ಬಿಗ್ ಬಾಸ್ ಖ್ಯಾತಿಯ ಡಾಗ್ ಸತೀಶ್, ಜೈಲಿನಲ್ಲಿ ನಟ ದರ್ಶನ್‌ಗೆ ಸಿಗುತ್ತಿರುವ ಟ್ರೀಟ್ಮೆಂಟ್ ಬಗ್ಗೆ ಮಾತನಾಡಿದ್ದಾರೆ. ತಮಗೆ 'ರಾಯಲ್ ಟ್ರೀಟ್ಮೆಂಟ್' ಸಿಕ್ಕಿತ್ತು, ಆದರೆ ದರ್ಶನ್‌ಗೆ ಹಾಗಾಗುತ್ತಿಲ್ಲ ಎಂದಿದ್ದಾರೆ. ರಾಜಮರ್ಯಾದೆಯ ಹಿಂದಿನ ಗುಟ್ಟಿನ ಬಗ್ಗೆ ಹೇಳಿದ್ದೇನು?
ಬಾಯಿ ಬಿಟ್ಟರೆ ಕೋಟಿ ಕೋಟಿಯಲ್ಲಿ ಮಾತನಾಡುವ, ತಮಗಿಂತ ಸುಂದರ ಯಾರೂ ಇಲ್ಲ ಎನ್ನುವ, ತಾನೊಬ್ಬನಿದ್ದರೆ ಬಿಗ್ಬಾಸ್ ಕನ್ನಡವನ್ನು ವಿಶ್ವದ ಮಟ್ಟಕ್ಕೆ ಒಯ್ಯುತ್ತೇನೆ ಎನ್ನುವ, ತನ್ನ ಹಿಂದೆ ಮುಂದೆ ಸುರಸುಂದರಿಯರು ತಿರುಗುತ್ತಾರೆ, ರಾಜಕಾರಣಿಗಳು, ಮಾಧ್ಯಮದವರು ನನ್ನ ಪಾಕೆಟ್ನಲ್ಲಿ ಇದ್ದಾರೆ ಎಂದೆಲ್ಲಾ ಹೇಳುವ Bigg Boss ಖ್ಯಾತಿಯ ಡಾಗ್ ಸತೀಶ್ ಇದೀಗ ತಮ್ಮ ಬಳಿ ಇರುವ ನಾಯಿಯ ಬೆಲೆ 100 ಕೋಟಿ ಎಂದು ಹೇಳುವ ಮೂಲಕ ಸಾಕಷ್ಟು ಬಾರಿ ಟ್ರೋಲ್ಗೆ ಒಳಗಾಗಿದ್ದು ಗೊತ್ತೇ ಇದೆ.
26
100 ಕೋಟಿ ನಾಯಿ ಬರ್ತ್ಡೇ
ಅದೇ 100 ಕೋಟಿ ಎನ್ನುವ ನಾಯಿಯ ಹುಟ್ಟುಹಬ್ಬವನ್ನು ಆಚರಿಸಿದರೋ ಡಾಗ್ ಸತೀಶ್, ಇದೀಗ ಬಾಸ್ ಟಿವಿಗೆ ನೀಡಿರುವ ಸಂದರ್ಶನದಲ್ಲಿ ದರ್ಶನ್ ಕುರಿತು ಕೇಳಿರುವ ಪ್ರಶ್ನೆಗೆ ಕುತೂಹಲ ಎನ್ನುವಂಥ ಉತ್ತರವನ್ನು ಕೊಟ್ಟಿದ್ದಾರೆ. ಅಷ್ಟಕ್ಕೂ ಡಾಗ್ ಸತೀಶ್ ಅವರ ಮೇಲೆ ಇದಾಗಲೇ ಕೇಸ್ ಕೂಡ ಆಗಿತ್ತು. ವೂಲ್ಫ್ ಡಾಗ್ ಅನ್ನು ಖರೀದಿಸಿರುವ ಬಗ್ಗೆ ಅವರು ಪೋಸ್ಟ್ ಹಾಕಿದ್ದರು. ಇದು ಬಿಗ್ಬಾಸ್ಗೂ ಹೋಗುವ ಮುನ್ನ ನಡೆದಿದ್ದ ಘಟನೆ. ಐವತ್ತು ಕೋಟಿ ರೂ. ಶ್ವಾನದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಜಾರಿ ನಿರ್ದೇಶನಾಲಯವು ಬೆಂಗಳೂರಿನಲ್ಲಿ ಅವರ ನಿವಾಸದ ಮೇಲೆ ದಾಳಿ ಕೂಡ ನಡೆಸಿತ್ತು. ಹಲವಾರು ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸಿ, ನಾಯಿಯ ಬೆಲೆ 50 ಕೋಟಿ ರೂ. ಎಂದು ಹೇಳಿರುವುದು ಸುಳ್ಳು ಎಂದೇ ಹೇಳಿದ್ದರು. ಕೊನೆಗೆ ಸತೀಶ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು.
36
ಹಿಂದೆ ಜೈಲಿಗೆ ಹೋಗಿದ್ರು
ಇದರ ಬೆಲೆ 4.4 ಮಿಲಿಯನ್ ಪೌಂಡ್ ಆಗಿದ್ದು ಭಾರತದ ರೂಪಾಯಿಗೆ ಈ ಹಣವನ್ನು ಹೋಲಿಕೆ ಮಾಡಿದರೆ ಇದು 49 ಕೋಟಿ ರೂ. ಮೌಲ್ಯದ್ದು ಎಂದು ಹೇಳಿದ್ದರು. ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಕಾಡು ತೋಳ ಹಾಗೂ ಕಕೇಶಿಯನ್ ಶೆಪರ್ಡ್ ಎಂಬ ಎರಡು ತಳಿಗಳ ಮಿಶ್ರಣವಾಗಿದ್ದ ಈ ನಾಯಿಯು ತೀರಾ ಅಪರೂಪದಲ್ಲಿ ಅಪರೂಪದ್ದು ಎಂದು ಸತೀಶ್ ಹೇಳಿಕೊಂಡಿದ್ದರು. ಆದರೆ ಇವೆಲ್ಲವೂ ಸುಳ್ಳು ಎಂದು ಅಧಿಕಾರಿಗಳು ತಿಳಿಸಿದ್ದರು. ಇದೇ ವಿಚಾರ ಹಾಗೂ ಬಳಿಕ ಪತ್ನಿಯಿಂದ ಡಿವೋರ್ಸ್ ವಿಚಾರವಾಗಿ ಬಹಳ ಸದ್ದು ಮಾಡಿದ್ದ ಡಾಗ್ ಸತೀಶ್ ಅವರಿಗೆ ಬಿಗ್ಬಾಸ್ ಆಫರ್ ಕೊಟ್ಟಿತ್ತು. ಇದೀಗ ಅವರು ಬಿಗ್ಬಾಸ್ ಸತೀಶ್ ಆಗಿ ಫೇಮಸ್ ಆಗಿದ್ದಾರೆ.
