ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾಳ ಬದಲಾವಣೆ ಕಂಡು ಅನುಮಾನಗೊಂಡ ಗೌತಮ್, ಪಾರ್ಥನ ಜೊತೆ ಸೇರಿ ಪಾರ್ಟಿಯಲ್ಲಿ ಆಕೆಗೆ ಮದ್ಯ ಕುಡಿಸುತ್ತಾನೆ. ನಶೆಯಲ್ಲಿ ದೀಪಿಕಾ ಅರ್ಧ ಸತ್ಯ ಹೇಳುತ್ತಾಳೆ. ಇದರಿಂದ ಗೌತಮ್‌ಗೆ ಮತ್ತಷ್ಟು ಅನುಮಾನ ಶುರುವಾಗಿದೆ.
ತನ್ನ ಮನೆಯಲ್ಲಿರೋದ ಭೂಮಿಕಾ ಎಂದು ತಿಳಿದಿರೋ ಗೌತಮ್, ಪತ್ನಿಯಲ್ಲಾದ ಬದಲಾವಣೆಗೆ ಕಾರಣ ಏನು ಎಂದು ತಿಳಿದುಕೊಳ್ಳಲು ಮುಂದಾಗಿದ್ದಾನೆ. ಇತ್ತ ಗೌತಮ್ ಸಹಾಯಕ್ಕೆ ಸೋದರ ಪಾರ್ಥ ಸಹ ಕೈ ಜೋಡಿಸಿದ್ದಾನೆ. ಇಬ್ಬರು ಪ್ಲಾನ್ ಮಾಡಿಕೊಂಡು ಜ್ಯೂಸ್‌ನಲ್ಲಿ ಮದ್ಯ ಸೇರಿಸಲು ಮುಂದಾಗಿದ್ದಾರೆ.
25
ಎಣ್ಣೆ ಪಾರ್ಟಿ ಆಯೋಜಿಸಿದ ಗೌತಮ್ ದಿವಾನ್
ಹಳೆಯ ಘಟನಗಳು ನೆನಪಿಗೆ ತೆಗೆದುಕೊಂಡು ಬರುವ ಉದ್ದೇಶದಿಂದ ಗೆಳೆಯ ಆನಂದ್ ಮನೆಯಲ್ಲಿ ಗೌತಮ್ ಎಣ್ಣೆ ಪಾರ್ಟಿ ಆಯೋಜನೆ ಮಾಡಿದ್ದಾನೆ. ಈ ಸಮಯದಲ್ಲಿ ಭೂಮಿಕಾ ಕುಡಿಯುವ ಜ್ಯೂಸ್‌ನಲ್ಲಿ ಮದ್ಯವನ್ನು ಮಿಕ್ಸ್ ಮಾಡಿದ್ದಾನೆ.
35
ಪಾರ್ಟಿಗೆ ಬರಲಿಲ್ಲ ಮಲ್ಲಿ ಮತ್ತು ಜೀವ
ಗೌತಮ್ ಆಯೋಜಿಸಿರುವ ಪಾರ್ಟಿಯಲ್ಲಿ ಆನಂದ್ ಪತ್ನಿ, ಪಾರ್ಥ, ಸುಧಾ, ಸುಧಾ ಗಂಡ, ಮಹಿಮಾ ಭಾಗಿಯಾಗಿದ್ದಾರೆ. ಆದ್ರೆ ಈ ಪಾರ್ಟಿಯಲ್ಲಿರುವ ಯಾವ ಸದಸ್ಯರಿಗೂ ಮನೆಯಲ್ಲಿರೋದು ದೀಪಿಕಾ ಎಂಬ ಸತ್ಯ ಗೊತ್ತಿಲ್ಲ. ಈ ವಿಷಯ ತಿಳಿದಿರೋ ಜೀವ ಮತ್ತು ಮಲ್ಲಿ ಪಾರ್ಟಿಗೆ ಬಂದಿಲ್ಲ.
ಇದೀಗ ಅಂದುಕೊಂಡಂತೆ ಭೂಮಿಕಾಗೆ ಮದ್ಯ ಮಿಶ್ರಿತ ಜ್ಯೂಸ್ ಕುಡಿಸಿದ್ದಾರೆ. ಈ ವೇಳೆ ತನಗೆ ಯಾವುದೇ ಅಪಘಾತ ಆಗಿರಲಿಲ್ಲ ಎಂಬ ಸತ್ಯವನ್ನು ಹೇಳಿದ್ದಾಳೆ. ಹಾಗೆಯೇ ಜೈದೇವ್‌ನನ್ನು ನಾನು ಮನೆಗೆ ಕರೆದುಕೊಂಡು ಬಂದಿಲ್ಲ. ಅವರೇ ನನ್ನನ್ನು ದಿವಾನ್ ಮನೆಗೆ ಕರೆದುಕೊಂಡು ಬಂದಿರೋ ಅರ್ಧ ಸತ್ಯವನ್ನು ಭೂಮಿಕಾ ಹೇಳಿದ್ದಾಳೆ.
55
ಮತ್ತಷ್ಟು ಅನುಮಾನ
ಮೊದಲೇ ಭೂಮಿಕಾ ಮೇಲೆ ಗೌತಮ್‌ಗೆ ಸಣ್ಣದಾದ ಅನುಮಾನವಿತ್ತು. ಇದೀಗ ನಶೆಯಲ್ಲಿ ದೀಪಿಕಾ ಹೇಳಿದ ಮಾತುಗಳು ಅಲ್ಲಿದ್ದ ಎಲ್ಲರಲ್ಲಿ ಅನುಮಾನ ಮೂಡಿಸಿದೆ. ಮತ್ತೊಂದೆಡೆ ಜೈದೇವ್ ಒಬ್ಬ ಕೆಡಿ ಅನ್ನೋದು ಗೊತ್ತಿದೆ. ಬದಲಾಗಿದ್ದೇನೆ ಎಂದು ನಟಿಸಿಸುತ್ತಿರೋ ಶಕುಂತಲಾ ಮುಖವಾಡ ಯಾವಾಗ ಕಳಚಿ ಬೀಳಲಿದೆ ಎಂಬುವುದು ಕುತೂಹಲ ಮೂಡಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.