ಸರಿಗಮಪ ಖ್ಯಾತಿಯ ಜನಪದ ಗಾಯಕ ಬಾಳು ಬೆಳಗುಂದಿ ಅವರು ಬೆಳಗಾವಿಯ ಯರಗಟ್ಟಿಯಲ್ಲಿ 'ಮ್ಯಾಚ್ ಬಾಕ್ಸ್' ಎಂಬ ಹೊಸ ಬಟ್ಟೆ ಶೋರೂಂ ಆರಂಭಿಸಿದ್ದಾರೆ. ಈ ಉದ್ಘಾಟನಾ ಸಮಾರಂಭಕ್ಕೆ ಹನುಮಂತ ಲಮಾಣಿ ಸೇರಿದಂತೆ ಉತ್ತರ ಕರ್ನಾಟಕದ 9 ಜನ ಗಾಯಕರು ಆಗಮಿಸಿದ್ದರು.
ಸರಿಗಮಪ ಖ್ಯಾತಿಯ ಗಾಯಕ ಹಾಗೂ ಉತ್ತರ ಕರ್ನಾಟಕ ಶೈಲಿಯ ಜನಪದ ಗಾಯಕ ಬಾಳು ಬೆಳಗುಂದಿ ಅವರು ಸ್ವಂತವಾಗಿ ಬಟ್ಟೆ ಅಂಗಡಿ ಉದ್ಯಮವೊಂದನ್ನು ಆರಂಭಿಸಿದ್ದಾರೆ. ಇದಕ್ಕೆ ಬಿಗ್ ಬಾಸ್ ವಿಜೇತ ಹನುಮಂತ ಲಮಾಣಿ, ಬಿಗ್ ಬಾಸ್ ಖ್ಯಾತಿಯ ಮಾಳು ನಿಪನಾಳ, ಜನಪದ ಗಾಯಕ ಬೊಂಬಾಟ್ ಬಸಣ್ಣ, ಶಿವಕಾಂತ ಪೂಜಾರಿ, ಮುತ್ತು ಹಳ್ಯಾಳ ಸೇರಿದಂತೆ ಉತ್ತರ ಕರ್ನಾಟಕದ 9 ಜನ ಗಾಯಕರನ್ನು ಆಹ್ವಾನಿಸಿ ಅವರಿಂದ ತಮ್ಮ ಬಟ್ಟೆ ಶೋರೂಂ ಅನ್ನು ಉದ್ಘಾಟನೆ ಮಾಡಿದ್ದಾರೆ.
25
ಬೆಳಗಾವಿ ಜಿಲ್ಲೆಯ ಯರಗಟ್ಟಿಯಲ್ಲಿ ಬಾಗಲಕೋಟೆ ರಸ್ತೆಯ ಸತ್ತಿಗೇರಿ ಕ್ರಾಸ್‌ನಲ್ಲಿ ಸುಮಾರು ಎರಡು ಮಳಿಗೆಯ ದೊಡ್ಡ ಬಟ್ಟೆ ಶೋ ರೂಂ ಒಂದನ್ನು ಆರಂಭಿಸಿದ್ದಾರೆ. ಇದಕ್ಕೆ ಮ್ಯಾಚ್ ಬಾಕ್ಸ್ ಎಂದು ನಾಮಕರಣ ಮಾಡಿದ್ದು, ಕಡ್ಡಿಪೆಟ್ಟಿಗೆ ಮೇಲೆ ಇರುತ್ತಿದ್ದ ಚಿತ್ರ ಅಳಿಲು ಅನ್ನು ತಮ್ಮ ಶೋ ರೂಂ ಲಾಂಛನವಾಗಿ ಇಟ್ಟುಕೊಂಡಿದ್ದಾರೆ. ಇದು ರೆಡಿಮೇಡ್ ಬಟ್ಟೆ ಶೋ ರೂಂ ಆಗಿದ್ದನ್ನು, ಮುಂದಿನ ದಿನಗಳಲ್ಲಿ ಮತ್ತಷ್ಟು ವಿಸ್ತರಣೆ ಮಾಡುವ ಉದ್ದೇಶವನ್ನು ಹೊಂದಿದ್ದಾರೆ.
35
ಮ್ಯಾಚ್ ಬಾಕ್ಸ್ ಬಟ್ಟೆ ಶೋ ರೂಂ ಉದ್ಘಾಟನೆಗೆ ಉತ್ತರ ಕರ್ನಾಟಕದ ಬಹುತೇಕ ಗಾಯಕರನ್ನು ಆಹ್ವಾನಿಸಿದ್ದು, ಇದಕ್ಕಾಗಿ ಒಂದು ವೇದಿಕೆಯನ್ನೇ ಸಿದ್ಧಪಡಿಸಲಾಗಿತ್ತು. ಎಲ್ಲ ಗಾಯಕರು ಒಮ್ಮೆಲೆ ಯರಗಟ್ಟಿಗೆ ಆಗಮಿಸಿದ್ದರಿಂದ ಅವರನ್ನು ನೋಡುವುದಕ್ಕೆ ದೊಡ್ಡ ಪ್ರಮಾಣದಲ್ಲಿ ಜನರು ಸೇರಿದ್ದರು. ಒಂದು ಊರಿನ ಜಾತ್ರೆಯಂತೆ ಜನರು ಸೇರಿದ್ದು, ಬಾಳು ಬೆಳಗುಂದಿ ಅವರ ಬಟ್ಟೆ ಶೋ ರೂಂಗೆ ಶುಭವನ್ನು ಹಾರೈಸಿದ್ದಾರೆ.
ಇದೀಗ ದುಡಿಮೆಯ ವಯಸ್ಸು, ಕೇವಲ ಗಾಯಕನಾಗಿ ಊರೂರು ಅಲೆದಾಡುತ್ತಾ ಬರುವ ಹಣದಲ್ಲಿ ಜೀವನ ಮಾಡಿಕೊಂಡು ಹೋದರೆ ಮುಪ್ಪಿನ ಕಾಲಕ್ಕೆ ಏನೂ ಉಳಿಯುವುದಿಲ್ಲ. ಈಗ ಬರುವ ನಾಲ್ಕಾರು ಕಾಸಿನಿಂದ ಸಣ್ಣದಾಗಿ ಏನಾದರೂ ಉದ್ಯಮವೊಂದನ್ನು ಆರಂಭಿಸಬೇಕು ಎಂದು ಕನಸು ಕಟ್ಟಿಕೊಂಡಿದ್ದರು. ಅವರ ಕನಸಿನ ಫಲವೇ ಮ್ಯಾಚ್ ಬಾಕ್ಸ್ ಬಟ್ಟೆ ಶೋ ರೂಂ ಆಗಿ ಹೊರಹೊಮ್ಮಿದೆ.
55
ಇನ್ನು ಬಾಳು ಬೆಳಗುಂದಿ ಅವರು ಸರಿಗಮಪ ಮೂಲಕ ರಾಜ್ಯದ ಜನತೆಗೆ ಚಿರಪರಿಚಿತರಾಗಿದ್ದರು. ಅವರ ಪತ್ನಿ ಕೂಡ ಉತ್ತರ ಕರ್ನಾಟಕ ಶೈಲಿಯ ಗಾಯಕಿಯಾಗಿದ್ದಾರೆ. ಪ್ರೀತಿಸಿ ಮದುವೆಯಾದ ಈ ಮುದ್ದಾದ ಜೋಡಿ ಇದೀಗ ಗಾಯನದಿಂದಲೇ ಜೀವನ ಕಟ್ಟಿಕೊಂಡಿದ್ದಾರೆ. ಈ ಜೋಡಿಯು ಜೀ ಕನ್ನಡದ ಮತ್ತೊಂದು ರಿಯಾಲಿಟಿ ಶೋ ಜೋಡಿ ನಂ.1 ಕಾರ್ಯಕ್ರಮದ ಸ್ಪರ್ಧಿಗಳಾಗಿಯೂ ಜನರಿಗೆ ಹತ್ತಿರವಾಗಿದ್ದರು. ಇದೀಗ ಉದ್ಯಮದ ಮೂಲಕ ಜೀವನದ ಮತ್ತೊಂದು ಮೆಟ್ಟಿಲೇರಲು ಮುಂದಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.