14 ವರ್ಷಗಳ ಬಳಿಕ ರಾಘವೇಂದ್ರ ಸ್ವಾಮಿಗಳಾಗಿ ಮತ್ತೆ ದರ್ಶನ ಕೊಡಲಿದ್ದಾರೆ ನಟ ಪರೀಕ್ಷಿತ್

Published : Jun 08, 2026, 11:41 PM IST

ಶ್ರೀ ರಾಘವೇಂದ್ರ ಮಹಾತ್ಮೆ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಅದ್ಭುತವಾಗಿ ಮೂಡಿ ಬರುತ್ತಿದೆ. ಇದೀಗ 14 ವರ್ಷಗಳ ಬಳಿಕ ರಾಘವೇಂದ್ರ ಸ್ವಾಮಿಗಳಾಗಿ ನಟ ಪರೀಕ್ಷಿತ್ ಮತ್ತೆ ಅಭಿನಯಿಸುತ್ತಿದ್ದಾರೆ. ಈಗಾಗಲೇ ಧಾರಾವಾಹಿ ಪ್ರೊಮೋ ಬಿಡುಗಡೆಯಾಗಿದೆ. 

PREV
16
ಶ್ರೀ ರಾಘವೇಂದ್ರ ಮಹಾತ್ಮೆ

ಜೀ ಕನ್ನಡದ ಜನಪ್ರಿಯ ಧಾರಾವಾಹಿ ‘ಶ್ರೀ ರಾಘವೇಂದ್ರ ಮಹಾತ್ಮೆ’ ಧಾರಾವಾಹಿಯಲ್ಲಿ ಇದೀಗ ವೆಂಕಟನಾಥ ತಮ್ಮ ಸಂಸಾರಿಕ ಜೀವನವನ್ನು ತ್ಯಜಿಸಿ, ಗುರುಗಳ ಆಜ್ಞೆಯ ಮೇರೆಗೆ ಸನ್ಯಾಸ ಜೀವನ ನಡೆಸಲು ತಯಾರಿ ನಡೆಸಿದ್ದಾರೆ. ಸನ್ಯಾಸ ಜೀವನಕ್ಕೆ ಕಾಲಿಟ್ಟು ರಾಘವೇಂದ್ರ ಸ್ವಾಮಿಗಳು ಆಗುವ ಹೊತ್ತಿಗೆ ಪಾತ್ರಧಾರಿಯೂ ಬದಲಾಗಿದ್ದಾರೆ.

26
ಪಾತ್ರದಿಂದ ಹೊರ ಬಂದ ಶ್ರೇಯಸ್ ಕಷ್ಯಪ್

ಇಲ್ಲಿವರೆಗೆ ರಾಯರ ಪುರ್ವಾಶ್ರಮದ ಪಾತ್ರವಾದ ವೆಂಕಟನಾಥರಾಗಿ ನಟ ಶ್ರೇಯಸ್ ಕಷ್ಯಪ್ ನಟಿಸಿದ್ದರು. ಆರಂಭದಲ್ಲಿ ಜನ ಇವರನ್ನ ರಾಯರ ಪಾತ್ರದಲ್ಲಿ ನೋಡಲು ಇಷ್ಟಪಡದಿದ್ದರೂ ಅವರು ತಮ್ಮ ಪಾತ್ರಕ್ಕೆ ಜೀವ ತುಂಬಿ ನಟಿಸಿ, ಜನ ಮನದಲ್ಲಿ ವೆಂಕಟನಾಥನಾಗಿ ಭದ್ರ ಸ್ಥಾನ ಗಳಿಸಿದ್ದರು.

36
ಮತ್ತೆ ರಾಯರಾಗಿ ಬಂದ ಪರೀಕ್ಷಿತ್

ಇದೀಗ ನಟ ಪರೀಕ್ಷಿತ್ ಮತ್ತೆ ರಾಯರ ಪಾತ್ರದ ಮೂಲಕ ಕಾಣಿಸಿಕೊಳ್ಳಲಿದ್ದಾರೆ. ಅದು ಕೂಡ ಬರೋಬ್ಬರಿ 14 ವರ್ಷಗಳ ಬಳಿಕ. ಈ ಹಿಂದೆ ಪರೀಕ್ಷಿತ್ ಸ್ಟಾರ್ ಸುವರ್ಣ ವಾಹಿನಿಯ ‘ರಾಘವೇಂದ್ರ ವೈಭವ’ ಧಾರಾವಾಹಿಯಲ್ಲಿ ರಾಯರ ಪಾತ್ರದಲ್ಲಿ ನಟಿಸಿದ್ದರು. ಈ ನಟನಲ್ಲಿ ಜನ ಸ್ವಾಮಿಗಳನ್ನೇ ಕಂಡಿದ್ದರು.

