ಜೀ ಕನ್ನಡದ ಅಮೃತಧಾರೆ ಧಾರಾವಾಹಿಯಲ್ಲಿ, ಗೌತಮ್ ತನ್ನ ಮಗಳು ಮಿಂಚು ಎಂದು ಹೇಳಿಕೊಂಡು ಬಂದ ನಕಲಿ ಪೋಷಕರಿಗೆ ಡಿಎನ್‌ಎ ಪರೀಕ್ಷೆಯ ಸವಾಲು ಹಾಕಿದ್ದಾನೆ. ಈ ಸತ್ಯ ಬಯಲಾದರೆ ಜೈದೇವ್‌ನ ನಿಜಬಣ್ಣ ಬಯಲಾಗಲಿದ್ದು, ಮಿಂಚು ತಮ್ಮದೇ ಮಗಳು ಎಂಬ ಸತ್ಯ ಭೂಮಿಕಾಗೆ ತಿಳಿಯಬೇಕಿದೆ.
ಜೀ ಕನ್ನಡದ ಅಮೃತಧಾರೆ ಸೀರಿಯಲ್‌ನಲ್ಲಿ ಮಹಾಸತ್ಯದ ಸ್ಪೋಟ ಅನಾವರಣಗೊಳ್ಳುತ್ತಿದೆ. ಮಗಳೇ ಅಂತ ಬಂದ ಜೋಡಿಗೆ ಗೌತಮ್ ಬಿಗ್ ಶಾಕ್ ನೀಡಿದ್ದು, ಡಿಎನ್‌ಎ ಪರೀಕ್ಷೆ ಮಾಡುವಂತೆ ಸವಾಲು ಹಾಕಿದ್ದಾನೆ. ಅಪಾಯದಲ್ಲಿದ್ದ ಮಗಳು ಮಿಂಚು ಸುರಕ್ಷಿತವಾಗಿ ಭೂಮಿಕಾ ಮಡಿಲು ಸೇರಿದ್ದಾಳೆ. ಮಿಂಚು ತನ್ನ ಒಡಲಿನ ಸತ್ಯ ಎಂಬುವುದು ಭೂಮಿಕಾಗೆ ಗೊತ್ತಾಗಬೇಕಿದೆ.
25
ಮಿಂಚು ಜನ್ಮರಹಸ್ಯ
ಮಿಂಚು ಜನ್ಮರಹಸ್ಯ ತಿಳಿದಿರುವ ಲಕ್ಷ್ಮೀಕಾಂತ್‌ನನ್ನು ಜೈದೇವ್ ಬಂಧಿಸಿಟ್ಟಿದ್ದಾನೆ. ಅಪಾಯದಲ್ಲಿದ್ದ ಮಗಳನ್ನು ರಕ್ಷಿಸಲು ಭೂಮಿಕಾ ಚಾಮುಂಡಿಯಾಗಿ ಬದಲಾಗಿ, ಅಪಹರಣಕಾರರನ್ನು ಹೊಡೆದುರುಳಿಸಿದ್ದನು. ಮಿಂಚು ಕಿಡ್ನ್ಯಾಪ್ ಆಗಿದ್ದರಿಂದ ಗೌತಮ್ ಸಹ ಜೈಲಿನಿಂದ ಹೊರ ಬಂದಿದ್ದಾನೆ.
35
ನಕಲಿ ಅಪ್ಪ-ಅಮ್ಮ
ಇತ್ತ ಮಿಂಚು ಬರುತ್ತಿದ್ದಂತೆ ನಮ್ಮ ಮಗಳನ್ನು ನಮ್ಮೊಂದಿಗೆ ಕಳುಹಿಸುವಂತೆ ನಕಲಿ ಅಪ್ಪ-ಅಮ್ಮ ಹೇಳಿದ್ದಾರೆ. ಆದ್ರೆ ಗೌತಮ್, ಮಗಳು ಮಿಂಚು ಎಲ್ಲಿಗೂ ಬರಲ್ಲ. ನಮ್ಮ ಜೊತೆಯಲ್ಲಿಯೇ ಇರುತ್ತಾಳೆ ಎಂದು ಹೇಳುತ್ತಾನೆ. ಈ ವೇಳೆ ಮಧ್ಯ ಪ್ರವೇಶಿಸಿದ ಪೊಲೀಸರು, ಮಿಂಚು ನಿಮ್ಮ ಮಗಳು ಅನ್ನೋದಕ್ಕೆ ಸಾಕ್ಷಿ ಏನು ಎಂದು ಪ್ರಶ್ನೆ ಮಾಡುತ್ತಾರೆ. ಇದಕ್ಕೆ ಗೌತಮ್, ಡಿಎನ್‌ಎ ಟೆಸ್ಟ್ ಮಾಡುವಂತೆ ಹೇಳುತ್ತಾರೆ.
ಡಿಎನ್ಎ ಟೆಸ್ಟ್ ಅಂತ ಹೇಳ್ತಿದ್ದಂತೆ ನಕಲಿ ಅಪ್ಪ-ಅಮ್ಮನ ಮುಖ ಇಂಗು ತಿಂದು ಮಂಗನಂತಾಗಿದೆ. ಈ ಇಬ್ಬರು ಸತ್ಯ ಹೇಳಿದ್ರೆ ಈ ಎಲ್ಲಾ ಘಟನೆಗಳ ಹಿಂದೆ ಜೈದೇವ್ ಇರೋದು ಗೊತ್ತಾಗಲಿದೆ. ಆನಂತರ ಜೈದೇವ್ ಬಂಧನವಾದ್ರೆ ಧಾರಾವಾಹಿ ಬಹುತೇಕ ಮುಕ್ತಾಯವಾದಂತೆ ಎಂದು ವೀಕ್ಷಕರು ಮಾತನಾಡಿಕೊಳ್ಳುತ್ತಿದ್ದಾರೆ.
55
ಮತ್ತೆ ಟ್ವಿಸ್ಟ್ ಕೊಡ್ತಾರಾ?
ಮತ್ತೊಂದೆಡೆ ತಂಗಿ ಮಹಿಮಾಗೆ ಮಗಳನ್ನು ದತ್ತು ನೀಡಲು ಗೌತಮ್ ಮುಂದಾಗಿದ್ದನು. ಇದೀಗ ಮಿಂಚು ತಮ್ಮ ಸ್ವಂತ ಮಗಳು ಎಂಬ ವಿಷಯ ತಿಳಿದ ಬಳಿಕವೂ ದತ್ತು ನೀಡ್ತಾರಾ ಅಥವಾ ನಿರ್ದೇಶಕರು ಕಥೆಯಲ್ಲೇನಾದ್ರೂ ಮತ್ತೆ ಟ್ವಿಸ್ಟ್ ಕೊಡ್ತಾರಾ ಎಂಬವುದು ಮುಂದಿನ ಸಂಚಿಕೆಯಲ್ಲಿ ತಿಳಿಯಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.