ಜೀ ಕುಟುಂಬ ಪ್ರಶಸ್ತಿ ಸಮಾರಂಭಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದ ಸಂಸದ ಯದುವೀರ್ ಒಡೆಯರ್, ವೇದಿಕೆಯ ಮೇಲೆ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿದರು. ಇದೇ ವೇಳೆ ಅವರು 'ಕರ್ಣ' ಧಾರಾವಾಹಿಯ ನಟ ಕಿರಣ್ ರಾಜ್ ಅವರಿಗೆ ಜನಪ್ರಿಯ ನಟ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಿದರು.
ಸಂಸದ ರಾಜವಂಶಸ್ಥ ಯದುವೀರ್ ಒಡೆಯರ್ ಮಕ್ಕಳ ಪ್ರಶ್ನೆಗಳಿಗೆ ಸಮಚಿತ್ತದಿಂದ ಉತ್ತರಿಸಿದ್ದಾರೆ. ಜೀ ಕುಟುಂಬ ಪ್ರಶಸ್ತಿ ಸಮಾರಂಭಕ್ಕೆ ವಿಶೇಷ ಅತಿಥಿಯಾಗಿ ಯದುವೀರ್ ಒಡೆಯುರ್ ಆಗಮಿಸಿದ್ದರು. ಈ ವೇಳೆ ವೇದಿಕೆ ಮೇಲೆ ಮಕ್ಕಳ ಪ್ರಶ್ನೆಗಳಿಗೆ ಯದುವೀರ್ ಒಡೆಯರ್ ಉತ್ತರ ನೀಡಿದ್ದಾರೆ
25
ನೀವು ಮಹಾರಾಜರು ಅಲ್ಲವಾ?
ನಾ ನಿನ್ನ ಬಿಡಲಾರೆ ಸೀರಿಯಲ್‌ನ ಹಿತಾ, ನೀವು ಮಹಾರಾಜರು ಅಲ್ಲವಾ? ನಿಮ್ಮ ಮಗ ಏನೇ ಕೇಳಿದರೆ ತಕ್ಷಣವೇ ಕೊಡ್ತೀರಾ ಎಂದು ಕೇಳಿದ್ದಾರೆ. ತಕ್ಷಣ ಕೊಟ್ಟರೆ ಮುಂದೆ ನನಗೆ ಕಷ್ಟವಾಗುತ್ತದೆ. ಹಾಗಾಗಿ ನಾನು ಸಹ ಕೊಡಲ್ಲ ಎಂದು ಯದುವೀರ್ ಒಡೆಯರ್ ಹೇಳಿದ್ದಾರೆ.
35
ಜನಪ್ರಿಯ ನಟ ಪ್ರಶಸ್ತಿ
ಈ ವರ್ಷದ ಜೀ ಕುಟುಂಬದ ಜನಪ್ರಿಯ ನಟ ಪ್ರಶಸ್ತಿ, ಕರ್ಣ ಧಾರಾವಾಹಿಯ ಕಿರಣ್ ರಾಜ್ ಪಡೆದುಕೊಂಡಿದ್ದಾರೆ. ಯದುವೀರ್ ಒಡೆಯರ್ ವಿಜೇತರ ಹೆಸರು ಘೋಷಿಸಿ ನಟ ಕಿರಣ್ ರಾಜ್ ಅವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಕರ್ಣ ಸೀರಿಯಲ್ ಉತ್ತಮ ಟಿಆರ್‌ಪಿ ಪಡೆಯುವ ಮೂಲಕ ನಂಬರ್ ಒನ್ ಧಾರಾವಾಹಿಯಾಗಿದೆ.
ಇದೇ ಪ್ರೋಮೋದಲ್ಲಿ ಕಿರಣ್ ರಾಜ್, ತಮ್ಮ ಫೌಂಡೇಶನ್ ಮೂಲಕ ಸಮಾಜಸೇವೆ ಸಲ್ಲಿಸುತ್ತಿದ್ದಾರೆ. ಕಿರಣ್ ರಾಜ್ ಫೌಂಡೇಶನ್ ಮೂಲಕ ಅನಾಥ ಆಶ್ರಮವೊಂದಕ್ಕೆ ಆಹಾರ ಸಾಮಾಗ್ರಿಗಳನ್ನು ತಲುಪಿಸಲಾಗುತ್ತದೆ. ಅನಾಥ ಆಶ್ರಮದಲ್ಲಿರುವ ಜನರು ಕಿರಣ್ ರಾಜ್ ಅವರಿಗೆ ಆಶೀರ್ವದಿಸಿದ್ದಾರೆ.
ಈ ಬಾರಿಯ ಜೀ ಕುಟುಂಬ ಪ್ರಶಸ್ತಿ ಪ್ರದಾನ ಕಾರ್ಯಕ್ರಮ (ಜೀ಼ ಕುಟುಂಬ ಅವಾರ್ಡ್ಸ್-2025 ) ಇದೇ ಶನಿವಾರ ಮತ್ತು ಭಾನುವಾರ ಸಂಜೆ 6.30ಕ್ಕೆ ಪ್ರಸಾರವಾಗಲಿದೆ. ಈಗಾಗಲೇ ಕಾರ್ಯಕ್ರಮದ ಪ್ರೋಮೋಗಳನ್ನು ವಾಹಿನಿ ಬಿಡುಗಡೆ ಮಾಡುತ್ತಿದೆ.