46
ಶ್ರೀ ರಾಘವೇಂದ್ರ ಮಹಾತ್ಮೆಯಲ್ಲಿ ವ್ಯಾಸರಾಯರಾಗಿದ್ದ ನಟ

‘ ಶ್ರೀ ರಾಘವೇಂದ್ರ ಮಹಾತ್ಮೆ’ ಧಾರಾವಾಹಿಯ ಆರಂಭದಲ್ಲಿ ಪರೀಕ್ಷಿತ್ ವೆಂಕಟನಾಥರ ಗುರು ‘ವ್ಯಾಸರಾಯರ’ ಪಾತ್ರದಲ್ಲಿ ನಟಿಸಿದ್ದರು. ಇದೀಗ ಇದೇ ಧಾರಾವಾಹಿಯಲ್ಲಿ ಮತ್ತೆ ರಾಘವೇಂದ್ರ ಸ್ವಾಮಿಗಳಾಗಿ ಪರೀಕ್ಷಿತ್ ನಟಿಸುತ್ತಿದ್ದಾರೆ.

56
2012 ರಿಂದ 2026ರವರೆಗಿನ ಜರ್ನಿ

ಪರೀಕ್ಷಿತ್ 2012ರಲ್ಲಿ ‘ರಾಘವೇಂದ್ರ ವೈಭವ’ ಧಾರಾವಾಹಿಯಲ್ಲಿ ತಮ್ಮ ನಟನೆಯ ಮೂಲಕ ಜನರು ಮೂಕಸ್ಮಿತರಾಗುವಂತೆ ಮಾಡಿದ್ದರು. ಪರೀಕ್ಷಿತ್ ಮುಖದಲ್ಲಿ ದೈವೀಕ ಕಳೆ ಇದೀಗ 14 ವರ್ಷಗಳ ಬಳಿಕ ‘ ಶ್ರೀ ರಾಘವೇಂದ್ರ ಮಹಾತ್ಮೆ’ಯಲ್ಲೂ ರಾಯರ ಪಾತ್ರವನ್ನೆ ಮಾಡುವಂತಹ ಅದೃಷ್ಟವನ್ನು ಹೊತ್ತು ತಂದಿದೆ.

66
ವೀಕ್ಷಕರ ಸಂಭ್ರಮ

ವೀಕ್ಷಕರು ಆರಂಭದಲ್ಲೇ ರಾಯರ ಪಾತ್ರದಲ್ಲಿ ಪರೀಕ್ಷಿತ್ ಅವರನ್ನು ನೋಡಲು ಬಯಸಿದ್ದರು. ಇದೀಗ ವೀಕ್ಷಕರು ಬಯಸಿದಂತೆ ಮತ್ತೆ ಪರೀಕ್ಷಿತ್ ಅವರನ್ನು ರಾಯರ ರೂಪದಲ್ಲಿ ಕಂಡು, ಸಂಭ್ರಮಿಸಿದ್ದಾರೆ ಜನ. ಇವರು ಈ ಪಾತ್ರಕ್ಕೆ ಬಂದಿದ್ದು ರಾಯರನ್ನೇ ನೋಡಿದಂತಾಯ್ತು, ಮತ್ತೆ ನಿಮ್ಮನ್ನು ರಾಘವೇಂದ್ರ ಸ್ವರೂಪರಾಗಿ ನೋಡುವ ಸೌಭಾಗ್ಯ, ಎರಡು ಬಾರಿ ರಾಘವೇಂದ್ರ ಸ್ವಾಮಿಗಳಾಗುವ ಪುಣ್ಯ ಸಿಕ್ಕಿದೆ, ಇದು ವಾಹಿನಿಯ ಅತ್ಯುತ್ತಮ ನಿರ್ಧಾರ ಎಂದಿದ್ದಾರೆ ಜನ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories