Bigg Boss 13ರಲ್ಲಿ ಹೂವಿನ ಬಾಣದಂತೆ ವೈರಲ್​ ಹುಡುಗಿ? ಲೈವ್​ ಬಂದು ನಿತ್ಯಶ್ರೀ ಹೇಳಿದ್ದೇನು

Published : Jun 08, 2026, 11:04 PM IST

'ಹೂವಿನ ಬಾಣದಂತೆ' ಹಾಡಿನಿಂದ ವೈರಲ್ ಆದ ಮೈಸೂರಿನ ನಿತ್ಯಶ್ರೀ, ಇದೀಗ ಬಿಗ್ ಬಾಸ್ 13ಕ್ಕೆ ಪ್ರವೇಶಿಸಲು ಸಿದ್ಧರಾಗಿದ್ದಾರೆ. ತಮಗೆ ಗೊತ್ತಿಲ್ಲದೆ ವೈರಲ್ ಆದ ಹಾಡಿನಿಂದ ಎದುರಾದ ಟ್ರೋಲ್‌ಗಳಿಗೆ ಬೇಸತ್ತು, ತಾನು ಯಾರೆಂದು ಸಾಬೀತುಪಡಿಸಲು ಈ ವೇದಿಕೆಯನ್ನು ಬಳಸಿಕೊಳ್ಳಲು ಬಯಸಿದ್ದಾರೆ.

PREV
16
ಹೂವಿನ ಬಾಣದಂತೆ ಹುಡುಗಿ

ಗಾಯಕಿ ಶ್ರೇಯಾ ಘೋಷಲ್​ ಅವರ ಹೂವಿನ ಬಾಣದಂತೆ ಹಾಡನ್ನು ಫ್ರೆಂಡ್ಸ್​ಗಾಗಿ ಅಪಶ್ರುತಿಯಲ್ಲಿ ಹಾಡಿ ರಾತ್ರೋ ರಾತ್ರಿ ಫೇಮಸ್​ ಆದವರು ಮೈಸೂರಿನ ವೈರಲ್​ ಹುಡುಗಿ ನಿತ್ಯಶ್ರೀ. ಅವರೇನೂ ವೈರಲ್​ ಆಗಲಿ ಎಂದು ಹಾಡಿದವರಲ್ಲ. ಸುಖಾಸುಮ್ಮನೆ ಅವರ ಪಾಡಿಗೆ ಅವರು ಇದ್ದರು. ಆದರೆ ಕೆಲವೊಮ್ಮೆ ಅದೃಷ್ಟ ಬಂದರೆ, ಯಾರಾದರೇನೂ ಲಾಟರಿ ಹೊಡೆಯುತ್ತದೆ ಎನ್ನುವಂತೆ ನಿತ್ಯಶ್ರೀ ಅವರು ಸೋಷಿಯಲ್​ ಮೀಡಿಯಾ ಸೆನ್ಸೇಷನ್​ ಆದರು. ಹಲವರು ತಮ್ಮ ಕಾರ್ಯಕ್ರಮಗಳಿಗೆ ಈಕೆಯನ್ನು ಆಹ್ವಾನಿಸಿದರು. ಈಕೆಯನ್ನು ರಾತ್ರೋರಾತ್ರಿ ಸೆಲೆಬ್ರಿಟಿಯನ್ನಾಗಿ ಮಾಡಿದ್ದು ಇದೇ ನೆಟ್ಟಿಗರು ಹಾಗೂ ಜನರೇ.

26
ಬಿಗ್​ಬಾಸ್​ 13ಕ್ಕೆ ಎಂಟ್ರಿ ಕೊಡಲು ರೆಡಿ

ಇದೀಗ ನಿತ್ಯಶ್ರೀ ಬಿಗ್​ಬಾಸ್​ 13ಕ್ಕೆ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ. ಈ ಬಾರಿ ಬಿಗ್​ಬಾಸ್​ ಜನಸಾಮಾನ್ಯರಿಗೂ ಅವಕಾಶ ಕಲ್ಪಿಸಿದೆ. ನೀವ್ಯಾಕೆ ಬಿಗ್​ಬಾಸ್​​ನಲ್ಲಿ ಇರಬೇಕು ಎನ್ನುವ ಬಗ್ಗೆ ವಿಡಿಯೋ ಮಾಡಿ ಕಳುಹಿಸಿ ಎಂದು ಆಫರ್​ ಕೊಟ್ಟಿದೆ. ಅದರಂತೆ ವಿಡಿಯೋ ಮಾಡಿರುವ ನಿತ್ಯಶ್ರೀ ತಮ್ಮ ಪರಿಚಯವನ್ನು ಮಾಡಿಕೊಂಡು ನಾನ್ಯಾಕೆ ಬಿಗ್​ಬಾಸ್​ಗೆ ಹೋಗಬೇಕು ಎಂದು ಹೇಳಿದ್ದಾರೆ.

36
ನನಗೆ ಗೊತ್ತಿಲ್ಲದೇ ವೈರಲ್​ ಆಯ್ತು

ನಾನು ಹಾಡಿರುವ ಹಾಡೊಂದು ನನಗೆ ಗೊತ್ತಿಲ್ಲದೇ ವೈರಲ್​ ಆಯ್ತು. ಕೆಲವೊಬ್ಬರು ತುಂಬಾ ಕೆಟ್ಟದ್ದಾಗಿ ಹಾಡಿರುವ ಬಗ್ಗೆ ಕೆಟ್ಟದ್ದಾಗಿ ಕಮೆಂಟ್ಸ್​ ಮಾಡಿದ್ರು. ನನಗೆ ಅದರಿಂದ ತುಂಬಾ ನೋವಾಯ್ತು. ನಾನೇನು ವೈರಲ್​ ಆಗಲಿ ಎಂದು ಅದನ್ನು ಹಾಡಿದ್ದಲ್ಲ ಎಂದು ನಿತ್ಯಶ್ರೀ ಹೇಳಿದ್ದಾರೆ.

46
ಸಾಬೀತು ಮಾಡಬೇಕಿದೆ

ಈಗ ನಾನೇನು ಎನ್ನುವುದನ್ನು ಸಾಬೀತು ಮಾಡಬೇಕಿದೆ. ನನಗೆ ಇಲ್ಲಿಯವರೆಗೆ ಯಾವುದೇ ವೇದಿಕೆ ಸಿಕ್ಕಿರಲಿಲ್ಲ. ಈಗ ಬಿಗ್​ಬಾಸ್​​ ಒಂದು ವೇದಿಕೆ ಕಲ್ಪಿಸಿದೆ. ಆದ್ದರಿಂದ ನಾನು ಯಾರು, ನಾನು ಏನು ಎನ್ನುವುದನ್ನು ಸಾಬೀತು ಮಾಡಲು ಬಿಗ್​ಬಾಸ್​ಗೆ ಹೋಗಬೇಕಿದ್ದು, ಅವಕಾಶ ನೀಡುವಂತೆ ನಿತ್ಯಶ್ರೀ ಕೋರಿದ್ದಾರೆ. bigg bossಗೆ ಹೋದರೆ ನನ್ನ ಲೈಫ್​ಗೆ ಟರ್ನಿಂಗ್​ ಪಾಯಿಂಟ್​ ಸಿಗುತ್ತದೆ ಎಂದಿದ್ದಾರೆ.

56
ಸ್ಯಾಂಡಲ್​ವುಡ್​ಗೆ ಎಂಟ್ರಿ?

ಅಷ್ಟಕ್ಕೂ ನಿತ್ಯಶ್ರೀ ಅವರು ಸಿನಿಮಾಕ್ಕೂ ಎಂಟ್ರಿ ಕೊಡಲಿರುವುದಾಗಿ ಈ ಹಿಂದೆ ಹೇಳಿದ್ದರು. ಆದರೆ ಅದರ ಬಗ್ಗೆ ಸದ್ಯ ಏನೂ ಅಪ್​ಡೇಟ್​ ಇಲ್ಲ. ಯಾವ ಸಿನಿಮಾ ಎಂದು ರಿವೀಲ್​ ಮಾಡಲು ಅವರು ಒಪ್ಪಲಿಲ್ಲ. ಅದರಲ್ಲಿ ಯಾವ ರೋಲ್​ ಎಂದು ಕೇಳಿದರೂ, ಆ ಬಗ್ಗೆ ನಿತ್ಯಶ್ರೀ ಹೇಳಿರಲಿಲ್ಲ. ಇದೀಗ ತಮಗೆ ಯಾವುದೇ ವೇದಿಕೆ ಸಿಗುತ್ತಿಲ್ಲ ಎಂದಿದ್ದಾರೆ.

66
ನೊಂದು ವಿಡಿಯೋ

ನಿತ್ಯಶ್ರೀ ಅವರಿಗೆ ಕಾಮಿಡಿ ಕಿಲಾಡಿ ಷೋನಲ್ಲಿ ಛಾನ್ಸ್​ ಸಿಕ್ಕಿತ್ತು. ಅದಕ್ಕಾಗಿ ಸಾಕಷ್ಟು ಮಂದಿ ಟ್ರೋಲ್​ ಮಾಡಿದ್ದರು. ತಮಗೆ ಟ್ರೋಲ್​ ಮಾಡುತ್ತಿರುವ ಬಗ್ಗೆ ಈ ಹಿಂದೆ ನೊಂದು ನಿತ್ಯಶ್ರೀ ಈಚೆಗೆ ಸೋಷಿಯಲ್​ ಮೀಡಿಯಾದಲ್ಲಿ ಲೈವ್​ ಬಂದು ಕಣ್ಣೀರಿಟ್ಟಿದ್ದರು. ನಾನು ಆ ಹಾಡನ್ನು ಕೆಟ್ಟದ್ದಾಗಿ ಹೇಳಿದ್ದೇನೆ ನಿಜ. ಅದಕ್ಕೆ ಕ್ಷಮೆಯನ್ನೂ ಕೋರಿದ್ದೇನೆ. ನೀನೇನೂ ಕ್ಷಮೆ ಕೋರುವ ಅಗತ್ಯವಿಲ್ಲ ಎಂದು ಅರ್ಜುನ್​ ಜನ್ಯ ಸರ್​ ಅವರೂ ಹೇಳಿದ್ದಾರೆ. ಇದರ ಹೊರತಾಗಿಯೂ ನನ್ನ ವಿರುದ್ಧ ಸಿಕ್ಕಾಪಟ್ಟೆ ನೆಗೆಟಿವ್​ ಕಮೆಂಟ್ಸ್​ ಬರುತ್ತಿವೆ ಎಂದು ನೊಂದಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories