Amruthadhaare: ಭೂಮಿಕಾಗೆ 2 ಬಾರಿ ಕುಡಿಸಾಯ್ತು- ಈಗ ದೀಪಿಕಾ ಸರದಿ! ಬಾಯಿ ಬಿಡೋ ಟೈಮ್​ ಬಂದಾಯ್ತು

Published : Oct 24, 2026, 02:36 PM IST

ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾಳಾಗಿ ದೀಪಿಕಾ ನಟಿಸುತ್ತಿದ್ದು, ಶಕುಂತಲಾ ಎಲ್ಲವನ್ನೂ ನಿಭಾಯಿಸುತ್ತಿದ್ದಾಳೆ. ಆದರೆ ಅನುಮಾನಗೊಂಡಿರುವ ಗೌತಮ್, ಸತ್ಯ ತಿಳಿಯಲು ಆಕೆಗೆ ಮದ್ಯ ಕುಡಿಸುವ ಕೊನೆಯ ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದಾನೆ. ಇದರಿಂದ ಧಾರಾವಾಹಿ ಮುಕ್ತಾಯವಾಗಲಿದೆಯೇ ಎಂಬ ಕುತೂಹಲ ಮೂಡಿದೆ.

PREV
16
ಭೂಮಿಕಾ ಡ್ರಿಂಕ್ಸ್​

ಅಮೃತಧಾರೆ ಸೀರಿಯಲ್​ (Amruthadhaare Serial)ನಲ್ಲಿ ಇದಾಗಲೇ ಎರಡು ಬಾರಿ ಭೂಮಿಕಾಗೆ ಮದ್ಯ ಕುಡಿಸಿ ಆಗಿದೆ. ಗೌತಮ್​ ಮತ್ತು ಭೂಮಿಕಾರ ಪ್ರೇಮ ನಿವೇದನೆಗಾಗಿ ಈ ರೀತಿ ಟ್ರಿಕ್ಸ್​ ಸೀರಿಯಲ್​ನಲ್ಲಿ ಬಳಲಾಗಿದೆ. ಅಷ್ಟಕ್ಕೂ ಅಮೃತಧಾರೆ ಸೀರಿಯಲ್​​ ಮಾತ್ರವಲ್ಲ, ಇದಾಗಲೇ ಹಲವಾರು ಸೀರಿಯಲ್​ಗಳಲ್ಲಿ ಇದೇ ರೀತಿ ನಾಯಕಿಯರಿಗೆ ಮದ್ಯ ಸೇವನೆ ಮಾಡಿಸಿಯಾಗಿದೆ.

26
ಮ್ಯಾನೇಜ್​ ಮಾಡ್ತಿರೋ ಶಕುಂತಲಾ

ಈಗ ದೀಪಿಕಾ ಸರದಿ. ಏಕೆಂದರೆ, ಭೂಮಿಕಾ ಆಗಿ ದೀಪಿಕಾ ಎಂಟ್ರಿಕೊಟ್ಟಿದ್ದಾಳೆ. ಆದರೆ ಮನೆಯಲ್ಲಿ ಯಾರಿಗೂ ಇದರ ಬಗ್ಗೆ ಡೌಟ್​ ಬಂದಿಲ್ಲ. ಏಕೆಂದರೆ ಶಕುಂತಲಾ ಎಲ್ಲಾ ಮ್ಯಾನೇಜ್​ ಮಾಡುತ್ತಿದ್ದಾಳೆ. ಆ್ಯಕ್ಸಿಡೆಂಟ್​ ಆಗಿ ತಲೆಗೆ ಪೆಟ್ಟು ಬಿದ್ದಿರುವ ಹಿನ್ನೆಲೆಯಲ್ಲಿ, ಭೂಮಿಕಾ ವಿಚಿತ್ರವಾಗಿ ವರ್ತಿಸುತ್ತಿದ್ದಾಳೆ ಎಂದು ಹೇಳಿಯಾಗಿದೆ.

36
ಗೌತಮ್​ಗೆ ಏನೋ ಡೌಟ್​

ಆದರೆ, ಗೌತಮ್​ಗೆ ಏನೋ ಡೌಟ್​ ಶುರುವಾಗಿದೆ. ಆದರೆ ಆಕೆ ಭೂಮಿಕಾ ಅಲ್ಲ ಅನ್ನುವ ಸತ್ಯ ಮಾತ್ರ ಗೊತ್ತಾಗ್ತಿಲ್ಲ. ಆದ್ದರಿಂದ ಹೇಗಾದರೂ ಮಾಡಿ ಈ ಭೂಮಿಕಾಗೆ ಹಿಂದಿನದ್ದನ್ನೆಲ್ಲಾ ನೆನಪು ಮಾಡಿಸಬೇಕು ಎಂದುಕೊಂಡಿದ್ದಾನೆ.

46
ಜೀವಾ ಸಾಥ್​

ಅದಕ್ಕೆ ಜೀವಾ ಸಾಥ್​ ಕೊಟ್ಟಿದ್ದಾನೆ. ಹೀಗೆ ಮಾಡಬೇಕು ಎಂದರೆ ಭೂಮಿಕಾಗೆ ಡ್ರಿಂಕ್ಸ್​ನಲ್ಲಿ ಏನಾದ್ರೂ ಮಿಕ್ಸ್​ ಮಾಡಿ ಕೊಡಬೇಕು ಎನ್ನೋದು ಪ್ಲ್ಯಾನ್​.

56
ಕೊನೆಯ ಅಸ್ತ್ರ

ಸದ್ಯ ಇದು ಬೇಡ ಎಂದಿದ್ದಾನೆ ಗೌತಮ್​. ಆದರೆ ಭೂಮಿಕಾಗೆ ಏನೂ ನೆನಪು ಬರದೇ ಹೋದರೆ, ಕೊನೆಯ ಅಸ್ತ್ರವಾಗಿ ಅದನ್ನೇ ಮಾಡೋಣ ಅಂದಿದ್ದಾನೆ.

66
ಸೀರಿಯಲ್​ ಮುಕ್ತಾಯ?

ಅಲ್ಲಿಗೆ ಈಗ ದೀಪಿಕಾಗೂ ಡ್ರಿಂಕ್ಸ್ ಕುಡಿಸೋ ಟೈಮ್​ ಬಂದಾಯ್ತು. ಅಲ್ಲಿಗೆ ಅವಳು ಎಲ್ಲಾ ಸತ್ಯವನ್ನೂ ಹೊರಕ್ಕೆ ಹಾಕುವ ಟೈಮೂ ಬಂದಾಯ್ತು ಎಂದಾಯ್ತು. ಇಷ್ಟಾದರೆ ಅಲ್ಲಿಗೆ ಸೀರಿಯಲ್​ ಮುಕ್ತಾಯವಾದಂತೆ!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories