇವ್‌ಗೆ ಬ್ಯಾಂಕ್ ಮ್ಯಾನೇಜರ್ ಎಚ್ಚರಿಕೆ ನೀಡಿದ್ದಾನೆ.

35
ಜೈದೇವ್‌ ಬೆಲೆ ಎಷ್ಟು?

ಬ್ಯಾಂಕ್‌ನಲ್ಲಿ ಅವಮಾನಕ್ಕೊಳಗಾದ ಜೈದೇವ್, ಮೆಂಬರ್‌ಶಿಪ್ ಹೊಂದಿರುವ ಕ್ಲಬ್‌ಗೆ ಹೋಗಿದ್ದಾನೆ. ಅಲ್ಲಿ ಶೂ ಧರಿಸದೇ ಇರೋರನ್ನು ಒಳಗೆ ಬಿಡೋದಕ್ಕೆ ಆಗಲ್ಲ ಎಂದಿದ್ದಾರೆ. ಇದರಿಂದ ಕ್ಲಬ್ ಮೆಂಬರ್ ಅವರನ್ನೇ ಹೊರಗೆ ಕರೆದು 2 ಕೋಟಿ ಸಾಲ ಕೇಳಿದ್ದಾನೆ. ಇದಕ್ಕೆ, ನೀವು 2 ಕೋಟಿಗೆ ಬೆಲೆ ಬಾಳ್ತೀರಾ? ನಿಮ್ಮ ಅಣ್ಣನೇ ಹೊರಗೆ ಹಾಕಿರೋ ವಿಷಯ ಮೀಡಿಯಾಗಳಲ್ಲಿ ಬಂದಿದೆ. ಯಾರ ಹತ್ತಿರ ಹೋದ್ರೂ ನಿಮಗೆ ಹಣ ಸಿಗಲ್ಲ ಎಂಬ ಸತ್ಯವನ್ನು ಜೈದೇವ್‌ಗೆ ಹೇಳಿ, ಅಲ್ಲಿಂದ ಕಳುಹಿಸಿದ್ದಾರೆ.

45
ಬೇಬಿ ಜೊತೆ ಕೆಡಿಯ ಜಗಳ

ಈ ಎಲ್ಲಾ ಘಟನೆಗಳಿಂದ ಅವಮಾನಿತನಾದ ಜೈದೇವ್, ಮತ್ತೆ ಹೆಂಡ್ತಿ ದಿಯಾ ಬೇಬಿ ಬಳಿಗೆ ಹೋಗಿದ್ದಾನೆ. ಆಕೆ ಬಳಿ ತನ್ನ ಹಣವನ್ನು ವಾಪಸ್ ಕೊಡುವಂತೆ ಜಗಳ ಮಾಡಿದ್ದಾನೆ. ಜೈದೇವ್ ಕಿರಿಕಿರಿಯಿಂದ ಬೇಸತ್ತ ದಿಯಾ ಬೇಬಿ, ಪೊಲೀಸರನ್ನು ಕರೆಸಿ ದೂರು ನೀಡಿದ್ದಾಳೆ. ಕೊನೆಗೆ ಪೊಲೀಸರು ಜೈದೇವ್‌ನನ್ನು ಕರೆದುಕೊಂಡ ಕತ್ತಲಕೋಣೆಗೆ ತಳ್ಳಿದ್ದಾರೆ.

ಇದನ್ನೂ ಓದಿ: Amruthadhaare ಭೂಮಿಕಾ ಧರಿಸಿದ ಕಾಲ್ಗೆಜ್ಜೆಗೀಗ ಭಾರಿ ಡಿಮಾಂಡ್​: ಪತಿ ತೊಡಿಸಿದರೆ ಆಗುವುದೇನು?

55
ಜೈದೇವ್‌ ಸಹಾಯಕ್ಕೆ ಬರೋರು ಯಾರು?

ಬಟ್ಟೆ ಬಿಚ್ಚಿಸಿ, ಚಡ್ಡಿ ಮೇಲೆ ಬಿಟ್ಟರೂ ಜೈದೇವ್‌ನ ಆಟಿಟ್ಯೂಡ್ ಮಾತ್ರ ಕಡಿಮೆಯಾದಂತೆ ಕಾಣಿಸುತ್ತಿಲ್ಲ. ನೆಲದ ಮೇಲೆಯೇ ಕಾಲಿನ ಮೇಲೆ ಕಾಲು ಹಾಕಿಕೊಂಡು ಜೈದೇವ್ ಮಲಗಿದ್ದಾನೆ. ಈಗ ಜೈಲು ಸೇರಿರುವ ಜೈದೇವ್‌ನನ್ನು ಸೇವ್ ಮಾಡೋರು ಯಾರು? ಜೈದೇವ್ ಸಹಾಯಕ್ಕೆ ಬರೋರು ಯಾರು? ಮಗನ ಸ್ಥಿತಿ ನೋಡಿ ಕೆಡಿ ಸಹಾಯಕ್ಕೆ ಶಕುಂತಲಾ ಬರ್ತಾಳಾ ಅಥವಾ ಎಲ್ಲಾ ತಪ್ಪನ್ನು ಕ್ಷಮಿಸಿ ಗೌತಮ್ ಬರ್ತಾನಾ ಎಂಬುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

ಇದನ್ನೂ ಓದಿ: ಕೊನೆಗೂ ಬೀದಿಪಾಲಾದ ಅಮೃತಧಾರೆಯ ಕೆಡಿ; ಆದ್ರೂ ಜೈದೇವ್‌ಗೆ ಅಭಿಮಾನಿಗಳಿಂದ ಬಹುಪರಾಕ್

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories