ಧ್ರುವಂತ್‌ಗೆ ಮಾತೇ ಮುಳ್ಳಾಯ್ತು; ಬಿಗ್‌ಬಾಸ್‌ನ Expect The Unexpected ಅಂದ್ರೆ ಇದೇ ನೋಡಿ

Published : Oct 14, 2025, 09:07 AM IST

Dhruvanth and Spandana fight: ಬಿಗ್‌ಬಾಸ್ ಸೀಸನ್ 12 ರಲ್ಲಿ, ಅರಸನಾಗಿ ಅಧಿಕಾರ ಚಲಾಯಿಸಿದ್ದ ಧ್ರುವಂತ್‌ ಮೇಲೆ ಸ್ಪಂದನಾ ಸೇಡು ತೀರಿಸಿಕೊಂಡಿದ್ದಾರೆ.  ಫೈನಲಿಸ್ಟ್ ಆಗಿರುವ ಸ್ಪಂದನಾ, ಈ ವಾರದ ಎಲ್ಲಾ ಟಾಸ್ಕ್‌ಗಳಿಂದ ಧ್ರುವಂತ್ ಅವರನ್ನು ಹೊರಗಿಡುವ ಮೂಲಕ ತಮ್ಮ ಅಧಿಕಾರವನ್ನು ಬಳಸಿದ್ದಾರೆ. 

PREV
16
ಧ್ರುವಂತ್‌ ಆಟ

ಸೀಸನ್ 12 ಮೊದಲ ಎರಡು ಬ್ಯಾಲೆನ್ಸ್‌ ಆಗಿ ಆಟವಾಡುತ್ತಿದ್ದ, ವೀಕೆಂಡ್ ಎಪಿಸೋಡ್ ಮುಗಿದ ಮರುದಿನವೇ ಧ್ರುವಂತ್‌ ತಮ್ಮ ಮೊದಲ ಬಾರಿ ಅರಸನ ಪವರ್ ಚಲಾಯಿಸಲು ಆರಂಭಿಸಿದ್ದರು. ಒಂಟಿಗಳಿಗೆ ಅರಸ ಮತ್ತು ಅರಸಿ ಎಂಬ ಪವರ್ ನೀಡಲಾಗಿತ್ತು. ಆದ್ರೆ ಎರಡು ವಾರ ಈ ಪವರ್ ಬಳಸದೇ ಎಲ್ಲರೊಂದಿಗೂ ಸಂಯಮದಿಂದ ಧ್ರುವಂತ್‌ ಆಟವಾಡುತ್ತಿದ್ದರು.

26
ಅರಸನ ಪವರ್

ಮೊದಲ ಬಾರಿ ಜಂಟಿಗಳಾಗಿದ್ದ ಸ್ಪಂದನಾ ಮತ್ತು ಮಾಳು ಮೇಲೆ ಅರಸನ ಪವರ್ ಚಲಾಯಿಸಿದ್ದರು. ಇದು ಸ್ಪಂದನಾ ಮತ್ತು ಧ್ರುವಂತ್‌ ಜಗಳಕ್ಕೆ ಕಾರಣವಾಗಿತ್ತು. ಇದಾದ ಬಳಿಕ ಬಿಗ್‌ಬಾಸ್ ಜಂಟಿ ಸ್ಪರ್ಧಿಗಳನ್ನು ಬಂಧನದಿಂದ ಮುಕ್ತ ಮಾಡಿದ್ದರು. ಈಗ ತಾನೇ ಧ್ರುವಂತ್‌ ಮೈಲೇಜ್ ತೆಗೆದುಕೊಳ್ಳುತ್ತಿದ್ರ. ಅರಸ/ಸಿ ಮತ್ತು ಜಂಟಿ ಕಾನ್ಸೆಪ್ಟ್ ಕ್ಯಾನ್ಸಲ್ ಮಾಡಿದ್ದು ಯಾಕೆ ಬಿಗ್‌ಬಾಸ್ ಎಂದು ಗಿಲ್ಲಿ ತಮಾಷೆ ಮಾಡಿದ್ದರು.

36
ಮಾತೇ ಮುಳ್ಳಾಯ್ತು

ಇದೀಗ ಸ್ಪಂದನಾ ಜೊತೆ ಮಾಡಿಕೊಂಡ ಜಗಳವೇ ಧ್ರುವಂತ್‌ಗೆ ಮುಳ್ಳಾಗಿದೆ. ಇಂದು ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಈ ವಾರದ ಎಲ್ಲಾ ಟಾಸ್ಕ್‌ಗಳಿಂದ ಧೃವಂತ್ ಅವರನ್ನು ಸ್ಪಂದನಾ ಹೊರಗೆ ಇರಿಸಿದ್ದಾರೆ. ಜನತೆ ವೋಟ್ ಆಧಾರದ ಮೇಲೆ ಸ್ಪಂದನಾ ಮತ್ತು ಮಾಳು ಫೈನಲಿಸ್ಟ್ ಆಗಿ ಆಯ್ಕೆಯಾಗಿದ್ದಾರೆ.

46
ಎಲ್ಲಾ ಟಾಸ್ಕ್‌

ಅಶ್ವಿನಿ ಗೌಡ, ಕಾಕ್ರೋಚ್ ಸುಧಿ, ಸ್ಪಂದನಾ ಸೋಮಣ್ಣ ಮತ್ತು ಮಾಳು ನಿಪನಾಳ ಹೊರತುಪಡಿಸಿ ಇನ್ನುಳಿದ ಎಲ್ಲಾ ಸ್ಪರ್ಧಿಗಳು ನೇರವಾಗಿ ನಾಮಿನೇಟ್ ಆಗಿದ್ದಾರೆ. ನಾಮಿನೇಷನ್‌ನಿಂದ ಸೇವ್ ಆಗಲು ಸ್ಪರ್ಧಿಗಳು ಸಿಗುವ ಎಲ್ಲಾ ಅವಕಾಶಗಳನ್ನು ಬಳಸಿಕೊಳ್ಳಬೇಕು. ಆದ್ರೆ ಧ್ರುವಂತ್‌ ಅವರನ್ನು ಎಲ್ಲಾ ಟಾಸ್ಕ್‌ಗಳಿಂದ ಹೊರಗಿಡುವ ಕೆಲಸವನ್ನು ಸ್ಪಂದನಾ ಮಾಡಿದ್ದಾರೆ.

56
ನೆಟ್ಟಿಗರು ಹೇಳಿದ್ದೇನು?

ಇಂದಿನ ಪ್ರೋಮೋವನ್ನು ಮಾತಿಗೆ ಸ್ಪಂದಿಸಿದ್ದೇ ತಪ್ಪಾಯ್ತಾ? ಟಾಸ್ಕ್‌ಗಳಿಂದ ಧ್ರುವಂತ್ ಬ್ಲಾಕ್! ಶೀರ್ಷಿಕೆಯಡಿಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಪ್ರೋಮೋ ನೋಡಿದ ನೆಟ್ಟಿಗರು, ಮುಂದಿನ ವಾರ ಫೈನಲ್ ಲಿಸ್ಟ್ ಆಗಿರುವ ಸ್ಪಂದನಾ ಮನೆಯಿಂದ ಔಟ್ ಆಗ್ಲಿ. ಅವಳಿಗ ತುಂಬಾ ದುರಂಹಕಾರ. ಅವಳು ಹಾಕುವ ತುಂಡುಬಟ್ಟೆ ಕೂಡ ನೋಡೋದಕ್ಕೆ ಅಸಹ್ಯವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:  ನಮ್ಮನೇಲಿ ನನ್ ಹೆಂಡ್ತಿ ನ್ಯೂಸ್ ನೋಡಲ್ಲ, ಬಿಗ್ ಬಾಸ್ ನೋಡ್ತಾರೆ; ಡಿ.ಕೆ. ಶಿವಕುಮಾರ್

66
ಆಟದ ಗೊಡವೆಯೇ ಅವರಿಗಿಲ್ಲ

ಅರುಣಾ ಎಂಬವರು ಕಮೆಂಟ್ ಮಾಡಿ ಪರಸ್ಪರ ಸೇಡು ತೀರಿಸಿ ಕುಹಕ ನಗು. ಅವಸ್ಥೆಯೇ ಇವರದ್ದು. ಬಿಗ್ಬಾಸ್ ಕೆಲವರಿಗೆ ಅಧಿಕಾರ ಕೊಡುವುದು. ಅವರವರಿಗೆ ಬೇಕಾದ ಹಾಗೆ, ಅವರಿಗಾಗದವರಿಗೆ ಅನ್ಯಾಯ ಮಾಡುವುದು. ಆಟದ ಗೊಡವೆಯೇ ಅವರಿಗಿಲ್ಲ. ಹೇಳಿ ಸುಖವಿಲ್ಲ ಎಂದು ಹೇಳಿದ್ದಾರೆ. ಮತ್ತೊಬ್ಬರು ನಿನ್ನೆ ಧ್ರುವಂತ್‌ ಅವರದ್ದು ಅತಿಯಾಗಿತ್ತು. ಸ್ಪಂದನಾ ಮತ್ತು ಮಾಳುಗೆ ತಾನೇ ಸೇವ್ ಮಾಡಿದ ಹಾಗೆ ವರ್ತಿಸಿದ್ದು ಸರಿ ಇರಲಿಲ್ಲ ಎಂದು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ:  ವೀಕ್ಷಕರ ಎಲ್ಲಾ ನಿರೀಕ್ಷೆಗಳನ್ನು ಸುಳ್ಳು ಮಾಡಿದ ಲಕ್ಷ್ಮೀ ನಿವಾಸ ಸೀರಿಯಲ್ ನಿರ್ದೇಶಕರು

Read more Photos on
click me!

Recommended Stories