ಇದೀಗ ಜೈಲಿನಲ್ಲಿ ತಮಗೆ ಕೊಟ್ಟಿರುವ ಟ್ರೀಟ್ಮೆಂಟ್ ಹಾಗೂ ದರ್ಶನ್ ಅವರಿಗೆ ಕೊಡುತ್ತಿರುವ ಟ್ರೀಟ್ಮೆಂಟ್ ಬಗ್ಗೆ ಮಾತನಾಡಿದ್ದಾರೆ. ತಮಗೆ ಜೈಲಿನಲ್ಲಿ ವ್ಯವಸ್ಥೆ ಸರಿ ಇಲ್ಲ ಎಂದು ದರ್ಶನ್ ಅವರು ಕೋರ್ಟ್ ಮೊರೆ ಹೋಗಿರುವ ಬಗ್ಗೆ ಕೇಳಿದಾಗ, ಸತೀಶ್ ಅವರು, ಜೈಲಿನಲ್ಲಿ ಇದೆಲ್ಲಾ ಕಾಮನ್. ಅಲ್ಲಿ ಆಗದವರೂ ಇರ್ತಾರೆ,, ಒಳ್ಳೆಯವರು, ಕೆಟ್ಟವರು, ಆಪೋಸಿಟ್ ಇದ್ದವರು ಎಲ್ಲರೂ ಇರ್ತಾರೆ. ಅದಕ್ಕೆ ದರ್ಶನ್ ಅವರಿಗೆ ಹಾಗೆ ಆಗ್ತಿದೆ. ಆದರೆ ನನಗಂತೂ ಹೀಗಾಗಲಿಲ್ಲ, ರಾಯಲ್ ಟ್ರೀಟ್ಮೆಂಟ್ ಸಿಕ್ಕಿತ್ತು, ರಾಜನ ರೀತಿ ಇದ್ದೆ ಎಂದಿದ್ದಾರೆ.
56
ರಾಯಲ್ ಟ್ರೀಟ್ಮೆಂಟ್
ಈ ಹಿಂದೆ ಕೂಡ ಸತೀಶ್ ಜೈಲಿನಲ್ಲಿ ತಮ್ಮನ್ನು ಎಷ್ಟು ಚೆನ್ನಾಗಿ ನೋಡಿಕೊಂಡರು ಎನ್ನುವ ಬಗ್ಗೆ ವಿವರಿಸಿದ್ದರು. ಜೈಲು ದಿ ಬೆಸ್ಟ್. ಅಪ್ಪ-ಅಮ್ಮನಿಗಿಂತಲೂ ಅಲ್ಲಿ ಇರುವವರು ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಂಡರು. ಹೊರಗಡೆ ಇರುವ ಬದಲು ಒಳಗಡೆ ಇರುವುದೇ ತುಂಬಾ ಲೇಸು ಎಂದು ಹೇಳಿದ್ದರು. ಆಚೆ ನೆಮ್ಮದಿ ಇಲ್ಲ ಎಂದೂ ಹೇಳಿದ್ದರು. ಏನಾದ್ರೂ ಇಶ್ಯು ಮಾಡಿ ಒಳಗೆ ಕಳಿಸುವ ಹಾಗಿದ್ರೆ ಕಳಿಸಿ ಸರ್ ಎಂದು ಕೂಡ ಹೇಳಿದ್ದರು.
66
ಗುಟ್ಟೇನು?
ಹಾಗಿದ್ದರೆ, ಇದಕ್ಕೆ ಕಾರಣ ಏನು? ನಿಮಗೆ ರಾಯಲ್ ಟ್ರೀಟ್ಮೆಂಟ್ ಪೊಲೀಸರು ಯಾಕೆ ಕೊಟ್ಟರು ಎನ್ನುವ ಪ್ರಶ್ನೆಗೆ ಮಾತ್ರ, ಸತೀಶ್ ಅವೆಲ್ಲಾ ಸೀಕ್ರೇಟ್, ಕ್ಯಾಮೆರಾ ಆಫ್ ಮಾಡಿದ್ರೆ ಅದರ ಗುಟ್ಟನ್ನು ಹೇಳುತ್ತೇನೆ ಎಂದಿದ್ದಾರೆ. ಜೈಲಿನಲ್ಲಿ ಏಕೆ ಹೀಗೆಲ್ಲಾ ರಾಯಲ್ ಟ್ರೀಟ್ಮೆಂಟ್ ಕೊಡ್ತಾರೆ ಎಂದು ಓಪನ್ ಆಗಿ ಹೇಳುವ ಹಾಗಿಲ್ಲ. ಕ್ಯಾಮೆರಾ ಮುಂದೆ ಹೇಳಿದರೆ ಕಷ್ಟ ಎನ್ನುವುದು ಅವರ ಮಾತು!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.